Friday, July 19, 2024
Homeರಾಜ್ಯಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ರಾಜ್ಯದಲ್ಲಿ ಇನ್ನೂ 3 ದಿನ ಮಳೆ

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ರಾಜ್ಯದಲ್ಲಿ ಇನ್ನೂ 3 ದಿನ ಮಳೆ

ಬೆಂಗಳೂರು, ಸೆ.29- ವಾತಾವರಣದಲ್ಲಿ ಸಾಕಷ್ಟು ಬದಲಾವಣೆಗಳಾಗಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮೂರು ದಿನಗಳ ಕಾಲ ಸಾಧಾರಣ ಮಳೆಯಾಗಲಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ, ಅರಬ್ಬೀಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಸೇರಿದಂತೆ ವಾತಾವರಣದಲ್ಲಿ ಹಲವು ರೀತಿಯ ಬದಲಾವಣೆಗಳಾಗಿದ್ದು, ಮಳೆ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

ಹವಾಮಾನ ಮುನ್ಸೂಚನೆ ಪ್ರಕಾರ ಭಾಗಶಃ ಮೋಡ ಕವಿದ ವಾತಾವರಣ ಕಂಡು ಬರಲಿದ್ದು, ಸಂಜೆ ಹಾಗೂ ರಾತ್ರಿ ವೇಳೆ ಕೆಲವೆಡೆ ಮಳೆಯಾಗಲಿದೆ. ಕಳೆದ ಎಂಟತ್ತು ದಿನಗಳಿಂದ ರಾಜ್ಯದಲ್ಲಿ ಅಲ್ಲಲ್ಲಿ ಮಳೆಯಾಗುತ್ತಿದ್ದು, ಇನ್ನೂ ಮೂರ್ನಾಲ್ಕು ದಿನಗಳ ಕಾಲ ಚದುರಿದಂತೆ ಮಳೆಯಾಗಲಿದೆ. ನೈಋತ್ಯ ಮುಂಗಾರು ಮರಳುವಿಕೆ ಪ್ರಕ್ರಿಯೆ ಆರಂಭವಾಗಿದೆ. ಅಲ್ಲದೆ, ಈಶಾನ್ಯ ಹಿಂಗಾರು ಆರಂಭದ ಪ್ರಕ್ರಿಯೆಗಳು ಶುರುವಾಗಿವೆ. ಈ ಪರ್ವ ಕಾಲದಲ್ಲಿ ಮಳೆಯಾಗುವುದು ಸಹಜ ಎಂದು ಹವಾಮಾನ ತಜ್ಞರು ಸ್ಪಷ್ಟಪಡಿಸಿದರು.

ರಾಜಸ್ತಾನದಿಂದ ಮುಂಗಾರು ಮಳೆ ಮರಳುವಿಕೆ ಆರಂಭಿಸಿದ್ದು, ಇನ್ನೊಂದು ವಾರದಲ್ಲಿ ಮುಂಗಾರು ನಿರ್ಗಮಿಸಲಿದೆ. ಆ ನಂತರ ಹಿಂಗಾರು ಮಳೆ ಆರಂಭವಾಗಲಿದೆ. ಆಗಸ್ಟ್‍ನಂತೆ ಸೆಪ್ಟೆಂಬರ್‍ನಲ್ಲೂ ರಾಜ್ಯದಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಆದರೆ ಮಳೆಯ ಕೊರತೆ ಪ್ರಮಾಣ ಆಗಸ್ಟ್‍ಗೆ ಹೋಲಿಸಿದರೆ ಸೆಪ್ಟೆಂಬರ್‍ನಲ್ಲಿ ಕಡಿಮೆಯಾಗಿದೆ.

ಬೆಂಗಳೂರು : ಚಾಕುವಿನಿಂದ ಇರಿದು ರೌಡಿ ಪಪ್ಪಾಯಿ ಸುಹೇಲ್ ಕೊಲೆ

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ ಕಳೆದ ಒಂದು ವಾರದಲ್ಲಿ ರಾಜ್ಯದಲ್ಲಿ ಶೇ. 5ರಷ್ಟು ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ದಕ್ಷಿಣ ಒಳನಾಡಿನಲ್ಲಿ ಶೇ. 20ರಷ್ಟು ಉತ್ತರ ಒಳನಾಡಿನಲ್ಲಿ ಶೇ. 6ರಷ್ಟು, ಮಲೆನಾಡಿನಲ್ಲಿ ಶೇ. 34 ಹಾಗೂ ಕರಾವಳಿಯಲ್ಲಿ ಶೇ. 52ರಷ್ಟು ವಾಡಿಕೆಗಳಿಗಿಂತ ಕಡಿಮೆ ಮಳೆ ಕಳೆದ ಒಂದು ವಾರದಲ್ಲಿ ಬಿದಿದ್ದೆ.

ಸೆ. 1ರಿಂದ ನಿನ್ನೆಯವರೆಗೆ ರಾಜ್ಯದಲ್ಲಿ ಶೇ. 10ರಷ್ಟು ವಾಡಿಕೆಗಿಂತ ಕಡಿಮೆಯಾಗಿದೆ. ದಕ್ಷಿಣ ಒಳನಾಡಿನಲ್ಲಿ ಶೇ. 17, ಉತ್ತರ ಒಳನಾಡಿನಲ್ಲಿ ಶೇ. 18, ಮಲೆನಾಡಿನಲ್ಲಿ ಶೇ. 16 ಹಾಗೂ ಕರಾವಳಿ ಶೇ. 23ರಷ್ಟು ವಾಡಿಕೆಗಿಂತ ಕಡಿಮೆ ಮಳೆಯಾದ ವರದಿಯಾಗಿದೆ.
ಜೂನ್ 1ರಿಂದ ನಿನ್ನೆಯವರೆಗೆ ರಾಜ್ಯದಲ್ಲಿ 631 ಮಿ.ಮೀಟರ್‍ನಷ್ಟು ಮಳೆಯಾಗಿದ್ದು, ವಾಡಿಕೆಗಿಂತ ಶೇ. 25ರಷ್ಟು ಮಳೆ ಕೊರತೆ ಉಂಟಾಗಿದೆ.

ಈ ಅವಯ ವಾಡಿಕೆ ಮಳೆ ಪ್ರಮಾಣ 839 ಮಿ.ಮೀಟರ್ ಆಗಿದೆ. ಮಳೆ ಕೊರತೆ ಮುಂದುವರೆಯುತ್ತಿರುವುದರಿಂದ ರಾಜ್ಯದಲ್ಲಿ ಉಂಟಾಗಿರುವ ಬರದ ಪರಿಸ್ಥಿತಿ ದೂರವಾಗುವ ಲಕ್ಷಣಗಳು ಸದ್ಯಕ್ಕೆ ಗೋಚರಿಸುತ್ತಿಲ್ಲ.

RELATED ARTICLES

Latest News