Sunday, April 19, 2026
Homeಜಿಲ್ಲಾ ಸುದ್ದಿಗಳುಮೈಸೂರು : ಮೂವರು ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ದಾಳಿ

ಮೈಸೂರು : ಮೂವರು ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ದಾಳಿ

Mysore: Lokayukta raids three officials' houses

ಮೈಸೂರು, ಫೆ. 5- ಲೋಕಾಯುಕ್ತ ಪೊಲೀಸರು ಇಂದು ನಗರದ ಮೂವರು ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಿದ್ದಾರೆ. ನಗರದಲ್ಲಿ ಇಬ್ಬರು ಅಧಿಕಾರಿಗಳ ಮನೆ ಹಾಗೂ ಕಚೇರಿಗಳಲ್ಲಿ ಲೋಕಾಯುಕ್ತ ಪೊಲೀಸರು ತಲಾಶ್‌ ನಡೆಸಿದ್ದಾರೆ.

ಜ್ಯೂನಿಯರ್‌ ಎಂಜಿನಿಯರ್‌ ಕೆ.ಆರ್‌.ಚಂದ್ರಶೇಖರ್‌, ಮೈಸೂರು ನಗರ ಪಾಲಿಕೆಯ ಅಲ್ತಾಫ್‌ ಹುಸೇನ್‌ ಜಪ್ಪಾರ್ಪಿ, ಡೆಪ್ಯುಟಿ ಎಲೆಕ್ಟ್ರಿಕಲ್‌ ಇ್ಸ್‌‍ಪೆಕ್ಟರ್‌ ದಾಳಿಗೊಳಗಾದವರು.
ನಗರದ ವಿಜಯನಗರ ಮೊದಲ ಹಾಗೂ ಎರಡನೇ ಹಂತ ಸೇರಿ ಆರು ಕಡೆ ಹಾಗೂ ತಿ.ನರಸೀಪುರದಲ್ಲಿ ಒಂದು ಕಡೆ ದಾಳಿ ನಡೆಸಿದ್ದಾರೆ.

ಅಕ್ರಮ ಆದಾಯಗಳಿಕೆ ಹಿನ್ನೆಲೆಯಲ್ಲಿ ಈ ಅಧಿಕಾರಿಗಳ ವಿರುದ್ಧ ಸತತ ದೂರುಗಳು ಬಂದ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಈ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

RELATED ARTICLES

Latest News