Homeಜಿಲ್ಲಾ ಸುದ್ದಿಗಳುಬಾವಿಯೊಳಗೆ ಬಿದ್ದಿದ್ದ ನಾಯಿಯನ್ನು ರಕ್ಷಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ

ಬಾವಿಯೊಳಗೆ ಬಿದ್ದಿದ್ದ ನಾಯಿಯನ್ನು ರಕ್ಷಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ

ಚಿಕ್ಕಬಳ್ಳಾಪುರ, ಅ 26- ಸುಮಾರು 80 ಅಡಿಯ ತೆರೆದ ಬಾವಿಯೊಳಗೆ ಕಾಲು ಜಾರಿ ಬಿದ್ದ ನಾಯಿಯೊಂದನ್ನು ತಾಲೂಕಿನ ಕೊಂಡೇನಹಳ್ಳಿ ಗ್ರಾಮದಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಸತತ ಮೂರು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಜೀವಂತವಾಗಿ ರಕ್ಷಿಸಿದ್ದಾರೆ.

ಕೊಂಡೇನಹಳ್ಳಿ ಗ್ರಾಮದ ಮಂಜುನಾಥ್‌ ಅವರಿಗೆ ಸೇರಿದ ಜಮೀನಿನ ಪಕ್ಕದಲ್ಲಿದ್ದ ನೀರು ಹಾಗೂ ಮೆಟ್ಟಿಲುಗಳೂ ಇಲ್ಲದ ಬಾವಿಗೆ ನಾಯಿ ಆಕಸಿಕವಾಗಿ ಕಾಲು ಜಾರಿ ಬಿದ್ದಿತ್ತು. ಮೇಲಕ್ಕೆ ಬರಲಾಗದೆ ಅದು ಒದ್ದಾಡುತ್ತಿದ್ದನ್ನು ಕಂಡು ನಾಯಿಯನ್ನು ರಕ್ಷಿಸಲು ಗ್ರಾಮಸ್ಥರು ಚಿಕ್ಕಬಳ್ಳಾಪುರದ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದಾರೆ.

ಕೂಡಲೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಹಗ್ಗ ಮತ್ತು ಬುಟ್ಟಿಯ ನೆರವಿನಿಂದ ಬಾವಿಗಿಳಿದು, ಹರಸಾಹಸಪಟ್ಟು ನಾಯಿಯನ್ನು ಸುರಕ್ಷಿತವಾಗಿ ಮೇಲಕ್ಕೆತ್ತಿದರು. ಪ್ರಭಾರ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ವಸಂತ್‌ ಮೇತ್ರಿ ಅವರ ನೇತತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಸಿಬ್ಬಂದಿ ರವೀಂದ್ರ ಸಂಗಮ, ಚಾಲಕರಾದ ಬಸವರಾಜ್‌‍, ನಾಗಪ್ಪ ಶಿವಾಪುರ, ಮಲ್ಲಿಕಾರ್ಜುನ ಕಾಡಪ್ಪನವರ, ದತ್ತಾತ್ರೇಯ ಹಾಗೂ ಬೋರಗಾವಿ ಅವರುಗಳು ನಾಯಿಯನ್ನು ಜೀವಂತವಾಗಿ ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ . ನಾಯಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳದ ಸಿಬ್ಬಂದಿಯ ಸಮಯಪ್ರಜ್ಞೆ ಮತ್ತು ಸಾಹಸಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

RELATED ARTICLES

Latest News