Homeಜಿಲ್ಲಾ ಸುದ್ದಿಗಳುಕಲಬುರಗಿ ಕೆಬಿಎಸ್‌‍ ಬ್ಯಾಂಕ್‌ನಲ್ಲಿ ನಕಲಿ ಚಿನ್ನ ಅಡವಿಟ್ಟು 76 ಲಕ್ಷಕ್ಕೂ ಹೆಚ್ಚು ಸಾಲ ಪಡೆದು ವಂಚನೆ

ಕಲಬುರಗಿ ಕೆಬಿಎಸ್‌‍ ಬ್ಯಾಂಕ್‌ನಲ್ಲಿ ನಕಲಿ ಚಿನ್ನ ಅಡವಿಟ್ಟು 76 ಲಕ್ಷಕ್ಕೂ ಹೆಚ್ಚು ಸಾಲ ಪಡೆದು ವಂಚನೆ

ಕಲಬುರಗಿ, ಅ.23- ನಗರದ ಕೃಷ್ಣಾ ಸಮೃದ್ಧಿ (ಕೆಬಿಎಸ್‌‍) ಬ್ಯಾಂಕ್‌ನಲ್ಲಿ 700 ಗ್ರಾಂಗೂ ಅಧಿಕ ನಕಲಿ ಚಿನ್ನಾಭರಣ ಅಡವಿಟ್ಟು 76 ಲಕ್ಷಕ್ಕೂ ಹೆಚ್ಚು ಸಾಲ ಪಡೆದಿರುವ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ.ಬ್ಯಾಂಕಿನ ವಾರ್ಷಿಕ ಆಡಿಟ್‌ ವೇಳೆ ನಕಲಿ ಚಿನ್ನಾಭರಣ ಅಡವಿಟ್ಟಿರುವುದು ಪತ್ತೆಯಾಗಿದ್ದು, ಈ ಸಂಬಂಧ ಬ್ಯಾಂಕ್‌ ಮ್ಯಾನೇಜರ್‌ ಹರ್ಷಾ ಕುಲಕರ್ಣಿ ಅವರು ಕಲಬುರಗಿಯ ಬ್ರಹ್ಮಪುರ ಪೊಲೀಸ್‌‍ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಬ್ಯಾಂಕಿನ ಮಾಜಿ ಮ್ಯಾನೇಜರ್‌ ಹಾಗೂ ಚಿನ್ನಾಭರಣಗಳ ಪರಿಶೀಲನೆ ನಡೆಸುತ್ತಿದ್ದ ಅಕ್ಕಸಾಲಿಗನ ವಿರುದ್ಧ ದೂರು ನೀಡಲಾಗಿದೆ. ನಕಲಿ ಚಿನ್ನಾಭರಣಗಳನ್ನು ಅಡವಿಟ್ಟು ಸಾಲ ಪಡೆಯುವಲ್ಲಿ ಇವರ ಪಾತ್ರವಿದೆಯೇ ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರಕರಣದಲ್ಲಿ ದೊಡ್ಡ ಜಾಲ ಕಾರ್ಯನಿರ್ವಹಿಸಿರುವ ಸಾಧ್ಯತೆಯನ್ನೂ ಪೊಲೀಸರು ಪರಿಶೀಲಿಸುತ್ತಿದ್ದಾರೆ. ಬ್ಯಾಂಕಿನ ಆಂತರಿಕ ಪರಿಶೀಲನಾ ವ್ಯವಸ್ಥೆ ಹಾಗೂ ಭದ್ರತಾ ಕ್ರಮಗಳಲ್ಲಿನ ಲೋಪಗಳು ಕಂಡುಬಂದಿದೆ.

ಇದೇ ವೇಳೆ, ಪ್ರಕರಣದ ದೂರುದಾರರಾಗಿರುವ ಪ್ರಸ್ತುತ ಬ್ಯಾಂಕ್‌ ಮ್ಯಾನೇಜರ್‌ ಹರ್ಷಾ ಕುಲಕರ್ಣಿ ಅವರ ವಿರುದ್ಧವೂ ಈ ಹಿಂದೆ ಗಂಭೀರ ಆರೋಪ ಕೇಳಿಬಂದಿರುವುದು ಪ್ರಕರಣಕ್ಕೆ ಮತ್ತೊಂದು ತಿರುವು ನೀಡಿದೆ. ಪ್ರಕರಣದ ಸಂಪೂರ್ಣ ತನಿಖೆಯ ಬಳಿಕವೇ ನಕಲಿ ಚಿನ್ನದ ವಂಚನೆಯ ರಹಸ್ಯ ಬಯಲಿಗೆ ಬರಲಿದೆ.

RELATED ARTICLES
spot_img

Latest News