ಕಲಬುರಗಿ,ಏ.12- ಲೋಕಸಭಾ ಚುನಾವಣೆ ಜೆಡಿಎಸ್ ಪಕ್ಷ ಬಿಜೆಪಿಯೊಂದಿಗೆ ವಿಲೀನಗೊಳ್ಳುತ್ತದೆ ಅಥವಾ ಬಿಜೆಪಿಯೇ ಜೆಡಿಎಸ್ ಅನ್ನು ಎನ್‍ಡಿಎ ಕೂಟದಿಂದ ಹೊರಹಾಕುತ್ತದೆ, ಈ ಎರಡರಲ್ಲೂ ಪ್ರಮುಖ ವಿದ್ಯಮಾನಗಳು ಘಟಿಸುತ್ತವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಕಲಬುರಗಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಮೋದಿ ಅಲೆ ಇಲ್ಲ. ಕಾಂಗ್ರೆಸ್ ಅಲೆ ಮತ್ತು ಪಂಚಖಾತ್ರಿಗಳ ಅಲೆ ಜೋರಾಗಿದೆ. ಜನ ಅದಕ್ಕೆ ತೀವ್ರವಾದ ಬೆಂಬಲ ನೀಡುತ್ತಿದ್ದಾರೆ ಎಂದು ತಿಳಿಸಿದರು.
- Advertisement -
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 20 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಲಿದೆ. ರಾಜಕೀಯವಾಗಿ ಮಹತ್ವದ ಬದಲಾವಣೆಯಾಗುತ್ತವೆ. ಜನ ಬಿಜೆಪಿಯವರ ಸುಳ್ಳುಗಳನ್ನು ನಂಬುತ್ತಿಲ್ಲ ಎಂದು ಹೇಳಿದರು.
- Advertisement -
