Friday, May 24, 2024
Homeರಾಜ್ಯಲೋಕಸಭಾ ಚುನಾವಣೆ : ರಾಜ್ಯದಲ್ಲಿ 276 ಅಭ್ಯರ್ಥಿಗಳ 384 ನಾಮಪತ್ರಗಳು ಪುರಸ್ಕೃತ

ಲೋಕಸಭಾ ಚುನಾವಣೆ : ರಾಜ್ಯದಲ್ಲಿ 276 ಅಭ್ಯರ್ಥಿಗಳ 384 ನಾಮಪತ್ರಗಳು ಪುರಸ್ಕೃತ

ಬೆಂಗಳೂರು,ಏ.6- ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ಹೊರತುಪಡಿಸಿ ರಾಜ್ಯದ ಮೊದಲ ಹಂತದ 13 ಲೋಕಸಭಾ ಕ್ಷೇತ್ರಗಳಲ್ಲಿ ನಿನ್ನೆ ನಾಮಪತ್ರಗಳ ಪರಿಶೀಲನೆ ಪೂರ್ಣಗೊಂಡಿದ್ದು, 60 ನಾಮಪತ್ರಗಳು ತಿರಸ್ಕೃತಗೊಂಡಿವೆ. 276 ಅಭ್ಯರ್ಥಿಗಳ 384 ನಾಮಪತ್ರಗಳು ಪುರಸ್ಕೃತಗೊಂಡಿವೆ.

ಮಾ.28ರಿಂದ ಏ.4ರವರೆಗೆ 358 ಅಭ್ಯರ್ಥಿಗಳು 492 ನಾಮಪತ್ರಗಳನ್ನು ಸಲ್ಲಿಸಿದ್ದರು. ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ನಾಮಪತ್ರಗಳು ಪುರಸ್ಕೃತಗೊಂಡಿವೆ. ತಿರಸ್ಕೃತಗೊಂಡಿರುವ ನಾಮಪತ್ರಗಳಲ್ಲಿ ಪಕ್ಷೇತರರೇ ಹೆಚ್ಚಾಗಿದ್ದಾರೆ.

ನಾಮಪತ್ರ ವಾಪಸ್ ಪಡೆಯಲು ಏ.8ರವರೆಗೆ ಕಾಲಾವಕಾಶವಿದ್ದು, ಆನಂತರ ಚುನಾವಣಾ ಕಣದಲ್ಲಿ ಉಳಿಯುವ ಅಧಿಕೃತ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಾಗುತ್ತದೆ. ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ 10 ಅಭ್ಯರ್ಥಿಗಳ 15 ನಾಮಪತ್ರಗಳು ಪುರಸ್ಕೃತಗೊಂಡಿದ್ದರೆ 4 ನಾಮಪತ್ರಗಳು ತಿರಸ್ಕೃತವಾಗಿವೆ.

ಹಾಸನ ಕ್ಷೇತ್ರದಲ್ಲಿ 18 ಅಭ್ಯರ್ಥಿಗಳ 26 ನಾಮಪತ್ರಗಳು ಪುರಸ್ಕೃತವಾಗಿದ್ದು, 3 ನಾಮಪತ್ರಗಳು ತಿರಸ್ಕೃತಗೊಂಡಿವೆ. ದಕ್ಷಿಣ ಕನ್ನಡ ಕ್ಷೇತ್ರದಲ್ಲಿ 10 ಅಭ್ಯರ್ಥಿಗಳ 20 ನಾಮಪತ್ರಗಳು ಪುರಸ್ಕೃತವಾಗಿದ್ದರೆ 2 ನಾಮಪತ್ರಗಳು ತಿರಸ್ಕೃತವಾಗಿವೆ.

