Homeಜಿಲ್ಲಾ ಸುದ್ದಿಗಳುಆಸ್ತಿ ಪತ್ರ, ಚಿನ್ನದೊಂದಿಗೆ ಮಹಿಳೆ ನಿಗೂಢವಾಗಿ ನಾಪತ್ತೆ

ಆಸ್ತಿ ಪತ್ರ, ಚಿನ್ನದೊಂದಿಗೆ ಮಹಿಳೆ ನಿಗೂಢವಾಗಿ ನಾಪತ್ತೆ

ಮಹಿಳೆಯೊಬ್ಬರು ಮನೆಯಲ್ಲಿದ್ದ ನೂರಾರು ಗ್ರಾಂ ಚಿನ್ನಾಭರಣ ಹಾಗೂ ಕೋಟ್ಯಂತರ ರೂಪಾಯಿ ಮೌಲ್ಯದ ಬ್ಯಾಂಕ್‌ ಆಸ್ತಿ ಪತ್ರಗಳೊಂದಿಗೆ ನಿಗೂಢವಾಗಿ ನಾಪತ್ತೆ

ಚಿಕ್ಕಮಗಳೂರು, ಜೂ.22– ಕೋರ್ಟ್‌ ವಿಚಾರಣೆಗಾಗಿ ಚಿಕ್ಕಮಗಳೂರಿಗೆ ಹೋಗಿ ಬರುವುದಾಗಿ ಹೇಳಿ ಹೋದ ಮಹಿಳೆಯೊಬ್ಬರು ಮನೆಯಲ್ಲಿದ್ದ ನೂರಾರು ಗ್ರಾಂ ಚಿನ್ನಾಭರಣ ಹಾಗೂ ಕೋಟ್ಯಂತರ ರೂಪಾಯಿ ಮೌಲ್ಯದ ಬ್ಯಾಂಕ್‌ ಆಸ್ತಿ ಪತ್ರಗಳೊಂದಿಗೆ ನಿಗೂಢವಾಗಿ ನಾಪತ್ತೆಯಾಗಿರುವ ಆಘಾತಕಾರಿ ಘಟನೆ ಕಡೂರು ತಾಲೂಕು ಸಿಂಗಟಗೆರೆ ಪೊಲೀಸ್‌‍ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ತಾಲೂಕಿನ ಹುಲಿಗೆರೆ ಯಗಟಿ ಗ್ರಾಮದ ಸುಜಾತ (42) ನಾಪತ್ತೆಯಾದ ಮಹಿಳೆ. ಇವರ ಪತಿ ಸುಮಾರು 10 ವರ್ಷಗಳ ಹಿಂದೆಯೇ ನಿಧನರಾಗಿದ್ದರು. ಪತಿಯ ಅಗಲಿಕೆಯ ನಂತರ ಕಳೆದ 8 ವರ್ಷಗಳಿಂದ ಸುಜಾತ ಅವರು ಹುಲಿಗೆರೆ ಯಗಟಿಯಲ್ಲಿರುವ ತಮ ತಂದೆಯ ಮನೆಯಲ್ಲೇ ಆಶ್ರಯ ಪಡೆದಿದ್ದು, ತಂದೆ ಮತ್ತು ಸೋದರ ಯೋಗೀಶ್‌ ಇವರ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದರು.

ಸುಜಾತ ಅವರು ಚಿಕ್ಕಮಗಳೂರು ನ್ಯಾಯಾಲಯದಲ್ಲಿ ಇಂದು ನನ್ನ ಕೇಸಿನ ವಿಚಾರಣೆ ಇದೆ ಎಂದು ಹೇಳಿ ಮನೆಯಿಂದ ಹೊರಟಿದ್ದರು. ಆದರೆ ಮನೆಯಲ್ಲಿದ್ದ ದಾಖಲೆ ಪತ್ರ ಹಾಗೂ ಚಿನ್ನಾಭರಣಗಳೊಂದಿಗೆ ನಾಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

RELATED ARTICLES

Latest News