Homeಜಿಲ್ಲಾ ಸುದ್ದಿಗಳುನವದಂಪತಿಗಳಿಗೆ ಹಾಲು-ಮೊಸರು ಪ್ಯಾಕೆಟ್ ಉಡುಗೊರೆ ನೀಡಿ ಬೆಲೆ ಏರಿಕೆ ವಿರುದ್ಧ ವಿನೂತನ ಪ್ರತಿಭಟನೆ

ನವದಂಪತಿಗಳಿಗೆ ಹಾಲು-ಮೊಸರು ಪ್ಯಾಕೆಟ್ ಉಡುಗೊರೆ ನೀಡಿ ಬೆಲೆ ಏರಿಕೆ ವಿರುದ್ಧ ವಿನೂತನ ಪ್ರತಿಭಟನೆ

ಮೈಸೂರು ನ.3- ರಾಜ್ಯದಲ್ಲಿ ಹಾಲು ಮತ್ತು ಮೊಸರಿನ ದರ ಏರಿಕೆಯಿಂದ ಬಡವರು ಹಾಗೂ ಮಧ್ಯಮ ವರ್ಗದ ಕುಟುಂಬಗಳ ಮೇಲೆ ಆರ್ಥಿಕ ಹೊರೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಗಮನ ಸೆಳೆಯಲು ಪ್ರಜ್ಞಾವಂತ ನಾಗರಿಕ ವೇದಿಕೆಯ ಅಧ್ಯಕ್ಷ ಕಡಕೋಳ ಜಗದೀಶ್‌ ಅವರು ವಿನೂತನ ರೀತಿಯಲ್ಲಿ ಜಾಗೃತಿ ಮೂಡಿಸಿದ್ದಾರೆ.

ಕಡಕೋಳದ ಶ್ರೀ ಕಾಳಬೀರೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ಕಡಕೋಳ ನಿವಾಸಿ ಮಂಜು ಹಾಗೂ ಅನನ್ಯ ಅವರ ವಿವಾಹ ಸಮಾರಂಭದಲ್ಲಿ ನವದಂಪತಿಗಳಿಗೆ ಹಾಲು ಮತ್ತು ಮೊಸರನ್ನು ಉಡುಗೊರೆಯಾಗಿ ನೀಡಿ ಶುಭಾಶಯ ಕೋರಿದರು.

ಮದುವೆಯ ಸಂಭ್ರಮದಲ್ಲೇ ಹಾಲು-ಮೊಸರನ್ನು ಉಡುಗೊರೆಯಾಗಿ ನೀಡುವ ಮೂಲಕ ಇವು ಪ್ರತಿಯೊಂದು ಕುಟುಂಬದ ನಿತ್ಯದ ಅಗತ್ಯ ವಸ್ತುಗಳಾಗಿದ್ದು, ಬೆಲೆ ಏರಿಕೆಯಿಂದ ಸಾಮಾನ್ಯ ಜನರ ಜೀವನ ನಿರ್ವಹಣೆಗೆ ತೊಂದರೆಯಾಗುತ್ತಿದೆ ಎಂಬ ಸಂದೇಶವನ್ನು ವಿಭಿನ್ನವಾಗಿ ಸಾರಿದರು.

ಹಾಲು ಮತ್ತು ಮೊಸರು ಕೇವಲ ಆಹಾರ ಪದಾರ್ಥಗಳಲ್ಲ, ಬಡವರು ಮತ್ತು ಮಧ್ಯಮ ವರ್ಗದ ಕುಟುಂಬಗಳ ದೈನಂದಿನ ಬದುಕಿನ ಅವಿಭಾಜ್ಯ ಅಂಗ. ಬೆಲೆ ಏರಿಕೆಯಿಂದ ಜನಸಾಮಾನ್ಯರ ಮೇಲೆ ಬೀಳುತ್ತಿರುವ ಆರ್ಥಿಕ ಹೊರೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ಜನರಿಗೆ ಹೊರೆಯಾಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕಡಕೋಳ ಜಗದೀಶ್‌ ಒತ್ತಾಯಿಸಿದರು.

ಈ ವಿನೂತನ ಪ್ರಯತ್ನ ಸಾರ್ವಜನಿಕರ ಗಮನ ಸೆಳೆಯಿತು. ಈ ಸಂದರ್ಭದಲ್ಲಿ ಯುವ ಮುಖಂಡ ಜೋಗಿ ಮಂಜು, ಮಾಜಿ ನಗರಪಾಲಿಕೆ ಸದಸ್ಯ ಜಗದೀಶ್‌, ದೂರ ರಾಜಣ್ಣ ಸೇರಿದಂತೆ ಹಲವು ಸ್ನೇಹಿತರು ಉಪಸ್ಥಿತರಿದ್ದು ನವದಂಪತಿಗಳಿಗೆ ಶುಭ ಕೋರಿದರು.

RELATED ARTICLES

Latest News