Wednesday, February 28, 2024
Homeರಾಜ್ಯತೆಲಂಗಾಣ ಗೆದ್ದು ಮತ್ತೆ ಟ್ರಬಲ್ ಶೂಟರ್ ಎಂದು ಸಾಬೀತು ಪಡಿಸಿದ ಡಿಕೆಶಿ

ತೆಲಂಗಾಣ ಗೆದ್ದು ಮತ್ತೆ ಟ್ರಬಲ್ ಶೂಟರ್ ಎಂದು ಸಾಬೀತು ಪಡಿಸಿದ ಡಿಕೆಶಿ

ಬೆಂಗಳೂರು,ಡಿ.3- ತೆಲಂಗಾಣ ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ಗೆಲ್ಲಿಸಿಕೊಳ್ಳಲು ರಣತಂತ್ರ ರೂಪಿಸಿ ಯಶಸ್ವಿಯಾಗುವ ಮೂಲಕ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತೊಮ್ಮೆ ಟ್ರಬಲ್ ಶೂಟರ್ ಎಂದು ಸಾಬೀತು ಪಡಿಸಿದ್ದಾರೆ. ಹೈಕಮಾಂಡ್ ಡಿ.ಕೆ.ಶಿವಕುಮಾರ್ ಅವರಿಗೆ ತೆಲಂಗಾಣ ವಿಧಾನಸಭೆ ಚುನಾವಣೆಯ ಜವಾಬ್ದಾರಿ ವಹಿಸಿತ್ತು.

ಹೀಗಾಗಿ ಡಿ.ಕೆ.ಶಿವಕುಮಾರ್ ಅವರು ಸುಮಾರು ಒಂದು ವಾರಕ್ಕೂ ಹೆಚ್ಚು ಕಾಲ ತೆಲಂಗಾಣದಲ್ಲಿ ವಾಸ ಮಾಡಿ ಚುನಾವಣಾ ಉಸ್ತುವಾರಿಯನ್ನು ನೋಡಿಕೊಂಡಿದ್ದರು. ರಾಜ್ಯ ಕಾಂಗ್ರೆಸ್‍ನಿಂದ ಸುಮಾರು 70 ಕ್ಕೂ ಹೆಚ್ಚು ಮಂದಿ ಕಾರ್ಯಕರ್ತರನ್ನು ಚುನಾವಣಾ ಉಸ್ತುವಾರಿಗಾಗಿ ನಿಯೋಜಿಸಲಾಗಿತ್ತು.

ಡಿ.6 ರಂದು ಪ್ರತಿಪಕ್ಷಗಳ ನಾಯಕರ ಸಭೆ ಕರೆದ ಮಲ್ಲಿಕಾರ್ಜುನ ಖರ್ಗೆ

ಶಾಸಕರು, ಸಚಿವರು, ವಿಧಾನಪರಿಷತ್ ಸದಸ್ಯರು, ಪ್ರಧಾನ ಕಾರ್ಯದರ್ಶಿಗಳು ಲೋಕಸಭಾ ಕ್ಷೇತ್ರಗಳ ಉಸ್ತುವಾರಿಯನ್ನು ವಹಿಸಿಕೊಂಡು ಹಗಲಿರುಳು ಶ್ರಮಿಸಿದ್ದರು. ತೆಲಂಗಾಣದಲ್ಲಿ ಸ್ಥಳೀಯ ನಾಯಕತ್ವ ಅಷ್ಟೇನೂ ಪ್ರಭಾವವಾಗಿಲ್ಲದೇ ಇದ್ದರೂ ಕೂಡ ಕರ್ನಾಟಕದಲ್ಲಿ ಆಡಳಿತಾರೂಢ ಕಾಂಗ್ರೆಸ್ ನೀಡಿದ ನೆರವು ಮತ್ತು ಬೆಂಬಲ ಪಕ್ಷದ ಗೆಲುವಿಗೆ ಮಹತ್ವದ ಪಾತ್ರ ವಹಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಮೂರ್ನಾಲ್ಕು ದಿನ ತೆಲಂಗಾಣದ ವಿವಿಧ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಿದ್ದರು. ಇದೆಲ್ಲದರ ಪರಿಣಾಮ ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರದ ಗದ್ದುಗೆ ಹಿಡಿದಿದೆ.

ಶ್ರೀಲಂಕಾ ಯೋಗಕ್ಷೇಮಕ್ಕೆ ಭಾರತ ಬದ್ಧ

ಆಂದ್ರಪ್ರದೇಶದಿಂದ ವಿಭಜನೆಗೊಂಡು ಪ್ರತ್ಯೇಕ ರಾಜ್ಯವಾದ ಬಳಿಕ ಟಿಆರ್‍ಎಸ್ ಈಗಿನ ಬಿಆರ್‍ಎಸ್ ಪಕ್ಷವೇ ಗದ್ದುಗೆ ಹಿಡಿದಿತ್ತು. ಕೆ.ಸಿ.ಚಂದ್ರಶೇಖರ್ ಎರಡು ಅವಗೆ ಮುಖ್ಯಮಂತ್ರಿಯಾಗಿದ್ದರು. ರಾಜ್ಯವಿಭಜನೆಗೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅಂಗೀಕಾರ ನೀಡಿದ್ದರೂ ಅದರ ಫಲವನ್ನು ಟಿಆರ್‍ಎಸ್ ಅನುಭವಿಸಿತ್ತು. ಕರ್ನಾಟಕ ಕಾಂಗ್ರೆಸ್ ನಾಯಕರ ಬೆಂಬಲದಿಂದಾಗಿ ತೆಲಂಗಾಣ ಕೈವಶವಾಗಿದೆ.

RELATED ARTICLES

Latest News