Thursday, May 2, 2024
Homeರಾಜಕೀಯಮತ ಎಣಿಕೆಯಲ್ಲಿ ಮೋಸದಿಂದಾಗಿ ಸೌಮ್ಯ ರೆಡ್ಡಿ ಸೋತಿದ್ದರು : ಡಿಕೆಶಿ

ಮತ ಎಣಿಕೆಯಲ್ಲಿ ಮೋಸದಿಂದಾಗಿ ಸೌಮ್ಯ ರೆಡ್ಡಿ ಸೋತಿದ್ದರು : ಡಿಕೆಶಿ

ಬೆಂಗಳೂರು, ಏ.1- ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಒತ್ತಡಕ್ಕೆ ಮಣಿದು ಅಧಿಕಾರಿಗಳು ಕಾಂಗ್ರೆಸ್ ಅಭ್ಯರ್ಥಿ ಸೌಮ್ಯರೆಡ್ಡಿಯನ್ನು ಸೋತಿ ದ್ದಾರೆಂದು ಘೋಷಿಸಿದ್ದರು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅರೋಪಿಸಿದ್ದಾರೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ಅಭ್ಯರ್ಥಿ ಸೌಮ್ಯಾ ರೆಡ್ಡಿ ಪರವಾಗಿ ರೋಡ್ ಶೋನಲ್ಲಿ ಮಾತ ನಾಡಿದ ಅವರು, ಮತ ಎಣಿಕೆಯಲ್ಲಿ ಅಧಿಕಾರಿಗಳು ತಪ್ಪು ಮಾಡಿದ್ದಾರೆ. ಇದರಿಂದ ಸೌಮ್ಯಾರೆಡ್ಡಿ ಅವರಿಗೆ ಮೋಸ ಆಗಿದೆ.

ಒತ್ತಡಕ್ಕೆ ಮಣಿದು ಕಾಂಗ್ರೆಸ್ ಅಭ್ಯರ್ಥಿ ಸೋಲು ಕಂಡಿದ್ದಾರೆಂದು ಘೋಷಿಸಿದ ಬಳಿಕ ರಾಮಲಿಂಗಾರೆಡ್ಡಿ ಅವರ ಬಳಿ ಬಂದು ಅಧಿಕಾರಿಗಳು ಕ್ಷಮೆ ಯಾಚಿಸಿದ್ದಾರೆಂದು ಹೇಳಿದ್ದಾರೆ. ಕಾಂಗ್ರೆಸ್ ಭಾವನೆಗಳ ಮೇಲೆ ಚುನಾವಣೆ ನಡೆಸುವುದಿಲ್ಲ. ಜನರ ಬದುಕಿನ ಸುಧಾರಣೆಯನ್ನು ಮುಂದಿಟ್ಟುಕೊಂಡು ಮತಯಾಚನೆ ಮಾಡುತ್ತಿದೆ ಎಂದು ಹೇಳಿದರು.

ಸೌಮ್ಯಾರೆಡ್ಡಿ ನನ್ನ ಮಗಳಿದ್ದಂತೆ. ಆಕೆಯನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸಿ ಎಂದು ಮನವಿ ಮಾಡಿದ್ದಾರೆ. ಮತ್ತೊಮ್ಮೆ ಮುಖ್ಯಮಂತ್ರಿ ಹುದ್ದೆ ಬಗ್ಗೆ ಪ್ರಸ್ತಾಪಿಸಿದ ಡಿ.ಕೆ. ಶಿವಕುಮಾರ್, ಕಳೆದ ವಿಧಾನಸಭಾ ಚುನಾವಣೆಯಲ್ಲಿ ನೀವು ಮುಖ್ಯಮಂತ್ರಿಯಾಗುತ್ತೀರಾ ಎಂಬ ವಿಶ್ವಾಸದ ಮೇಲೆ ಮತ ಹಾಕಿದರು, ಆದರೆ ನೀವು ಏನೂ ಆಗಲಿಲ್ಲ ಎಂದು ಬಹಳಷ್ಟು ಮಂದಿ ನನ್ನನ್ನು ಪ್ರಶ್ನೆ ಮಾಡುತ್ತಾರೆ.

ಕಾಂಗ್ರೆಸ್ ಪಕ್ಷ ಬಂಟ್, ರೆಡ್ಡಿ ಮತ್ತು ಆರು ಮಂದಿ ಒಕ್ಕಲಿಗರು ಸೇರಿ ಎಂಟು ಜನ ಸಮುದಾಯದ ನಾಯಕರಿಗೆ ಲೋಕಸಭೆ ಚುನಾವಣೆಯಲ್ಲಿ ರ್ಸಧಿಸಲು ಪಕ್ಷ ಅವಕಾಶ ಕಲ್ಪಿಸಿದೆ ಎಂದರು.ದೇಶದಲ್ಲಿ ಮೋದಿಯ ಅಲೆಯೂ ಇಲ್ಲ, ಗಾಳಿಯೂ ಇಲ್ಲ. ಜನರ ಬದುಕಿನ ವಿಚಾರಗಳಿಗೆ ಜಿಎಸ್ಟಿ ತೆರಿಗೆ ಪಾಲಿನಲ್ಲಿ ಅನ್ಯಾಯ ಮಾಡುವ ಮೂಲಕ ರಾಜ್ಯಕ್ಕೆ ಅಪಮಾನ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಚಿವ ರಾಮಲಿಂಗಾರೆಡ್ಡಿ, ಶಾಸಕ ಕೃಷ್ಣಪ್ಪ, ವಿಧಾನಪರಿಷತ್ ಸದಸ್ಯ ಯು.ಬಿ. ವೆಂಕಟೇಶ್, ರಾಜ್ಯಸಭಾ ಸದಸ್ಯ ಜಿ.ಸಿ. ಚಂದ್ರಶೇಖರ್, ಲೋಕಸಭಾ ಅಭ್ಯರ್ಥಿ ಸೌಮ್ಯರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.

RELATED ARTICLES

Latest News