Monday, June 17, 2024
Homeಇದೀಗ ಬಂದ ಸುದ್ದಿದೆಹಲಿಯಲ್ಲಿ 3 ಕೋಟಿ ರೂ. ನಗದು ಹೊಂದಿದ್ದ ನಾಲ್ವರ ಬಂಧನ

ದೆಹಲಿಯಲ್ಲಿ 3 ಕೋಟಿ ರೂ. ನಗದು ಹೊಂದಿದ್ದ ನಾಲ್ವರ ಬಂಧನ

ನವದೆಹಲಿ,ಮಾ.24- ಸುಮಾರು 3 ಕೋಟಿ ರೂ. ನಗದು ಹೊಂದಿದ್ದ ನಾಲ್ವರನ್ನು ಬಂಧಿಸಿರುವ ಘಟನೆ ರಾಷ್ಟ್ರ ರಾಜಧಾನಿ ನವದೆಹಲಿಯ ನೈಋತ್ಯ ದೆಹಲಿಯ ಝರೇರಾ ಮೇಲ್ಸೇತುವೆ ಬಳಿ ನಡೆದಿದೆ.

ಬಂಧಿತ ನಾಲ್ವರು ನಗರದ ಶಹದಾರಾದ ನಿವಾಸಿಗಳು. ಇವರು 22 ಮತ್ತು 27 ರ ನಡುವಿನ ವಯಸ್ಸಿನವರಾಗಿದ್ದಾರೆ. ಹವಾಲಾ ಹಣ ಶಹದಾರಾದಲ್ಲಿನ ಸ್ಕ್ರ್ಯಾಪ್ ಡೀಲರ್‍ಗೆ ಸೇರಿದ್ದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪ್ರಕರಣ ಸಂಬಂಧ ಬಂಧಿತರ ದ್ವಿಚಕ್ರವಾಹನಗಳನ್ನೂ ವಶಪಡಿಸಿಕೊಳ್ಳಲಾಗಿದೆ. ಎರಡು ದೊಡ್ಡ ಕಪ್ಪು ಚೀಲಗಳನ್ನು ಹೊತ್ತ ನಾಲ್ವರಿದ್ದ ಎರಡು ಮೋಟಾರ್‍ಸೈಕಲ್‍ಗಳನ್ನು ತಂಡವು ಅಡ್ಡಗಟ್ಟಿತು. ತಂಡವು ಎರಡು ಬ್ಯಾಗ್‍ಗಳಲ್ಲಿ ಸುಮಾರು 3 ಕೋಟಿ ರೂ.ಗಳನ್ನು ವಶಪಡಿಸಿಕೊಂಡಿದೆ. ಇದು ಹವಾಲಾ ಹಣ ಎಂಬುದು ನಮ್ಮ ಪ್ರಾಥಮಿಕ ತನಿಖೆಯಲ್ಲಿ ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಅನುಸರಿಸಿ, ಚುನಾವಣಾ ಫ್ಲೈಯಿಂಗ್ ಸ್ಕ್ವಾಡ್ ಮತ್ತು ಆದಾಯ ತೆರಿಗೆ ಅಧಿಕಾರಿಗಳಿಗೆ ಮಾಹಿತಿಯನ್ನು ರವಾನಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದರು.

RELATED ARTICLES

Latest News