Homeರಾಜಕೀಯಸಚಿವರಾದ ಬಳಿಕ ಜನರಿಂದ ದೂರವಾಗುತ್ತಿದ್ದಾರಾ ಶಿವಲಿಂಗೇಗೌಡರು..?

ಸಚಿವರಾದ ಬಳಿಕ ಜನರಿಂದ ದೂರವಾಗುತ್ತಿದ್ದಾರಾ ಶಿವಲಿಂಗೇಗೌಡರು..?

ಅರಸೀಕೆರೆ, ಅ.26- ಕ್ಷೇತ್ರದ ಜನರ ದಶಕಗಳ ಕನಸಿನಂತೆ ಶಾಸಕ ಕೆ.ಎಂ. ಶಿವಲಿಂಗೇಗೌಡರು ರಾಜ್ಯ ಸರ್ಕಾರದಲ್ಲಿ ಸಚಿವರಾಗಿದ್ದಾರೆ. ಅಬಕಾರಿ ಇಲಾಖೆಯ ಜವಾಬ್ದಾರಿಯೊಂದಿಗೆ ಜಿಲ್ಲಾ ಉಸ್ತುವಾರಿಯ ಹೊಣೆಯನ್ನೂ ಹೊತ್ತಿರುವ ಅವರು, ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡುತ್ತಿದ್ದಾರೆ. ಆದರೆ ಶಾಸಕರಾಗಿದ್ದಾಗ ಜನರೊಂದಿಗೆ ಆತೀಯವಾಗಿ ಬೆರೆಯುತ್ತಿದ್ದ ಅವರ ನಡೆ, ಸಚಿವರಾದ ಬಳಿಕ ಬದಲಾಗಿದೆ ಎಂಬ ಮಾತುಗಳು ಅವರ ಆಪ್ತ ವಲಯದಲ್ಲೇ ಕೇಳಿಬರುತ್ತಿವೆ.

ಸಚಿವರಾದ ಬಳಿಕ ಕ್ಷೇತ್ರದ ಸಾಮಾನ್ಯ ಜನರು ಮಾತ್ರವಲ್ಲದೆ, ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರಿಗೂ ಅವರನ್ನು ಭೇಟಿಯಾಗುವುದು ಕಷ್ಟವಾಗಿದೆ ಎಂಬ ಅಸಮಾಧಾನ ವ್ಯಕ್ತವಾಗುತ್ತಿದೆ. ಶಿವಲಿಂಗೇಗೌಡರು ಸಚಿವರಾಗಬೇಕು ಎಂದು ಬಯಸಿದ್ದ ಬೆಂಬಲಿಗರು, ಈಗ ಅವರಿಂದ ಹೆಚ್ಚಿನ ಸಮಯ ಮತ್ತು ಸಂಪರ್ಕವನ್ನು ನಿರೀಕ್ಷಿಸುತ್ತಿದ್ದಾರೆ. ಕ್ಷೇತ್ರದ ಜನರ ಸಹಕಾರದಿಂದ ರಾಜಕೀಯವಾಗಿ ಬೆಳೆದಿರುವ ಅವರು, ತಮನ್ನು ಬೆಳೆಸಿದ ಕಾರ್ಯಕರ್ತರು ಹಾಗೂ ಮುಖಂಡರನ್ನು ಮರೆಯಬಾರದು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಮಾಜಿ ವಿಧಾನಸಭಾ ಚುನಾವಣೆಯ ಪರಾಜಿತ ಅಭ್ಯರ್ಥಿ ಎನ್‌.ಆರ್‌. ಸಂತೋಷ್‌, ಶಿವಲಿಂಗೇಗೌಡರು ಸಚಿವರಾಗಿರುವುದು ಕ್ಷೇತ್ರದ ನಾಗರಿಕನಾಗಿ ಹೆಮೆಯ ಸಂಗತಿ. ಅಬಕಾರಿ ಇಲಾಖೆಯ ದೊಡ್ಡ ಜವಾಬ್ದಾರಿಯಿಂದಾಗಿ ಸ್ಥಳೀಯರಿಗೆ ಹೆಚ್ಚಿನ ಸಮಯ ನೀಡಲು ಸಾಧ್ಯವಾಗದಿರಬಹುದು. ಆದ್ದರಿಂದ ಕಾರ್ಯಕರ್ತರು ಹಾಗೂ ಮುಖಂಡರು ಸ್ವಲ್ಪ ಸಮಯಾವಕಾಶ ನೀಡಬೇಕು ಎಂದಿದ್ದಾರೆ.

ಜಿಲ್ಲಾ ಕಾಂಗ್ರೆಸ್‌‍ ಅಧ್ಯಕ್ಷ ಶಶಿಧರ್‌ ಮಾತನಾಡಿ, ಸಚಿವರು ಅಬಕಾರಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಜವಾಬ್ದಾರಿಯೊಂದಿಗೆ ಹಾಸನಾಂಬೆ ಮಹೋತ್ಸವದ ಪೂರ್ವಸಿದ್ಧತೆಯಲ್ಲೂ ತೊಡಗಿಸಿಕೊಂಡಿದ್ದು, ಕ್ಷೇತ್ರ ಮಾತ್ರವಲ್ಲದೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಜೆಡಿಎಸ್‌‍ ಮುಖಂಡ ಹೊಸೂರು ಗಂಗಾಧರ್‌ ಮಾತನಾಡಿ, ಶಿವಲಿಂಗೇಗೌಡರು ಸಚಿವ ಸ್ಥಾನಕ್ಕೇರಲು ಹಲವರ ಪ್ರೋತ್ಸಾಹ ಮತ್ತು ಸಹಕಾರ ಕಾರಣವಾಗಿದೆ. ಅವರನ್ನು ಬೆಳೆಸಿದವರನ್ನು ಸರಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದಿದ್ದಾರೆ.
ಮುಂಬರುವ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಹಾಗೂ ನಗರಸಭೆ ಚುನಾವಣೆಗಳ ಹಿನ್ನೆಲೆಯಲ್ಲಿ ಕಾರ್ಯಕರ್ತರು ಮತ್ತು ಮುಖಂಡರೊಂದಿಗಿನ ಸಂಪರ್ಕವನ್ನು ಬಲಪಡಿಸಿಕೊಳ್ಳುವುದು ಅಗತ್ಯ ಎಂಬ ಅಭಿಪ್ರಾಯ ಕ್ಷೇತ್ರದಲ್ಲಿ ವ್ಯಕ್ತವಾಗುತ್ತಿದೆ.

RELATED ARTICLES

Latest News