Thursday, December 5, 2024
HomeUncategorizedಮಲೈ ಮಹದೇಶ್ವರನ ಹುಂಡಿಯಲ್ಲಿ 28 ದಿನದಲ್ಲಿ 2 ಕೋಟಿ ನಗದು ಸೇರಿ ಚಿನ್ನ-ಬೆಳ್ಳಿ ಸಂಗ್ರಹ

ಮಲೈ ಮಹದೇಶ್ವರನ ಹುಂಡಿಯಲ್ಲಿ 28 ದಿನದಲ್ಲಿ 2 ಕೋಟಿ ನಗದು ಸೇರಿ ಚಿನ್ನ-ಬೆಳ್ಳಿ ಸಂಗ್ರಹ

Male Mahadeshwara Hills temple Donation counting

ಹನೂರು,ಅ.25- ತಾಲ್ಲೂಕಿನ ಪ್ರಸಿದ್ಧ ಪುಣ್ಯ ಕ್ಷೇತ್ರ ಶ್ರೀ ಮಲೈ ಮಹದೇಶ್ವರಬೆಟ್ಟ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರ ವತಿಯಿಂದ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, ಕಳೆದ 28 ದಿನಗಳಲ್ಲಿ 2 ಕೋಟಿ ನಗದು ಹಾಗೂ 30 ಗ್ರಾಂ. ಚಿನ್ನ, 1.865 ಕೆಜಿ ಬೆಳ್ಳಿ ಸಂಗ್ರಹವಾಗಿದೆ.
ಸಾಲೂರು ಬೃಹನಠಾಧ್ಯಕ್ಷರಾದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಜೀಗಳ ಉಪಸ್ಥಿತಿಯಲ್ಲಿ ಪ್ರಾಧಿಕಾರದ ಕಾರ್ಯದರ್ಶಿ ಎ.ಇ.ರಘು ಅವರ ನೇತೃತ್ವದಲ್ಲಿ ಈ ಹುಂಡಿ ಎಣಿಕೆ ಕಾರ್ಯ ನಡೆದಿದೆ.

ಭಕ್ತಾಧಿಗಳು ಹರಿಕೆ ರೂಪದಲ್ಲಿ ಸಲ್ಲಿಸಿದ ಕಾಣಿಕೆ 28 ದಿನದಲ್ಲಿ ಸಂಗ್ರಹವಾಗಿರುವ ಮಾದಪ್ಪನ ಹುಂಡಿಯಲ್ಲಿ 2,00,80,844 ಕೋಟಿ ನಗದು 30 ಗ್ರಾಂ.ಚಿನ್ನ ಮತ್ತು 1.865 ಕೆ.ಜಿ ಬೆಳ್ಳಿಯ ವಸ್ತುಗಳು ಹುಂಡಿಗೆ ಬಿದ್ದಿವೆ.

ಅಲ್ಲದೆ ಕ್ವಾರ್ಟರ್‌ ಸೆಂಟ್ರಲ್‌ ಬ್ಯಾಂಕ್‌ ರಿಯಲ್‌್ಸ 10 ಸೆಂಟ್ರಲ್‌ ಬ್ಯಾಂಕ್‌ ಆಫ್‌ ಒಮನ್‌ 100 ವಿದೇಶಿ ಹಣ ಹಾಗೂ 2 ಸಾವಿರ ಮುಖಬೆಲೆಯ 22 ನೋಟುಗಳು ದೊರೆತಿದೆ.ಮ.ಬೆಟ್ಟದ ಖಾಸಗಿ ಬಸ್‌‍ ನಿಲ್ದಾಣ ವಾಣಿಜ್ಯ ಸಂಕೀರ್ಣ ಸಿಸಿಟಿವಿ ಕ್ಯಾಮೆರಾ ಕಣ್ಗಾವಲಿನಲ್ಲಿ ಮತ್ತು ಮ.ಬೆಟ್ಟ ಪೊಲೀಸರ ಬಂದೋಬಸ್ತ್‌ ನಲ್ಲಿ ಬೆಳಿಗ್ಗೆ 6.30ರಿಂದ ಪ್ರಾರಂಭವಾದ ಹುಂಡಿ ಎಣಿಕೆ ಕಾರ್ಯವು ಸಂಜೆ 6 ರವರೆಗೂ ನಡೆಯಿತು.

ಹುಂಡಿ ಎಣಿಕೆ ಪ್ರಕ್ರಿಯೆಯಲ್ಲಿ ಪ್ರಾಧಿಕಾರದ ಕಾರ್ಯದರ್ಶಿ ರಘ ಉಪ ಕಾರ್ಯದರ್ಶಿ ಚಂದ್ರಶೇಖರ್‌ ಸರಗೂರು ಮಹದೇವಸ್ವಾಮಿ ಹಣಕಾಸು ಲೆಕ್ಕ ಪತ್ರ ಸಲಹೆಗಾರ ನಾಗೇಶ್‌ ಜಿಲ್ಲಾಡಳಿತ ಕಛೇರಿ ಶ್ವೇತಾ ಹಾಗೂ ಪ್ರಾಧಿಕಾರದ ಸಿಬ್ಬಂದಿಗಳು ಪೊಲೀಸ್‌‍ ಅಧಿಕಾರಿಗಳು ಮತ್ತು ಬ್ಯಾಂಕ್‌ ಅಪ್‌ ಬರೋಡ ವ್ಯವಸ್ಥಾಪಕರು ಮತ್ತು ಸಿಬ್ಬಂದಿಗಳು ಹಾಜರಿದ್ದರು.

RELATED ARTICLES

Latest News