Monday, May 19, 2025
Homeಬೆಂಗಳೂರುಕಾರಿನಲ್ಲಿ ಸರಸ-ಸಲ್ಲಾಪ : ಎಸ್ಐ ಹತ್ಯೆಗೆ ಯತ್ನಿಸಿದ ಯುವಕ-ಯುವತಿಗಾಗಿ ಶೋಧ

ಕಾರಿನಲ್ಲಿ ಸರಸ-ಸಲ್ಲಾಪ : ಎಸ್ಐ ಹತ್ಯೆಗೆ ಯತ್ನಿಸಿದ ಯುವಕ-ಯುವತಿಗಾಗಿ ಶೋಧ

ಬೆಂಗಳೂರು, ಜ.26- ಕಾರಿನಲ್ಲಿ ಬೆತ್ತಲೆಯಾಗಿ ಸರಸ-ಸಲ್ಲಾಪದಲ್ಲಿ ತೊಡಗಿದ್ದನ್ನು ನೋಡಿ ತಿಳಿಹೇಳಲು ಹೋದ ಸಬ್‍ಇನ್ಸ್‍ಪೆಕ್ಟರ್ ಹತ್ಯೆಗೆ ಯತ್ನಿಸಿ ಪರಾರಿಯಾಗಿರುವ ಯುವಕ-ಯುವತಿಗಾಗಿ ಜ್ಞಾನಭಾರತಿ ಠಾಣೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಬಿಳಿ ಬಣ್ಣದ ಕಿಯೋ ಸೆಲೊಟೊಸ್ ಕಾರು ಹಾಗೂ ಅದರಲ್ಲಿದ್ದ ಯುವಕ-ಯುವತಿಯ ಪತ್ತೆಗಾಗಿ ಘಟನಾ ಸ್ಥಳದ ಸುತ್ತಮುತ್ತಲಿನ ರಸ್ತೆಯಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಸಿಎಆರ್‍ನ ಪಶ್ಚಿಮ ವಿಭಾಗದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ಮಹೇಶ್ ಅವರು ಉಪಕಾರ ಲೇಔಟ್‍ನಲ್ಲಿ ವಾಸವಾಗಿದ್ದು, ಜ.20ರಂದು ಮಧ್ಯಾಹ್ನ 3.30ರ ಸುಮಾರಿನಲ್ಲಿ ಊಟ ಮಾಡಿ ವಾಯು ವಿಹಾರಕ್ಕೆ ಹೊರಗೆ ಬಂದಿದ್ದಾಗ ರಸ್ತೆ ಬದಿ ನಿಂತಿದ್ದ ಬಿಳಿ ಬಣ್ಣದ ಕಾರಿನ ಹಿಂಬದಿ ಸೀಟಿನಲ್ಲಿ ಯುವಕ-ಯುವತಿ ಬೆತ್ತಲೆಯಾಗಿ ಸರಸ-ಸಲ್ಲಾಪದಲ್ಲಿ ತೊಡಗಿದ್ದ ಅಸಭ್ಯ ದೃಶ್ಯ ಕಂಡುಬಂದಿದೆ.

ಲೋಕಸಭೆ ಚುನಾವಣೆ : ಬೆಳಗಾವಿ ಕ್ಷೇತ್ರದಿಂದ ಜಗದೀಶ್ ಶೆಟ್ಟರ್ ಸ್ಪರ್ಧೆ..?

ಅವರಿಗೆ ಬುದ್ಧಿವಾದ ಹೇಳಿ ಸ್ಥಳದಿಂದ ಕಳುಹಿಸಲು ಮಹೇಶ್ ಅವರು ಕಾರಿನ ಬಳಿ ಹೋಗಿ ನೋಂದಣಿ ಸಂಖ್ಯೆ ನೋಡುತ್ತಿದ್ದಾಗ ಯುವಕ ಕಾರು ಚಲಾಯಿಸಿ ಅವರ ಮೇಲೆ ಹರಿಸಲು ಯತ್ನಿಸಿದ್ದಾನೆ. ತಕ್ಷಣ ಮಹೇಶ್ ಅವರು ರಕ್ಷಣೆಗಾಗಿ ಕಾರಿನ ಬ್ಯಾಲೆಟ್ ಮೇಲೆ ಜಿಗಿದಾಗ ಕಾರು ರಿವರ್ಸ್ ಗೇರ್ ಹಾಕಿ ವೇಗವಾಗಿ ಹಿಂದಕ್ಕೆ ಹೋಗಿ ನಿಲ್ಲಿಸಿದ್ದರಿಂದ ಕೆಳಗೆ ಬಿದ್ದು ತಲೆಗೆ ಪೆಟ್ಟಾಗಿದೆ. ಆ ವೇಳೆ ಕಾರನ್ನು ಚಲಾಯಿಸಿಕೊಂಡು ಯುವಕ-ಯುವತಿ ಸ್ಥಳದಿಂದ ಪರಾರಿಯಾಗಿದ್ದಾರೆ.

ತಲೆಗೆ ಪೆಟ್ಟಾದ ಮಹೇಶ್ ಅವರು ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಮಹೇಶ್ ಅವರು ನೀಡಿದ ದೂರನ್ನು ಜ್ಞಾನಭಾರತಿ ಠಾಣೆ ಪೊಲೀಸರು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

RELATED ARTICLES

Latest News