Saturday, July 20, 2024
Homeರಾಜ್ಯಜಾಮೀನು ಅರ್ಜಿ ಸಲ್ಲಿಕೆಗೆ ಇನ್ನೂ ಒಂದು ವಾರ ಬೇಕಾಗಬಹುದು : ದರ್ಶನ್ ಪರ ವಕೀಲರು

ಜಾಮೀನು ಅರ್ಜಿ ಸಲ್ಲಿಕೆಗೆ ಇನ್ನೂ ಒಂದು ವಾರ ಬೇಕಾಗಬಹುದು : ದರ್ಶನ್ ಪರ ವಕೀಲರು

ಬೆಂಗಳೂರು,ಜೂ.20- ನಟ ದರ್ಶನ್ ಅವರ ಜಾಮೀನು ಅರ್ಜಿ ಸಲ್ಲಿಸಲು ಸಮಯಾವಕಾಶ ಬೇಕಾಗಬಹುದು ಎಂದು ದರ್ಶನ್ ಪರ ವಕೀಲರು ಹೇಳಿದರು.ಇಂದು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ಭೇಟಿ ನೀಡಿ ಆರೋಪಿಗಳ ಜೊತೆ ಚರ್ಚಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ದರ್ಶನ್ ಪರ ವಕೀಲರಾದ ಅನಿಲ್ಬಾಬು ಅವರು ಇಂದು ಸಂಜೆಯೊಳಗೆ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಬೇಕು.

ಬಹುತೇಕ ತನಿಖೆ ಮುಗಿದಿರಬಹುದು. ಜಾಮೀನು ಸಂಬಂಧ ದರ್ಶನ್ ಜೊತೆ ಮಾತನಾಡಿದ್ದೇವೆ. ಜಾಮೀನಿಗೆ ಅರ್ಜಿ ಸಲ್ಲಿಸಲು ಒಂದು ವಾರ ಬೇಕಾಗಬಹುದು. ಚರ್ಚೆ ಮಾಡಿ ನಂತರ ಅರ್ಜಿ ಸಲ್ಲಿಸುತ್ತೇವೆ. ಅವರ ಆರೋಗ್ಯ ಚೆನ್ನಾಗಿದೆ ಎಂದರು.

ಅವರ ವಕೀಲರಾದ ರಂಗನಾಥ ರೆಡ್ಡಿ ಮಾತನಾಡಿ, ಆರೋಪಿಗಳನ್ನು ಕಸ್ಟಡಿಗೆ ಕೇಳುವುದು ತನಿಖಾಧಿಕಾರಿಗಳ ನಿರ್ಧಾರವಾಗಿದೆ. ಬಹುತೇಕ ವಿಚಾರಣೆ ಮುಗಿದಿರಬಹುದು ಎಂದು ಹೇಳಿದರು.

ಡಿಎನ್ಎ ಪರೀಕ್ಷೆ ಸ್ಯಾಂಪಲ್ ಪಡೆಯಲು ನ್ಯಾಯಾಲಯದ ಅನುಮತಿ ಬೇಕಾಗುತ್ತದೆ. ಅದನ್ನು ಪೊಲೀಸರು ತೆಗೆದುಕೊಂಡಿದ್ದಾರೋ?, ಇಲ್ಲವೋ?, ಡಿಎನ್ಎ ಪರೀಕ್ಷೆ ನಡೆಸಲಾಗಿದೆಯೋ?, ಇಲ್ಲವೋ? ಸದ್ಯಕ್ಕೆ ನಮಗೆ ಗೊತ್ತಿಲ್ಲ. ಚಾರ್ಜ್ಶೀಟ್ ಸಲ್ಲಿಕೆಯಾದ ನಂತರ ನಮಗೆ ಗೊತ್ತಾಗುತ್ತದೆ ಎಂದು ಅವರು ಹೇಳಿದರು.

RELATED ARTICLES

Latest News