Saturday, July 27, 2024
Homeರಾಜ್ಯರಾಜ್ಯದಲ್ಲಿ ನಿರಂತರ ಮಳೆ, ಬರದಿಂದ ಕಂಗೆಟ್ಟಿದ್ದ ರೈತರಲ್ಲಿ ಹರ್ಷ

ರಾಜ್ಯದಲ್ಲಿ ನಿರಂತರ ಮಳೆ, ಬರದಿಂದ ಕಂಗೆಟ್ಟಿದ್ದ ರೈತರಲ್ಲಿ ಹರ್ಷ

ಬೆಂಗಳೂರು, ಜೂ.8- ಮೇ ತಿಂಗಳ ನಂತರ ರಾಜ್ಯದಲ್ಲಿ ನಿರಂತರ ಮಳೆಯಾಗುತ್ತಿದ್ದು, ಬರದಿಂದ ಕಂಗೆಟ್ಟಿದ್ದ ರೈತ ಸಮುದಾಯಕ್ಕೆ ಖುಷಿ ತಂದಂತಾಗಿದೆ. ಜೊತೆಗೆ ಪ್ರಮುಖ ಜಲಾಶಯಗಳ ಒಳ ಹರಿವು ಪ್ರಾರಂಭವಾಗಿರುವುದು ಮತ್ತಷ್ಟು ಸಂತೋಷವನ್ನು ನೀಡುತ್ತಿದೆ.

ರಾಜ್ಯದ 14 ಪ್ರಮುಖ ಜಲಾಶಯಗಳ ಪೈಕಿ ಮಲಪ್ರಭಾ ಜಲಾಶಯವನ್ನು ಹೊರತುಪಡಿಸಿ ಉಳಿದೆಲ್ಲಾ ಜಲಾಶಯಗಳ ಒಳಹರಿವು ಪ್ರಾರಂಭವಾಗಿದೆ. ನಿರೀಕ್ಷಿತ ಪ್ರಮಾಣದಲ್ಲಿ ಒಳಹರಿವು ಬಾರದಿದ್ದರೂ ಸ್ವಲ್ಪ ಪ್ರಮಾಣದ ಒಳಹರಿವು ಎಲ್ಲಾ ಜಲಾಶಯಗಳಲ್ಲಿ ಕಂಡುಬರುತ್ತಿದೆ. ಕಳೆದ ವರ್ಷದ ಮುಂಗಾರು ಮತ್ತು ಹಿಂಗಾರು ಮಳೆಯ ತೀವ್ರ ಕೊರತೆಯಿಂದ ರಾಜ್ಯ ಬರದ ಕರಾಳ ಛಾಯೆಗೆ ಸಿಲುಕಿತ್ತು. ಕಳೆದ ಬೇಸಿಗೆಯಲ್ಲಿ ಅಕ್ಷರಶಃ ಬಿಸಿಲ ನಾಡಾಗಿ ಪರಿಣಮಿಸಿತ್ತು.

ಈಗಾಗಲೇ ರಾಜ್ಯದಲ್ಲಿ ಮುಂಗಾರು ಮಳೆ ಆರಂಭವಾಗಿದ್ದು, ನಿರಂತರವಾಗಿ ಬೀಳುತ್ತಿದೆ. ಇದರಿಂದ ಕೃಷಿ ಚಟುವಟಿಕೆಗಳು ಪ್ರಾರಂಭವಾಗಿವೆ. ರಾಜ್ಯದ 14 ಪ್ರಮುಖ ಜಲಾಶಯಗಳಲ್ಲಿ 174.32 ಟಿಎಂಸಿ ಅಡಿಯಷ್ಟು ಮಾತ್ರ ನೀರಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 192.75 ಟಿಎಂಸಿ ಅಡಿಯಷ್ಟು ನೀರಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ 18 ಟಿಎಂಸಿಯಷ್ಟು ನೀರು ಕಡಿಮೆ ಸಂಗ್ರಹವಾಗಿದೆ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮಾಹಿತಿ ಪ್ರಕಾರ, 22 ಸಾವಿರ ಕ್ಯೂಸೆಕ್‌್ಸಗೂ ಹೆಚ್ಚಿನ ಒಳಹರಿವಿದೆ. 7 ಸಾವಿರಕ್ಕೂ ಹೆಚ್ಚು ಕ್ಯೂಸೆಕ್‌್ಸ ಒಳಹರಿವು ಇದೆ. ನಿರಂತರ ಮಳೆಯಾಗುತ್ತಿರುವುದರಿಂದ ಒಳಹರಿವಿನ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

