Saturday, April 20, 2024
Homeರಾಷ್ಟ್ರೀಯದೆಹಲಿ ಬಹು ಮಹಡಿಯ ಕಟ್ಟಡದಲ್ಲಿ ಬೆಂಕಿ, 2 ಮಕ್ಕಳು ಸೇರಿ 4 ಮಂದಿ ಸಾವು

ದೆಹಲಿ ಬಹು ಮಹಡಿಯ ಕಟ್ಟಡದಲ್ಲಿ ಬೆಂಕಿ, 2 ಮಕ್ಕಳು ಸೇರಿ 4 ಮಂದಿ ಸಾವು

ನವದೆಹಲಿ, ಮಾ 14 (ಪಿಟಿಐ) : ದೆಹಲಿಯ ಶಾಹ್ದಾರಾದ ಶಾಸ್ತ್ರಿ ನಗರ ಪ್ರದೇಶದ ವಸತಿ ನಾಲ್ಕು ಮಹಡಿಯ ಕಟ್ಟಡದಲ್ಲಿ ಇಂದು ಮುಂಜಾನೆ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಇಬ್ಬರು ಮಕ್ಕಳು ಮತ್ತು ದಂಪತಿ ಉಸಿರುಗಟ್ಟುವಿಕೆಯಿಂದ ಸಾವನ್ನಪ್ಪಿದ್ದಾರೆ. ಮೃತರನ್ನು ಮನೋಜ್ (30), ಅವರ ಪತ್ನಿ ಸುಮನ್ (28) ಮತ್ತು ಐದು ಮತ್ತು ಮೂರು ವರ್ಷದ ಇಬ್ಬರು ಬಾಲಕೀಯರು ಎಂದು ಗುರುತಿಸಲಾಗಿದೆ.

ಬೆಳಗ್ಗೆ 5:20ರ ಸುಮಾರಿಗೆ ಶಹದಾರದ ಶಾಸ್ತ್ರಿ ನಗರ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿರುವ ಬಗ್ಗೆ ಕರೆ ಬಂದಿದ್ದು ,ಕೂಡಲೇ ಸ್ಥಳೀಯ ಪೊಲೀಸ್ ತಂಡ ನಾಲ್ಕು ಅಗ್ನಿಶಾಮಕ ಟೆಂಡರ್‍ಗಳು, ಆಂಬ್ಯುಲೆನ್ಸ್ ಗಳು ಮತ್ತು ಪಿಸಿಆರ್ ವ್ಯಾನ್‍ಗಳನ್ನು ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ಆರಂಭವಾಯಿತು ಎಂದು ಪೊಲೀಸರು ಹೇಳಿದರು.

ಪಾಕಿರ್ಂಗ್ ಸ್ಥಳದಿಂದ ಬೆಂಕಿ ಕಾಣಿಸಿಕೊಂಡು ದಟ್ಟ ಹೊಗೆ ಇಡೀ ಕಟ್ಟಡವನ್ನು ಆವರಿಸಿದೆ.ರಸ್ತೆ ಕಿರಿದಾಗಿದ್ದ ಕಾರಣ ಸ್ವಲ್ಪ ಅಡಚನೆಯಾದರೂ ಅಗ್ನಿಶಾಮಕ ಅಧಿಕಾರಿಗಳು ಸ್ಥಳಕ್ಕೆ ತಲುಪಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರತಿ ಮಹಡಿಯಲ್ಲಿ ಹುಡುಕಾಟ ನಡೆಸಲಾಯಿತು ಮೂವರು ಪುರುಷರು, ನಾಲ್ವರು ಮಹಿಳೆಯರು ಮತ್ತು ಇಬ್ಬರು ಮಕ್ಕಳನ್ನು ಹೆಡ್ಗೆವಾರ್ ಆಸ್ಪತ್ರೆಗೆ ಆಂಬ್ಯುಲೆನ್ಸ್ ಮೂಲಕ ಕಳುಹಿಸಲಾಯಿತು ಅದರೆ ಅಲ್ಲಿ ನಾಲ್ವರು ಮೃತಪಟ್ಟಿದ್ದಾರೆ ಎಂದು ಹೇಳಿದರು.ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಮತ್ತು ಘಟನೆಯ ಬಗ್ಗೆ ತನಿಖೆ ಆರಂಭವಾಗಿದೆ ಬೆಂಕಿ ತಹಬದಿಗೆ ಬಂದಿದ್ದು,ಕಟ್ಟಡಕ್ಕೂ ಹಾನಿಯಾಗಿದೆ.

RELATED ARTICLES

Latest News