Monday, December 2, 2024
Homeಜಿಲ್ಲಾ ಸುದ್ದಿಗಳು | District Newsಹಾಸನ / Hassanಕಾಲುಜಾರಿ ಕೆರೆಗೆ ಬಿದ್ದ ಮಗಳು, ರಕ್ಷಸಿಲು ಹೋದ ತಾಯಿ : ಇಬ್ಬರೂ ಸಾವು

ಕಾಲುಜಾರಿ ಕೆರೆಗೆ ಬಿದ್ದ ಮಗಳು, ರಕ್ಷಸಿಲು ಹೋದ ತಾಯಿ : ಇಬ್ಬರೂ ಸಾವು

Daughter And Mother fell into the lake,died

ಚನ್ನರಾಯಪಟ್ಟಣ,ಅ.25- ಹಸು ತೊಳೆಯಲು ಹೋಗಿ ಕೆರೆಯಲ್ಲಿ ಮುಳುಗಿ ತಾಯಿ-ಮಗಳು ಸಾವನ್ನಪ್ಪಿರುವ ದಾರುಣ ಘಟನೆ ತಾಲ್ಲೂಕಿನ ಸಣ್ಣೇನಹಳ್ಳಿ ಗ್ರಾಮದಲ್ಲಿ ನಡೆದಿದೆ.ತಾಯಿ ನಂಜಮ (60), ಮಗಳು ಗೀತಾ (34) ಮೃತ ದುರ್ದೈವಿಗಳು.

ಹಸು ತೊಳೆಯಲು ಗ್ರಾಮದ ಕೆರೆಗೆ ಹೋಗಿದ್ದು, ಈ ವೇಳೆ ಕಾಲುಜಾರಿ ಕೆರೆಗೆ ಬಿದ್ದ ಮಗಳು ಗೀತಾಳನ್ನು ರಕ್ಷಿಸಲು ತಾಯಿ ನಂಜಮ ನೀರಿಗಿಳಿದಿದ್ದಾರೆ. ದುರದೃಷ್ಟವಶಾತ್‌ ಇಬ್ಬರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Latest News