Wednesday, January 22, 2025
Homeಅಂತಾರಾಷ್ಟ್ರೀಯ | Internationalಅಮೆರಿಕ : ಜೆಟ್ ಸ್ಕಿಸ್ ಅಪಘಾತದಲ್ಲಿ ಭಾರತೀಯ ಸಾವು

ಅಮೆರಿಕ : ಜೆಟ್ ಸ್ಕಿಸ್ ಅಪಘಾತದಲ್ಲಿ ಭಾರತೀಯ ಸಾವು

ವಾಷಿಂಗ್ಟನ್, ಮಾ 14 (ಪಿಟಿಐ) : ಅಮೆರಿಕದ ಫ್ಲೋರಿಡಾ ರಾಜ್ಯದಲ್ಲಿ 27 ವರ್ಷದ ಭಾರತೀಯ ವಿದ್ಯಾರ್ಥಿಯೊಬ್ಬರು ತಮ್ಮ ವಾಟರ್ ಕ್ರಾಫ್ಟ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ತೆಲಂಗಾಣದ ವೆಂಕಟರಮಣ ಪಿಟ್ಟಲ ಮೃತಪಟ್ಟ ಭಾರತೀಯ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ.

ಪಿಟ್ಟಲ ಬಾಡಿಗೆಗೆ ಪಡೆದ ಯಮಹಾ ಪರ್ಸನಲ್ ವಾಟರ್ ಕ್ರಾಫ್ಟ್ (ಪಿಡಬ್ಲ್ಯೂಸಿ) ಓಡಿಸುತ್ತಿದ್ದರು, ಅದು ಮತ್ತೊಂದು ವಾಟರ್ ಕ್ರಾಫ್ಟ್ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.ಪಿಟ್ಟಲ ಅವರು ಇಂಡಿಯಾನಾಪೊಲಿಸ್‍ನ ಇಂಡಿಯಾನಾ ಯೂನಿವರ್ಸಿಟಿ ಪಡ್ರ್ಯೂ ವಿಶ್ವವಿದ್ಯಾನಿಲಯದಲ್ಲಿ ಪದವಿ ವಿದ್ಯಾರ್ಥಿಯಾಗಿದ್ದು, ಮೇ ತಿಂಗಳಲ್ಲಿ ಪದವಿ ಪಡೆಯಲು ನಿರ್ಧರಿಸಿದ್ದರು ಎನ್ನಲಾಗಿದೆ.

ವೈಯಕ್ತಿಕ ವಾಟರ್ ಕ್ರಾಫ್ಟ್ ಗಳು ಸಾಮಾನ್ಯವಾಗಿ ಜೆಟ್ ಸ್ಕಿಸ್ ಎಂದು ಕರೆಯಲ್ಪಡುವ ಟಂಡೆಮ್ ಬೋಟ್‍ಗಳಾಗಿವೆ, ಇದನ್ನು ಕವಾಸಕಿ ತಯಾರಿಸಿದ ಜನಪ್ರಿಯ ಮಾದರಿಯ ಹೆಸರು.ಬೇರೆ ಯಾರಾದರೂ ಗಾಯಗೊಂಡಿದ್ದಾರೆಯೇ ಎಂಬುದು ಸ್ಪಷ್ಟವಾಗಿಲ್ಲ ಎಂದು ಮಿಯಾಮಿ ಹೆರಾಲ್ಡ್ ಪತ್ರಿಕೆ ವರದಿ ಮಾಡಿದೆ.

RELATED ARTICLES

Latest News