ಚಿತ್ರದುರ್ಗ ಕ್ಷೇತ್ರದಲ್ಲಿ 24 ಅಭ್ಯರ್ಥಿಗಳ 32 ನಾಮಪತ್ರಗಳು ಪುರಸ್ಕೃತವಾಗಿದ್ದು, 4 ನಾಮಪತ್ರಗಳು ತಿರಸ್ಕೃತಗೊಂಡಿವೆ. ತುಮಕೂರು ಕ್ಷೇತ್ರದ 22 ಅಭ್ಯರ್ಥಿಗಳ 31 ನಾಮಪತ್ರಗಳು ಕ್ರಮಬದ್ಧವಾಗಿವೆ. ಮಂಡ್ಯ ಕ್ಷೇತ್ರದ 19 ಅಭ್ಯರ್ಥಿಗಳ 27 ನಾಮಪತ್ರಗಳು ಸಿಂಧುವಾಗಿದ್ದರೆ, 10 ನಾಮಪತ್ರಗಳು ತಿರಸ್ಕೃತಗೊಂಡಿವೆ. ಮೈಸೂರು ಕ್ಷೇತ್ರದ 24 ಅಭ್ಯರ್ಥಿಗಳ 32 ನಾಮಪತ್ರಗಳು ಪುರಸ್ಕೃತವಾಗಿದ್ದು, 5 ನಾಮಪತ್ರಗಳು ತಿರಸ್ಕಾರಗೊಂಡಿವೆ.

ಚಾಮರಾಜನಗರ ಕ್ಷೇತ್ರದ 22 ಅಭ್ಯರ್ಥಿಗಳ 31 ನಾಮಪತ್ರಗಳು ಪುರಸ್ಕೃತಗೊಂಡಿದ್ದು 5 ನಾಮಪತ್ರಗಳು ತಿರಸ್ಕಾರವಾಗಿವೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದ 27 ಅಭ್ಯರ್ಥಿಗಳ 38 ನಾಮಪತ್ರಗಳು ಕ್ರಮವಾಗಿದ್ದು, ಏಳು ನಾಮಪತ್ರಗಳು ತಿರಸ್ಕಾರವಾಗಿವೆ.

ಬೆಂಗಳೂರು ಕೇಂದ್ರ ಕ್ಷೇತ್ರದ 28 ಅಭ್ಯರ್ಥಿಗಳು 36 ನಾಮಪತ್ರಗಳು ಪುರಸ್ಕೃತವಾಗಿದ್ದು, 4 ನಾಮಪತ್ರಗಳು ತಿರಸ್ಕಾರವಾಗಿವೆ. ಬೆಂಗಳೂರು ಉತ್ತರ ಕ್ಷೇತ್ರದ 21 ಅಭ್ಯರ್ಥಿಗಳ 30 ನಾಮಪತ್ರಗಳು ಸಿಂಧುವಾಗಿದ್ದು, 6 ಅಭ್ಯರ್ಥಿಗಳ ನಾಮಪತ್ರಗಳು ಅಸಿಂಧುವಾಗಿವೆ.

ಚಿಕ್ಕಬಳ್ಳಾಪುರ ಕ್ಷೇತ್ರದ 32 ಅಭ್ಯರ್ಥಿಗಳ 39 ನಾಮಪತ್ರಗಳು ಪುರಸ್ಕೃತವಾಗಿದ್ದು ನಾಲ್ಕು ನಾಮಪತ್ರ ತಿರಸ್ಕಾರಗೊಂಡಿದ್ದರೆ ಕೋಲಾರ ಕ್ಷೇತ್ರದ 19 ಅಭ್ಯರ್ಥಿಗಳ 27 ನಾಮಪತ್ರಗಳು ಕ್ರಮಬದ್ಧವಾಗಿದ್ದು, 6 ನಾಮಪತ್ರಗಳು ತಿರಸ್ಕೃತಗೊಂಡಿವೆ. ಏ.26ರಂದು 14 ಕ್ಷೇತ್ರಗಳಲ್ಲೂ ಮತದಾನ ನಡೆಯಲಿದ್ದು, ಜೂ.4ರಂದು ಮತ ಎಣಿಕೆ ನಡೆದು ಫಲಿತಾಂಶ ಹೊರಬೀಳಲಿದೆ.

RELATED ARTICLES

Latest News