Monday, October 14, 2024
Homeರಾಷ್ಟ್ರೀಯ | Nationalದೇವಾಲಯ ಶುಚಿಗೊಳಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್

ದೇವಾಲಯ ಶುಚಿಗೊಳಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್

ಲಕ್ನೋ, ಜ 16 (ಪಿಟಿಐ) ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಂದು ಇಲ್ಲಿನ ಹನುಮಾನ್ ಸೇತು ದೇವಸ್ಥಾನದಲ್ಲಿ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡರು. ಅಯೋಧ್ಯೆಯ ರಾಮಮಂದಿರದಲ್ಲಿ ಜನವರಿ 22 ರಂದು ನಡೆಯುವ ಶಂಕುಸ್ಥಾಪನೆ ಸಮಾರಂಭದ ಮೊದಲು ದೇವಾಲಯಗಳು ಮತ್ತು ಧಾರ್ಮಿಕ ಪ್ರಾಮುಖ್ಯತೆಯ ಸ್ಥಳಗಳಲ್ಲಿ ಸ್ವಚ್ಛತಾ ಅಭಿಯಾನಗಳನ್ನು ಕೈಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವ ಬೆನ್ನಲ್ಲೇ ಹಲವಾರು ಮುಖಂಡರುಗಳು ತಮ್ಮ ತಮ್ಮ ವ್ಯಾಪ್ತಿಯ ದೇವಾಲಯಗಳ ಶುಚಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಲಕ್ನೋ ಸಂಸದರಾಗಿರುವ ಸಿಂಗ್ ಅವರು ದೇವಾಲಯಕ್ಕೆ ಪೂಜೆ ಸಲ್ಲಿಸಿ ಇಡಿ ದೇವಾಲಯವನ್ನು ಪೊರಕೆಯಿಂದ ಗುಡಿಸಿ ಶುಚಿಗೊಳಿಸಿದರು.

ಸಚಿವಾಲಯಕ್ಕೆ ಬಂದು ಹೇಳಿಕೆ ದಾಖಲಿಸಿಕೊಳ್ಳಿ : ಇಡಿಗೆ ಜಾರ್ಖಾಂಡ್ ಸಿಎಂ ಮನವಿ

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾಮಸ್ತಕಾಭಿಷೇಕ ನಡೆಯುತ್ತಿರುವುದು ಜನತೆಗೆ ಸಂತಸದ ವಿಚಾರ. ಈ ಕಾರ್ಯಕ್ರಮದಲ್ಲಿ ದೇಶದ ಜನರು ಮಾತ್ರವಲ್ಲದೆ ವಿದೇಶದವರೂ ಭಾಗವಹಿಸಲಿದ್ದಾರೆ ಎಂದು ಸಿಂಗ್ ಹೇಳಿದರು.

RELATED ARTICLES

Latest News