ಕೃಷ್ಣಾಕೊಳ್ಳದ ತುಂಗಭದ್ರಾ ಜಲಾಶಯಕ್ಕೆ 1,400 ಕ್ಕೂ ಹೆಚ್ಚು ಕ್ಯೂಸೆಕ್‌್ಸ, ಆಲಮಟ್ಟಿಗೆ 2,500 ಕ್ಕೂ ಹೆಚ್ಚು ಕ್ಯೂಸೆಕ್ಸ್ , ನಾರಾಯಣಪುರ ಜಲಾಶಯಕ್ಕೆ 12,000 ಕ್ಕೂ ಹೆಚ್ಚು ಕ್ಯೂಸೆಕ್‌್ಸ ಒಳಹರಿವು ಇದೆ. ಒಟ್ಟಾರೆ ಕಾವೇರಿ ಜಲಾನಯನದ ಜಲಾಶಯಗಳಲ್ಲಿ 15,000 ಕ್ಯೂಸೆಕ್‌್ಸಗಿಂತಲೂ ಹೆಚ್ಚಿನ ಒಳಹರಿವಿದೆ.

ಜಲವಿದ್ಯುತ್‌ ಉತ್ಪಾದಿಸುವ ಲಿಂಗನಮಕ್ಕಿ, ಸೂಪ, ವರಾಹಿ ಜಲಾಶಯಗಳಿಗೆ 1,500 ಕ್ಕೂ ಹೆಚ್ಚು ಕ್ಯೂಸೆಕ್‌್ಸ ನೀರು ಹರಿದುಬರುತ್ತಿದೆ. ಕಾವೇರಿ ಕೊಳ್ಳದ ಹಾರಂಗಿ, ಹೇಮಾವತಿ ಜಲಾಶಯಕ್ಕೆ ಅಲ್ಪಪ್ರಮಾಣದ ಒಳಹರಿವಿದೆ. ಕೆಆರ್‌ಎಸ್‌‍ ಜಲಾಶಯಕ್ಕೆ 1,400 ಕ್ಯೂಸೆಕ್ಸ್ ಗೂ ಹೆಚ್ಚು ಒಳಹರಿವಿದ್ದರೆ ಕಬಿನಿ ಜಲಾಶಯಕ್ಕೆ 3,000 ಕ್ಕೂ ಹೆಚ್ಚು ಕ್ಯೂಸೆಕ್‌್ಸ ಒಳಹರಿವಿದೆ.

ಈ ನಾಲ್ಕೂ ಜಲಾಶಯಗಳಲ್ಲಿ 34 ಟಿಎಂಸಿ ಅಡಿಯಷ್ಟು ಮಾತ್ರ ನೀರಿದೆ. ಕಳೆದ ವರ್ಷ 33.50 ಅಡಿ ಟಿಎಂಸಿಯಷ್ಟು ನೀರಿತ್ತು. ಈ ಬಾರಿಯ ಮುಂಗಾರು ವಾಡಿಕೆ ಪ್ರಮಾಣದಲ್ಲಿ ಆಗಲಿದೆ ಎಂಬ ಮುನ್ಸೂಚನೆಯಿದೆ. ಅಲ್ಲದೆ, ಸದ್ಯಕ್ಕೆ ಇನ್ನೂ ಒಂದು ವಾರ ಮಳೆ ಬೀಳುವ ಮುನ್ಸೂಚನೆಗಳಿವೆ. ಹೀಗಾಗಿ ಒಳಹರಿವು ಪ್ರಮಾಣ ಹೆಚ್ಚಾಗುವ ನಿರೀಕ್ಷೆಯಿದೆ.

ಆದರೆ ಕೇರಳದ ವಯನಾಡು ಭಾಗದಲ್ಲಿ ಮುಂಗಾರು ಅವಧಿಗೂ ಮುನ್ನ ಆರಂಭವಾಗಿದ್ದರೂ ಈ ತನಕ ಭಾರಿ ಮಳೆಯಾಗಿಲ್ಲ. ವಯನಾಡು ಮತ್ತು ಕೊಡಗಿನ ಭಾಗದಲ್ಲಿ ಮುಂಗಾರು ಆರಂಭವಾಗಿ ಎಂಟು-ಹತ್ತು ದಿನ ಕಳೆದರೂ ಭಾರಿ ಮಳೆಯಾಗುತ್ತಿಲ್ಲ. ಆದರೆ ನಿರಂತರ ಮಳೆಯಾಗುತ್ತಿದೆ. ಇದರಿಂದ ಜಲಾಶಯದ ಒಳಹರಿವು ಹೆಚ್ಚಾಗುವ ನಿರೀಕ್ಷೆ ಇದೆ.

RELATED ARTICLES

Latest News