ಅರಸೀಕೆರೆ,ಫೆ.15- ಬಾನಂಗಳದಲ್ಲಿ ಮದ್ದುಗುಂಡುಗಳ ಚಿತ್ತಾರ ಅಭಿಮಾನಿಗಳ ಹರ್ಷೋದ್ಘಾರದ ನಡುವೆ ರಾಜ್ಯ ಗೃಹಮಂಡಳಿಯ ಅಧ್ಯಕ್ಷರೂ ಆದ ಶಾಸಕ ಕೆ.ಎಂ.ಶಿವಲಿಂಗೇಗೌಡರ 68ನೇ ಹುಟ್ಟುಹಬ್ಬವು ಅದ್ದೂರಿಯಾಗಿ ನಡೆಯಿತು.
ಕೆಎಂಎಸ್ ಅಭಿಮಾನಿಗಳ ಬಳಗದ ವತಿಯಿಂದ ತಾಲೂಕಿನ ಗಂಡಸಿ ಹೆಂಡ್ ಪೋಸ್ಟ್ ನಲ್ಲಿ ಆಯೋಜಿಸಿದ್ದ ಹುಟ್ಟುಹಬ್ಬದ ಸಮಾರಂಭದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಸೇರಿದ ಅಭಿಮಾನಿಗಳು, ತಮ ನೆಚ್ಚಿನ ನಾಯಕನ ಪರ ಘೋಷಣೆ ಕೂಗುತ್ತಾ ಪುಷ್ಪವೃಷ್ಟಿಯೊಂದಿಗೆ ವೇದಿಕೆಗೆ ಬರಮಾಡಿಕೊಂಡರು.
ಆಕರ್ಷಕ ಎಲ್ ಇ ಡಿ ವೇದಿಕೆಯ ಮೇಲೆ ಮೊದಲೇ ಸಿದ್ದಪಡಿಸಿ ಇಡಲಾಗಿದ್ದ ಬೃಹತ್ ಕೇಕ್ ಕತ್ತರಿಸುವ ಮೂಲಕ ಹುಟ್ಟುಹಬ್ಬದ ಸಭಾ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಲೋಕಸಭಾ ಸದಸ್ಯ ಶ್ರೇಯಸ್ ಪಟೇಲ್, ಮಾಜಿ ಶಾಸಕ ಪುಟ್ಟೇಗೌಡ,ವಿಧಾನ ಪರಿಷತ್ ಮಾಜಿ ಸದಸ್ಯ ಗೋಪಾಲಸ್ವಾಮಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಹುಚ್ಚೇಗೌಡ,ಉಪಾಧ್ಯಕ್ಷ ಬಿಳಿ ಚೌಡಯ್ಯ, ಸೇರಿದಂತೆ ತಾಲೂಕು ಹಾಗೂ ಜಿಲ್ಲೆಯ ಕೈ ಪಕ್ಷದ ನಾಯಕರು ಪಾಲ್ಗೊಂಡು ಶಿವಲಿಂಗೇಗೌಡರಿಗೆ ಹುಟ್ಟು ಹಬ್ಬದ ಶುಭಾಶಯಗಳು ಕೋರಿದ್ದು ವಿಶೇಷವಾಗಿ ಗಮನಸೆಳೆಯಿತು.
ಸಂಸದ ಶ್ರೇಯಾಸ್ ಪಟೇಲ್ ಮಾತನಾಡಿ, ಶಿವಲಿಂಗೇಗೌಡರು ವ್ಯಕ್ತಿಯಲ್ಲ ಅವರು ನಮೆಲ್ಲರಿಗೂ ಶಕ್ತಿಯಾಗಿದ್ದಾರೆ ರಾಜಕೀಯ ಕ್ಷೇತ್ರದಲ್ಲಿ ಅವರ ನಡೆನುಡಿ ಅಷ್ಟೇ ಅಲ್ಲ ಸರ್ಕಾರದ ಯೋಜನೆಗಳನ್ನ ಬಳಸಿಕೊಳ್ಳುವ ಅವರ ರೀತಿ ನೀತಿ ಕೂಡ ನಮೆಲ್ಲರಿಗೂ ಆದರ್ಶವಾಗಿದೆ ಎಂದರು.
ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದ ಶಿವಲಿಂಗೇಗೌಡರು, ಸಾಮಾನ್ಯ ಕುಟುಂಬದಲ್ಲಿ ಜನಿಸಿದ ನನ್ನನ್ನು ರಾಜಕೀಯವಾಗಿ ಬೆಳೆಸಿದ ಕ್ಷೇತ್ರದ ಜನತೆಯ ಋಣ ತೀರಿಸಲು ಸಾಧ್ಯವೇ ಇಲ್ಲ. ನೀವು ನನಗೆ ನೀಡಿದ ರಾಜಕೀಯ ಶಕ್ತಿಯನ್ನು ಬಳಸಿಕೊಂಡು ವಿಶೇಷವಾಗಿ ಕುಡಿಯುವ ನೀರಿಗೆ ಶಾಶ್ವತ ಪರಿಹಾರ ಕಂಡುಕೊಂಡಿರುವುದು ಸೇರಿದಂತೆ ಸಾವಿರಾರು ಕೋಟಿ ವೆಚ್ಚದಲ್ಲಿ ನೂರಾರು ಜನಪರ ಕೆಲಸ ಮಾಡಿರುವ ತೃಪ್ತಿ ನನಗಿದೆ ಎಂದರು.
ಸಮಾರಂಭದಲ್ಲಿ ಕಾರ್ಯಕ್ರಮದ ಆಯೋಜಕರಾದ ಚಿಕ್ಕಯರಗನಾಳು ಮಲ್ಲೇಶ್, ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷ ಜಯರಾಂ,ನಿರ್ದೇಶಕ ಹೊನ್ನಕುಮಾರನಹಳ್ಳಿ ರಾಮಚಂದ್ರು, ಮಲ್ಲೇನಹಳ್ಖಿ ಶಿವಶಂಕರಸ್ವಾಮಿ , ಮಲ್ಲಾಪುರ ಮಂಜುರಾಜು, ನಾಗರಹಳ್ಳಿ ಕೃಷ್ಣೇಗೌಡ, ಧರ್ಮಣ್ಣ, ವೆಂಕಟೇಶ, ಗಿರಿ,ಸೀನಣ್ಣ, ಗಂಡಸಿ ಅಯ್ಯಣ್ಣ, ನಾಗರಾಜಣ್ಣ, ಮುಂಜೇನಹಳ್ಖಿ ಜೆಟ್ಟಿಗೌಡ, ಚಗಚಗೆರೆ ಈಶ್ವರಪ್ಪ, ಕೊಂಡೆನಾಳು ರಾಜು, ಆಗ್ರೋಬಾಬು, ಮಹದೇವರಹಳ್ಳಿ ಸ್ವಾಮಣ್ಣ, ಮುದುಡಿ ಶಿವಪ್ಪ , ಬಾಗೇಶಪುರ ಈರೇಗೌಡಉಪಸ್ಥಿತರಿದ್ದರು.
