Wednesday, May 1, 2024
Homeಜಿಲ್ಲಾ ಸುದ್ದಿಗಳುಗ್ರಂಥಾಲಯದ ಮೇಲೆ ವಿವಾದಾತ್ಮಕ ಬರಹ, ವೈರಲ್ ಆಗುತ್ತಿದ್ದಂತೆ ಬದಲಾಯ್ತು ಘೋಷವಾಕ್ಯ

ಗ್ರಂಥಾಲಯದ ಮೇಲೆ ವಿವಾದಾತ್ಮಕ ಬರಹ, ವೈರಲ್ ಆಗುತ್ತಿದ್ದಂತೆ ಬದಲಾಯ್ತು ಘೋಷವಾಕ್ಯ

ಚಿಕ್ಕಬಳ್ಳಾಪುರ, ಏ.16- ಭಾರತ ರತ್ನ ಸರ್. ಎಂ. ವಿಶ್ವೇಶ್ವರಯ್ಯ ಅವರ ತವರು ತಾಲ್ಲೂಕಿನ ಮುದ್ದೇನಹಳ್ಳಿಯ ಗ್ರಂಥಾಲಯದ ಗೋಡೆಯ ಮೇಲೆ ಘೋಷ ವಾಕ್ಯವೊಂದು ಬರೆದಿದ್ದು ಚರ್ಚೆಗೆ ಗ್ರಾಸವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಘೋಷ ವಾಕ್ಯ ಕಾಣಿಸದಂತೆ ಇದೀಗ ಗ್ರಂಥಾಲಯದ ಗೋಡೆಮೇಲಿನ ಬರಹ ಅಳಿಸಲಾಗಿದೆ.

ಒಂದು ಮಂದಿರ ಕಟ್ಟಿಸಿದೆ ಸಾವಿರ ಬಿಕ್ಷುಕರು ಹುಟ್ಟಿಕೊಳ್ಳುತ್ತಾರೆ, ಒಂದು ಗ್ರಂಥಾಲಯ ಕಟ್ಟಿಸಿದರೆ ಲಕ್ಷಾಂತರ ವಿದ್ವಾಂಸರು ಹುಟ್ಟಿಕೊಳ್ಳುತ್ತಾರೆ ಎಂಬ ಬರಹವು ಸರ್.ಎಂ. ವಿಶ್ವೇಶ್ವರಯ್ಯ ಅವರ ಮನೆಯ ಮುಂಭಾಗದಲ್ಲಿನ ಡಿಜಿಟಲ್ ಗ್ರಂಥಾಲಯದ ಮೇಲೆ ಬರೆಯಲಾಗಿತ್ತು. ಗ್ರಂಥಾಲಯಕ್ಕೆ ಬಂದಿದ್ದ ಓದುಗರೊಬ್ಬರು ಈ ಬರಹವನ್ನು ದೇವಾಲಯ ಕಟ್ಟಿದರೆ ಬಿಕ್ಷುಕರು ಹುಟ್ಟುಕೊಳ್ಳುತ್ತಾರೆ ಎಂಬ ಬರಹ ಎಷ್ಟರಮಟ್ಟಿಗೆ ಸರಿ.

ಹಿಂದುಗಳ ಧಾರ್ಮಿಕ ಭಾವನೆಗಳಿಗೆ ಇದು ಧಕ್ಕೆ ಅಲ್ಲವೇ? ಎಂಬುದಾಗಿ ಬರೆದು ಸಾಮಾಜಿಕ ಜಾಲತಾಣದ ಮೂಲಕ ಅರಿಬಿಟ್ಟಿದ್ದು, ಬಹುತೇಕರು ಈ ಬರಹದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ಸಂಬಂಧಿಸಿದ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿಗಳ ಕಾರ್ಯವೈಖರಿ ಬಗ್ಗೆ ಟೀಕೆಗಳು ಗುರಿಯಾದವು.

ಎಚ್ಚೆತ್ತುಕೊಂಡ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಈ ಬರಹವನ್ನು ಅಳಿಸಿ ಹಾಕಿ, ಹಿಂದೂಗಳ ಧಾರ್ಮಿಕ ಭಾವನೆ ಆಕ್ರೋಶಕ್ಕೆ ತಣ್ಣಗಾಗಿಸಿದ್ದರು. ಆದರೂ ಸಾಮಾಜಿಕ ಜಾಲತಾಣದಲ್ಲಿ ಈ ಪೋಸ್ಟ್ ಹರಿದಾಡುತ್ತಿದ್ದು, ಇಂತಹ ಕಾರ್ಯಕ್ಕೆ ಇತರೆ ಕಡೆಗಳಿಂದ ವ್ಯಾಪಕವಾಗಿ ಆಕ್ರೋಶ ವ್ಯಕ್ತವಾಗುತ್ತಲೇ ಇದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಇಲ್ಲಿನ ಗ್ರಂಥಾಲಯ ಮೇಲ್ವಿಚಾರಕ ಅಶ್ವಥ್, ಇತ್ತೀಚೆಗಷ್ಟೇ ಗ್ರಂಥಾಲಯವನ್ನು ಅಭಿವೃದ್ಧಿಪಡಿಸಿದ್ದು, ದ್ವಾರದ ಮೇಲೆ ಈ ಬರಹವನ್ನು ಬರೆಯಲಾಗಿದ್ದು, ಈ ಬರಹವನ್ನು ಡಾ.ಬಿ.ಆರ್. ಅಂಬೇಡ್ಕರ್ ಅವರ ವಾಕ್ಯ ಎಂದು ಆರ್ಟಿಸ್ಟ್ ಈ ವಾಕ್ಯವನ್ನು ಬಿಡಿಸಿದ್ದರು. ನಾವು ಇಂಥದೇ ಬರಹ ಬರೆಯಬೇಕು ಎಂದು ಆರ್ಟಿಸ್ಟಿಗೆ ನೀಡಿಲ್ಲ. ಬರಹಕ್ಕೆ ವಿವಾದ ಸೃಷ್ಟಿಯಾಗುತ್ತಿದ್ದಂತೆ ನಾವು ಮೇಲಧಿಕಾರಿಗಳ ಸೂಚನೆ ಮೇರೆಗೆ ಬರಹವನ್ನು ಅಳಿಸಲಾಗಿದೆ ಎಂದರು.

RELATED ARTICLES

Latest News