Wednesday, May 21, 2025
Homeರಾಜ್ಯಮಂಗಳೂರು : ವಿಮಾನ ನಿಲ್ದಾಣದ ಡ್ರೈನೇಜ್ ಚೇಂಬರ್‌‌ನಲ್ಲಿ ಚಿನ್ನ ಪತ್ತೆ

ಮಂಗಳೂರು : ವಿಮಾನ ನಿಲ್ದಾಣದ ಡ್ರೈನೇಜ್ ಚೇಂಬರ್‌‌ನಲ್ಲಿ ಚಿನ್ನ ಪತ್ತೆ

ಮಂಗಳೂರು, ಫೆ.18: ಇಲ್ಲಿನ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (ಎಂಐಎ) ವಾಶ್‍ರೂಮ್‍ನ ಡ್ರೈನೇಜ್ ಚೇಂಬರ್‍ನಲ್ಲಿ ಬಚ್ಚಿಟ್ಟಿದ್ದ 45 ಲಕ್ಷ ರೂ ಮೌಲ್ಯದ 733 ಗ್ರಾಂ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ವಿದೇಶದಿಂದ ಬರುವ ಪ್ರಯಾಣಿಕರು ಹೊರಬರುವ ಪ್ರದೇಶದಲ್ಲಿನ ವಾಶ್‍ರೂಮ್‍ನ ಡ್ರೈನೇಜ್ ಚೇಂಬರ್‍ನಲ್ಲಿ ಕಪ್ಪು ಬಣ್ಣದ ಚೀಲದಲ್ಲಿ ಬಚ್ಚಿಟ್ಟಿದ್ದ ಪೇಸ್ಟ್‍ರೂಪದ ಚಿನ್ನ ಪತ್ತೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಾಶ್‍ರೂಮ್‍ನಲ್ಲಿ ಚಿನ್ನವನ್ನು ಇರಿದಿದ್ದ ವ್ಯಕ್ತಿಯ ಗುರುತು ಇನ್ನೂ ತಿಳಿದಿಲ್ಲ.ಕಳ್ಳಸಾಗಣೆ ಮೂಲಕ ಚಿನ್ನದ ತರಲಾಗಿದೆ ಪ್ರಕರಣ ಕುರಿತಂತೆ ಹೆಚ್ಚಿನ ತನಿಖೆಯನ್ನು ನಡೆಸಲಾಗುತ್ತಿದೆ ಎಂದು ಹೇಳಿದರು.

RELATED ARTICLES

Latest News