Homeರಾಷ್ಟ್ರೀಯಉತ್ತರ ಪ್ರದೇಶದಲ್ಲಿ ಮತ್ತೆ ಯೋಗಿ ಸರ್ಕಾರ ಬರಲು ಬೀಡಲ್ಲ ; ಓವೈಸಿ

ಉತ್ತರ ಪ್ರದೇಶದಲ್ಲಿ ಮತ್ತೆ ಯೋಗಿ ಸರ್ಕಾರ ಬರಲು ಬೀಡಲ್ಲ ; ಓವೈಸಿ

ಮುಜಾಫರ್‌ನಗರ, ಅ.26- ಉತ್ತರ ಪ್ರದೇಶದಲ್ಲಿ ಬಿಜೆಪಿ ಸರ್ಕಾರ ರಚನೆಯಾಗದಂತೆ ತಡೆಯಲು ತಮ್ಮ ಪಕ್ಷವು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಲಿದೆ ಎಂದು ಆಲ್‌ ಇಂಡಿಯಾ ಮಜ್ಲಿಸ್‌‍-ಎ-ಇತ್ತೆಹಾ ಮುಸ್ಲಿಮೀನ್‌ (ಎಐಎಂಐಎಂ) ಮುಖ್ಯಸ್ಥ ಅಸದುದ್ದೀನ್‌ ಓವೈಸಿ ಹೇಳಿದ್ದಾರೆ.

ಶಾಮ್ಲಿ ಜಿಲ್ಲೆಯ ಕೈರಾನಾದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಓವೈಸಿ, ಬಿಜೆಪಿ ಸರ್ಕಾರ ರಚನೆಯಾಗದಂತೆ ನೋಡಿಕೊಳ್ಳಲು ನಾವು ಎಲ್ಲ ಪ್ರಯತ್ನಗಳನ್ನು ಮಾಡುತ್ತೇವೆ ಎಂದು ಹೇಳಿದರು. ಯೋಗಿ ಆದಿತ್ಯನಾಥ್‌ ಅವರು ಮೂರನೇ ಬಾರಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗುವುದನ್ನು ತಮ್ಮ ಪಕ್ಷ ಬಯಸುವುದಿಲ್ಲ ಎಂದೂ ಅವರು ತಿಳಿಸಿದರು.

ಇತರ ವಿರೋಧ ಪಕ್ಷಗಳಿಗೂ ಇದೇ ಗುರಿ ಇದ್ದರೆ, ಅವರೊಂದಿಗೆ ಕೈಜೋಡಿಸಲು ಎಐಎಂಐಎಂ ಸಿದ್ಧವಾಗಿದೆ ಎಂದು ಅವರು ಹೇಳಿದರು. ಅಲ್ಪಸಂಖ್ಯಾತರು ಮತ್ತು ಸಮಾಜದ ಇತರ ದುರ್ಬಲ ವರ್ಗಗಳ ಸಮಸ್ಯೆಗಳನ್ನು ಎತ್ತಿ ಹಿಡಿಯುವಲ್ಲಿ ವಿರೋಧ ಪಕ್ಷಗಳು ವಿಫಲವಾಗಿವೆ ಎಂದು ಓವೈಸಿ ಟೀಕಿಸಿದರು.

ಬಿಜೆಪಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ರಾಜ್ಯದಲ್ಲಿ ಮಸೀದಿಗಳನ್ನು ಧ್ವಂಸಗೊಳಿಸಲಾಗುತ್ತಿದೆ ಮತ್ತು ಹಾಫ್‌ ಎನ್‌ಕೌಂಟರ್‌ಗಳು (ಗಾಯಗೊಳಿಸುವ ಎನ್‌ಕೌಂಟರ್‌ಗಳು) ಮುಂದುವರಿದಿವೆ ಎಂದು ಆರೋಪಿಸಿದ ಅವರು, ಈ ವಿಷಯಗಳ ಬಗ್ಗೆ ವಿರೋಧ ಪಕ್ಷಗಳು ಮೌನ ವಹಿಸಿವೆ ಎಂದು ದೂರಿದರು.

RELATED ARTICLES

Latest News