Wednesday, November 13, 2024
Homeಜಿಲ್ಲಾ ಸುದ್ದಿಗಳು | District Newsಅವಾಯ್ಡ್ ಮಾಡಿದ್ದಕ್ಕೆ ಆಂಟಿಯನ್ನು ಮರ್ಡರ್ ಮಾಡಿದ್ದ ಯುವಕ ಅರೆಸ್ಟ್

ಅವಾಯ್ಡ್ ಮಾಡಿದ್ದಕ್ಕೆ ಆಂಟಿಯನ್ನು ಮರ್ಡರ್ ಮಾಡಿದ್ದ ಯುವಕ ಅರೆಸ್ಟ್

ರಾಯಚೂರು, ಮಾ.16-ಮಹಿಳೆಯ ಭೀಕರ ಹತ್ಯೆ ಪ್ರಕರಣವನ್ನು ಬೇಧಿಸಿರುವ ಲಿಂಗಸೂರು ಪೊಲೀಸರು ಯುವಕನೊಬ್ಬನನ್ನು ಬಂಧಿಸಿದ್ದಾರೆ. ಲಿಂಗಸುಗೂರು ತಾಲ್ಲೂಕಿನ ಯರಡೋಣಾ ಗ್ರಾಮದ ದೇವಣ್ಣ (22) ಬಂಧಿತ ಆರೋಪಿ.ಕಳೆದ ಮಾ.10ರಂದು ಲಿಂಗಸುಗೂರು ಪಟ್ಟಣದ ಎನ್ ಜಿಎಲ್ ಲಾಡ್ಜ್ ಬಳಿಯ ಪೊದೆಯಲ್ಲಿ ಮಹಿಳೆಯೊಬ್ಬರ ಶವ ಪತ್ತೆಯಾಗಿತ್ತು. ತಲೆ ಮೇಲೆ ಕಲ್ಲು ಎತ್ತಿಹಾಕಿ ಭೀಕರವಾಗಿ ಕೊಲೆ ಮಾಡಲಾಗಿತ್ತು. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ವೇಳೆ ಆಧಾರ್ ಕಾರ್ಡ್ ಸಿಕ್ಕಿತು.

ಕೊಲೆಯಾದ ಮಹಿಳೆಯನ್ನು ವಿಜಯಲಕ್ಷ್ಮೀ ಎಂದು ಗುರುತಿಸಿ ಮಸ್ಕಿ ತಾಲ್ಲೂಕಿನ ಅಂಕುಶದೊಡ್ಡಿ ಗ್ರಾಮದ ವಿಳಾಸ ಹುಡಿಕಿ ಹೋದಾಗ 8 ವರ್ಷದ ಹಿಂದೆ ಸೋಮನಾಥ ಎಂಬುವವರನ್ನು ವಿವಾಹವಾಗಿದ್ದು ಕಳೆದ 2 ವರ್ಷದ ಹಿಂದೆ ಆತ ತೀರಿಕೊಂಡಿದ್ದರು.
ತದನಂತರ ಮಗನೊಂದಿಗೆ ತವರು ಮನೆ ಲಿಂಗಸುಗೂರು ತಾಲ್ಲೂಕಿನ ಯರಡೋಣಾ ಗ್ರಾಮಕ್ಕೆ ಹೋಗಿರುವುದಾಗಿ ಸ್ಥಳೀಯರ ಮಾಹಿತಿಯಿಂದ ಗೊತ್ತಾಗಿತ್ತು.

ನಂತರ ಪೊಲೀಸರು ತನಿಖೆ ಚುರುಕುಗೊಳಿಸಿದಾಗ ದೇವಣ್ಣ ಹೆಸರು ತಳುಕು ಹಾಕಿಕೊಂಡಿತ್ತು. ನಂತರ ಆತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಅನೈತಿಕ ಸಂಬಂಧ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ ವಿಜಯಲಕ್ಷ್ಮೀಗೆ ಅದೇ ಗ್ರಾಮದ ದೇವಣ್ಣ ಪರಿಚಯವಾಗಿತ್ತು. ಅತ್ತೆ ಅತ್ತೆ ಅಂತ ಕರೆಯುತ್ತಿದ್ದ ನಂತರ ಸಲುಗೆ ಬೆಳದು ಅನೈತಿಕ ಸಂಬಂಧಕ್ಕೆ ತಿರುಗಿತ್ತು.

ಈ ವಿಚಾರ ತಿಳಿದ ವಿಜಯಲಕ್ಷ್ಮೀ ಅಣ್ಣ ಚೌಡಪ್ಪ ದೇವಣ್ಣಗೆ ಹಲವು ಬಾರಿ ಬೈದು ಬುದ್ದಿವಾದ ಹೇಳಿದ್ದರು. ಆದರೂ ಆತ ತನ್ನ ಚಾಳಿ ಮಾತ್ರ ಬಿಟ್ಟಿರಲಿಲ್ಲ ಕೊನೆಗೆ ತಂಗಿ ವಿಜಯಲಕ್ಷ್ಮೀಗೆ ಹೊಡೆದು ಬುದ್ದಿ ಹೇಳಿದ್ದ. ನಂತರ ಆಕೆ ದೇವಣ್ಣನ ಸಂಪರ್ಕ ಬಿಟ್ಟಿದ್ದಳು.ಕಳೆದ ಎರಡು ತಿಂಗಳಿನಿಂದ ಇವರಿಬ್ಬರ ಸಂಬಂಧ ದೂರವಾಗಿತ್ತು. ಕಳೆದ ಮಾ.1 0ರಂದು ಆಕೆ ಮುದಗಲ್ ಬಳಿಯ ದೇವಸ್ಥಾನಕ್ಕೆ ಹೋಗಿರುವ ಬಗ್ಗೆ ಮಾಹಿತಿ ತಿಳಿದು ಅಲ್ಲಿಗೆ ದೇವಣ್ಣ ಹೋಗಿದ್ದ.

ನಂತರ ವಾಪಸ್ ಬರೋವಾಗ ಆಕೆಯನ್ನು ಪುಸಲಾಯಿಸಿ ಲಿಂಗಸುಗೂರು ಪಟ್ಟಣದ ಪೊದೆಯೊಂದರ ಬಳಿ ಕರೆದೊಯ್ದು ನನ್ನನ್ನು ಯಾಕೆ ಮಾತನಾಡಿಸುತ್ತಿಲ್ಲ ಎಂದು ಕ್ಯಾತೆ ತೆಗೆದು ಜಗಳವಾಡಿದ್ದಾನೆ. ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ಹೋದಾಗ ಆಕೆಯ ತಲೆಗೆ ಕಲ್ಲಿನಿಂದ ಹೊಡೆದು, ಆಕೆಯ ಸೀರೆಯಿಂದಲೇ ಉಸಿರುಗಟ್ಟಿಸಿ ಕೊಲೆ ಮಾಡಿ ಅಲ್ಲಿಂದ ಪರಾರಿಯಾಗಿದ್ದನು. ಸದ್ಯ ಪೊಲೀಸರು ಆರೋಪಿ ದೇವಪ್ಪನನ್ನು ಬಂಧಿಸಿ ಹೇಳಿಕೆ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

RELATED ARTICLES

Latest News