Friday, November 22, 2024
Homeರಾಜ್ಯವಿಶೇಷ ಚೇತನರ ಅಭಿವೃದ್ಧಿಗೆ ಹೊಸ ಯೋಜನೆ : ಸಿಎಂ ಸಿದ್ದರಾಮಯ್ಯ

ವಿಶೇಷ ಚೇತನರ ಅಭಿವೃದ್ಧಿಗೆ ಹೊಸ ಯೋಜನೆ : ಸಿಎಂ ಸಿದ್ದರಾಮಯ್ಯ

ಬೆಂಗಳೂರು,ಡಿ.3- ವಿಶೇಷ ಚೇತನರ ಅಭಿವೃದ್ಧಿಗೆ ತಮ್ಮ ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿದ್ದು, ಅಗತ್ಯವಾದ ಆರ್ಥಿಕ ನೆರವನ್ನು ಒದಗಿಸುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಮಹಿಳಾ ಮತ್ತು ಮಕ್ಕಳಾಭಿವೃದ್ಧಿ ಇಲಾಖೆಯ ವತಿಯಿಂದ ನಗರದ ಕಂಠೀರವ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ವಿಶ್ವ ವಿಕಲಚೇತನರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದು ವಿಶ್ವಾದ್ಯಂತ ವಿಕಲಚೇತನ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.

ದೇಶದ ಜಿಡಿಪಿ ಹೊರಸೂಸುವಿಕೆ ಶೇ.33 ಕಡಿಮೆಯಾಗಿದೆಯಂತೆ

ಅಂಗವೈಕಲ್ಯ ಇರುವವರನ್ನು ಅಂಗವಿಕಲರು ಎಂದು ಕರೆಯುವಂತಿಲ್ಲ. ಏಕೆಂದರೆ ಇತ್ತೀಚೆಗೆ ನಡೆದ ಅಂತರಾಷ್ಟ್ರೀಯ ಕ್ರೀಡೆಗಳಲ್ಲಿ ಅತಿ ಹೆಚ್ಚು ಪದಕಗಳನ್ನು ಗೆಲ್ಲುವ ಮೂಲಕ ತಾವು ಸಬಲರು ಎಂದು ಸಾಬೀತುಪಡಿಸಿದ್ದಾರೆ. ಹೀಗಾಗಿ ಅವರನ್ನು ಕೆಲಸಕ್ಕೆ ಬಾರದವರು, ಸಮಾಜಕ್ಕೆ ಹೊರೆ ಎಂದು ಪರಿಗಣಿಸುವಂತಿಲ್ಲ ಎಂದರು.

2011ರ ಜನಗಣತಿಯ ಪ್ರಕಾರ ರಾಜ್ಯದಲ್ಲಿ 13,24,205 ವಿಶೇಷ ಚೇತನರಿದ್ದಾರೆ. ರಾಜ್ಯಸರ್ಕಾರ 2015 ರಲ್ಲಿ ಅಂಗವಿಕಲರ ಹಕ್ಕುಗಳ ಅಧಿನಿಯಮವನ್ನು ರಚಿಸಿದೆ. ಸಮಾಜದಲ್ಲಿ ಎಲ್ಲರ ಜೊತೆ ಬೆರೆತು ಬದುಕುವ ಅವಕಾಶ ಅವರಿಗಿದೆ. ಉದ್ಯೋಗ ಮಾಡಿ ಬದುಕುವ ಹಕ್ಕುಗಳಿವೆ. ಅದನ್ನು ರಕ್ಷಣೆ ಮಾಡಲು ತಮ್ಮ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.

4,000 ಯಂತ್ರಕಾಲಿಕ ತ್ರೈಸೈಕಲ್‍ಗಳನ್ನು ಹಂಚಿಕೆ ಮಾಡಲು ನಿರ್ಧರಿಸಲಾಗಿದೆ. ಬಜೆಟ್‍ನಲ್ಲಿ 384 ಕೋಟಿ ರೂ.ಗಳನ್ನು ಒದಗಿಸಿದ್ದೇವೆ. 2 ಕೋಟಿ ರೂ. ವೆಚ್ಚದಲ್ಲಿ 7 ಜಿಲ್ಲೆಗಳಲ್ಲಿ ಬುದ್ಧಿಮಾಂದ್ಯರ ವಸತಿ ಶಾಲೆಗಳನ್ನು ಸ್ಥಾಪಿಸಲಾಗುತ್ತಿದ್ದು, ಈ ವರ್ಷದಿಂದಲೇ ಆರಂಭಗೊಳ್ಳುತ್ತಿದೆ. ವಿಶೇಷ ಚೇತನರ ಶೈಕ್ಷಣಿಕ, ವೈದ್ಯಕೀಯ, ಪುನರ್‍ವಸತಿಗೆ ಇಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ತಾವು ಇತ್ತೀಚೆಗೆ ನಡೆಸಿದ ಜನತಾದರ್ಶನದಲ್ಲಿ ಹೆಚ್ಚು ವಿಕಲಚೇತನರು ಭಾಗವಹಿಸಿದ್ದರು. ಮನೆ, ಕೆಲಸ ಸೇರಿದಂತೆ ಹಲವಾರು ಸೌಲಭ್ಯಗಳಿಗಾಗಿ ಅರ್ಜಿ ಸಲ್ಲಿಸಿದ್ದರು. ವಿಶೇಷ ಚೇತನರು ಮರಣ ಹೊಂದಿದ ಸಂದರ್ಭದಲ್ಲಿ ನೀಡಲಾಗುವ 50 ಸಾವಿರ ರೂ.ಗಳ ಪರಿಹಾರವನ್ನು 1 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ. ವಿಕಲಚೇತನರ ಶೇ.50 ರಷ್ಟು ಮೀಸಲಾತಿಯನ್ನು ಕಡ್ಡಾಯ ಜಾರಿಗೆ ರಾಜ್ಯಸರ್ಕಾರ ಆದೇಶಿಸಿದೆ ಎಂದು ಹೇಳಿದರು.

ವಿಶೇಷಚೇತನರಲ್ಲಿ ಬಹುಮುಖ ಪ್ರತಿಭೆಗಳಿರುತ್ತವೆ. ಇಂದಿನ ಕಾರ್ಯಕ್ರಮದಲ್ಲಿ ವಿವಿಧ ಚಿತ್ರಕಲಾ ಸ್ಪರ್ಧೆಗಳನ್ನು ನೋಡಿ ತಮಗೆ ಸಂತೋಷವಾಯಿತು. ತಮ್ಮ ಭಾವಚಿತ್ರವನ್ನೂ ಬರೆದುಕೊಟ್ಟಿದ್ದಾರೆ ಎಂದು ಸ್ಮರಿಸಿಕೊಂಡರು. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸೇರಿದಂತೆ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

RELATED ARTICLES

Latest News