ರಾಮನಾಥಪುರಂ,ಏ. 6 (ಪಿಟಿಐ) ಕರಾವಳಿ ಕಾವಲು ಪಡೆ ಮತ್ತು ಕಸ್ಟಮ್ಸ್ ಅಧಿಕಾರಿಗಳು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಶ್ರೀಲಂಕಾದಿಂದ ಅಕ್ರಮವಾಗಿ ಸಾಗಿಸಿ ಸಮುದ್ರಕ್ಕೆ ಎಸೆದ ಮೂರು ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.
ಏಜೆನ್ಸಿಗಳು ರಾಮನಾಥಪುರಂ ಸಮೀಪವಿರುವ ಸಮುದ್ರ ತಳದಿಂದ ಒಟ್ಟು 4.9 ಕೆಜಿ ಅಮೂಲ್ಯವಾದ ಚಿನ್ನವನ್ನು ವಶಪಡಿಸಿಕೊಂಡಿವೆ.ಭಾರತೀಯ ಕೋಸ್ಟ್ ಗಾರ್ಡ್ (ಐಸಿಜಿ) ಮತ್ತು ಕಸ್ಟಮ್ಸ್ ಪ್ರಿವೆಂಟಿವ್ ಯುನಿಟ್ (ಸಿಪಿಯು), ರಾಮನಾಥಪುರಂ, ಡೈರೆಕ್ಟರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್ (ಡಿಆರ್ಐ) ಜಂಟಿ ಕಾರ್ಯಾಚರಣೆಯಲ್ಲಿ 4.9 ಕೆಜಿ ವಿದೇಶಿ ಮೂಲದ ಚಿನ್ನವನ್ನು ಮಧ್ಯ ಸಮುದ್ರದ ವೆಧಲೈ ಕರಾವಳಿಯ ಮಂಡಪಮ್ನಿಂದ ವಶಪಡಿಸಿಕೊಂಡಿದೆ ಎಂದು ತಿಳಿದುಬಂದಿದೆ.
ಶಂಕಿತ ದೋಣಿಯನ್ನು ಗುರುತಿಸಲಾಗಿದ್ದು, ಅದನ್ನು ತಡೆಹಿಡಿಯುವ ಮೊದಲು, ಅದರಲ್ಲಿದ್ದವರು ಚಿನ್ನವನ್ನು ಸಮುದ್ರಕ್ಕೆ ಎಸೆದಿದ್ದಾರೆ. ನಂತರ ಅದನ್ನು ಸಮುದ್ರದ ತಳದಿಂದ ಹೊರತೆಗೆಯಲಾಯಿತು. ಮೂವರನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.