Homeರಾಜ್ಯದಸರಾದ ಹತ್ತು ದಿನಗಳಲ್ಲಿ ಮೈಸೂರು ಮೃಗಾಲಯಕ್ಕೆ ₹1.93 ಕೋಟಿ ಆದಾಯ

ದಸರಾದ ಹತ್ತು ದಿನಗಳಲ್ಲಿ ಮೈಸೂರು ಮೃಗಾಲಯಕ್ಕೆ ₹1.93 ಕೋಟಿ ಆದಾಯ

ಮೈಸೂರು, ಅ.23- ವಿಶ್ವವಿಖ್ಯಾತ ಮೈಸೂರು ಶ್ರೀ ಚಾಮರಾಜೇಂದ್ರ ಮೃಗಾಲಯಕ್ಕೆ 2026ರ ವಿಜಯದಶಮಿ ದಿನದಂದು 19,745 ಮಂದಿ ಭೇಟಿ ನೀಡಿದ್ದು, ₹25.15 ಲಕ್ಷ ಆದಾಯ ಸಂಗ್ರಹವಾಗಿದೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕಿ ಪಿ. ಅನುಷ ತಿಳಿಸಿದ್ದಾರೆ.

ಈ ವರ್ಷದ ದಸರಾ ಹಬ್ಬದ ಹತ್ತು ದಿನಗಳ ಅವಧಿಯಲ್ಲಿ ಮೃಗಾಲಯಕ್ಕೆ ಒಟ್ಟು 1.57 ಲಕ್ಷ ವೀಕ್ಷಕರು ಭೇಟಿ ನೀಡಿದ್ದು, ₹193.19 ಲಕ್ಷ ಆದಾಯ ದಾಖಲಾಗಿದೆ. ಆಯುಧ ಪೂಜೆಯಂದು 20,264 ಮಂದಿ ಭೇಟಿ ನೀಡಿದ್ದು, ₹25.67 ಲಕ್ಷ ಆದಾಯ ಸಂಗ್ರಹವಾಗಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ವಿಜಯದಶಮಿ ದಿನದಂದು ವೀಕ್ಷಕರ ಸಂಖ್ಯೆ ಕಡಿಮೆಯಾಗಿದೆ. 2025ರಲ್ಲಿ ವಿಜಯದಶಮಿಯಂದು 27,272 ಮಂದಿ ಭೇಟಿ ನೀಡಿದ್ದು, ₹34.07 ಲಕ್ಷ ಆದಾಯ ಬಂದಿತ್ತು. 2024ರಲ್ಲಿ 34,659 ಮಂದಿ ಭೇಟಿ ನೀಡಿದ್ದು, ₹35.54 ಲಕ್ಷ ಆದಾಯ ದಾಖಲಾಗಿತ್ತು.

2023ರ ದಸರಾ ಅವಧಿಯಲ್ಲಿ 1.65 ಲಕ್ಷ ವೀಕ್ಷಕರಿಂದ ₹167.10 ಲಕ್ಷ ಹಾಗೂ 2022ರಲ್ಲಿ 1.55 ಲಕ್ಷ ವೀಕ್ಷಕರಿಂದ ₹153.51 ಲಕ್ಷ ಆದಾಯ ಸಂಗ್ರಹವಾಗಿತ್ತು. ಈ ವರ್ಷದ ದಸರಾ ಅವಧಿಯಲ್ಲಿ ಆದಾಯ ₹193.19 ಲಕ್ಷಕ್ಕೆ ಏರಿಕೆಯಾಗಿದೆ.

ದಸರಾ ಸಂದರ್ಭದಲ್ಲಿ ಮೃಗಾಲಯದಲ್ಲಿ ಸ್ವಚ್ಛತೆ ಮತ್ತು ಶಾಂತಿ ಕಾಪಾಡಲು ಸಹಕರಿಸಿದ ವೀಕ್ಷಕರು, ಪೊಲೀಸ್ ಸಿಬ್ಬಂದಿ ಹಾಗೂ ಮೃಗಾಲಯದ ಸಿಬ್ಬಂದಿಗೆ ಕಾರ್ಯನಿರ್ವಾಹಕ ನಿರ್ದೇಶಕಿ ಪಿ. ಅನುಷ ಧನ್ಯವಾದ ತಿಳಿಸಿದ್ದಾರೆ.

RELATED ARTICLES
spot_img

Latest News