Thursday, May 2, 2024
Homeರಾಜಕೀಯಕಂತೆಗಟ್ಟಲೇ ದಾಖಲೆ ಇದೆ, ಚರ್ಚೆಗೆ ನಾನು ರೆಡಿ : ಡಿಕೆಶಿಗೆ ಹೆಚ್‌ಡಿಕೆ ತಿರುಗೇಟು

ಕಂತೆಗಟ್ಟಲೇ ದಾಖಲೆ ಇದೆ, ಚರ್ಚೆಗೆ ನಾನು ರೆಡಿ : ಡಿಕೆಶಿಗೆ ಹೆಚ್‌ಡಿಕೆ ತಿರುಗೇಟು

ಬೆಂಗಳೂರು,ಏ.16- ಕಂತೆಗಟ್ಟಲೇ ದಾಖಲೆ ಇಟ್ಟಿದ್ದು ಚರ್ಚೆಗೆ ಸಿದ್ಧವಿರುವುದಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಉಪ ಮುಖ್ಯಮಂತ್ರಿ ಡಿ.ಕೆ. ಶಿವ ಕುಮಾರ್ ಅವರಿಗೆ ತಿರುಗೇಟು ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸಭೆಯಲ್ಲಿ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚೆಗೆ ಬನ್ನಿ ಎಂದು ಆಹ್ವಾನ ನೀಡಿದ್ದಾರೆ. ನಮ್ಮ ಬಳಿ ದಾಖಲೆ ಸಾಕಷ್ಟಿದ್ದು, ಚರ್ಚೆಗೆ ಸಿದ್ದವಿದ್ದೇವೆ. ನೀವು ಬನ್ನಿ ಎಂದು ಹೇಳಿದ್ದಾರೆ.

ಮಹಿಳೆಯನ್ನು ಅಪಹರಿಸಿ, ಬೆದರಿಸಿ ಜಮೀನು ಬರೆಸಿಕೊಂಡಿರುವುದು ನಿಜ. ಇದು ನಡೆದಿರುವುದು 1996-97ರಲ್ಲಿ. ಅದಕ್ಕೆ ಸಂಬಂಧಿಸಿದ ದಾಖಲೆಗಳು ಇವೆ ಎಂದು ತಿಳಿಸಿದರು. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಜಮೀನು ಬರೆಸಿಕೊಳ್ಳಲು ಏನು ಮಾಡಿದ್ದೀರೀ? ಕೊಟ್ಟಿದ್ದ ಚೆಕ್ ಡಿಸ್ಆನರ್ ಮಾಡಿರುವ ದಾಖಲೆಯೂ ಇದೆ ಎಂದರು.

ಶಾಂತಿನಗರ ಹೌಸಿಂಗ್ ಸೊಸೈಟಿಯನ್ನು ಒರ್ಜಿನಲ್ ಮಾಡಿಕೊಳ್ಳಲಿಲ್ಲವೇ ಯಾವಾತ್ತಾದರೂ ಒಕ್ಕಲಿಗ ನಾಯಕತ್ವ ಪಡೆಯುತ್ತೇನೆ ಎಂದು ಹೇಳಿದ್ದೇನೆಯೇ ಎಂದು ಪ್ರಶ್ನಿಸಿದರು. ಅವರು ಸತ್ಯ ಹರಿಶ್ಚಂದ್ರರ ಮೊಮ್ಮಗ. ದೊಡ್ಡಹಾಲಳ್ಳಿಯಲ್ಲಿ ಹುಟ್ಟುವಾಗ ಸತ್ಯಹರಿಶ್ಚಂದ್ರ ಬಂದು ಸತ್ಯವನ್ನೇ ನುಡಿಯ ಬೇಕು ಎಂದು ಹೇಳಿ ಹೋಗಿದ್ದಾರೆ. ನಮಗೆ ಸುಳ್ಳು ಹೇಳಿ ಎಂದು ಹೇಳಿದ್ದಾರೆಂದು ಡಿ.ಕೆ. ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂಡ್ಯದಲ್ಲಿ ಚುನಾವಣಾ ಪ್ರಚಾರಕ್ಕೆ ಬರುವುದನ್ನು ಸ್ವಾಗತಿಸುತ್ತೇನೆ. ಅವರು ಬಂದು ಪ್ರಚಾರ ಮಾಡುವುದರಿಂದ ನನಗೇನು ನಷ್ಟವಿಲ್ಲ. ರಾಜಕೀಯವಾಗಿ ಪ್ರಚಾರ ಮಾಡಲು ಯಾರು ಬೇಕಾದರೂ ಬರಬಹುದು. ಬರುವವರನ್ನು ಬೇಡ ಎನ್ನಲು ಆಗುತ್ತದೆಯೇ ಎಂದರು.

ಆ ಮಹಾನುಭಾವ ನನಗೆ ಸಲಹೆ ಮಾಡುತ್ತಾನೆ. ಮಹಿಳೆಯರ ಬಗ್ಗೆ ಗೌರವ ಕೊಡುವುದನ್ನು ಅವರಿಂದ ತಿಳಿದು ಕೊಡಬೇಕೆ ಎಂದು ಪ್ರಶ್ನಿಸಿದರು. ಪ್ರತಿ ಕುಟುಂಬದಲ್ಲಿ ಹೆತ್ತ ತಾಯಿ, ಹೆಂಡತಿ, ಮಗಳ ಮೇಲೆ ಹೇಗೆ ಕಣ್ಣಿಟ್ಟಿರಬೇಕು, ಮನೆಯಿಂದ ಹೊರಗೆ ಹೋಗಿ ಮನೆಗೆ ಬರುವವರೆಗೂ ಅವರ ಚಟುವಟಿಕೆ ಮೇಲೆ ಕಣ್ಣಿಟ್ಟಿರಬೇಕು ಎಂದು ಆ ಮಹಾನುಭಾವ ಹೇಳಿದ್ದಾರೆ ಎಂದು ಟೀಕಿಸಿದರು.

RELATED ARTICLES

Latest News