Monday, May 6, 2024
Homeರಾಜ್ಯರಾಜ್ಯದಲ್ಲಿ ಸ್ಟಾರ್ ಚಂದ್ರು ಶ್ರೀಮಂತ ಅಭ್ಯರ್ಥಿ, ಬ್ರಿಜೇಶ್ ಚೌಟ ಬಡ ಅಭ್ಯರ್ಥಿ

ರಾಜ್ಯದಲ್ಲಿ ಸ್ಟಾರ್ ಚಂದ್ರು ಶ್ರೀಮಂತ ಅಭ್ಯರ್ಥಿ, ಬ್ರಿಜೇಶ್ ಚೌಟ ಬಡ ಅಭ್ಯರ್ಥಿ

ಬೆಂಗಳೂರು,ಏ.6- ಮೊದಲ ಹಂತದ 14 ಲೋಕಸಭಾ ಕ್ಷೇತ್ರಗಳ ಮತದಾನಕ್ಕೆ ದಿನಗಣನೆ ಆರಂಭವಾಗಿರುವಂತೆ ಮಂಡ್ಯ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವ ವೆಂಕಟರಮಣಗೌಡ ಅಲಿಯಾಸ್ ಸ್ಟಾರ್ ಚಂದ್ರು ಅತಿ ಶ್ರೀಮಂತ ಅಭ್ಯರ್ಥಿಯಾಗಿ ಹೊರಹೊಮ್ಮಿದ್ದಾರೆ.

ಅದೇ ರೀತಿ ದಕ್ಷಿಣಕನ್ನಡ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವ ನಿವೃತ್ತ ಸೇನಾಕಾರಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಅತಿ ಬಡ ಅಭ್ಯರ್ಥಿಯಾಗಿದ್ದಾರೆ. ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಘೋಷಣೆ ಮಾಡಿಕೊಂಡಿರುವ ತಮ್ಮ ಚರಾಚಿರ ಆಸ್ತಿ ವಿವರಗಳಲ್ಲಿ ಇದು ಬಹಿರಂಗಗೊಂಡಿದೆ.

ಸಕ್ಕರೆ ನಾಡು ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ವೆಂಕಟರಮಣಗೌಡ ಅಲಿಯಾಸ್ ಸ್ಟಾರ್ ಚಂದ್ರು ಬರೋಬ್ಬರಿ 622 ಕೋಟಿ ಆಸ್ತಿಯನ್ನು ಹೊಂದಿರುವ ಅತಿ ದೊಡ್ಡ ಶ್ರೀಮಂತ ಅಭ್ಯರ್ಥಿ ಎನಿಸಿದ್ದಾರೆ. 2ನೇ ಸ್ಥಾನದಲ್ಲಿ ಪ್ರತಿಷ್ಠಿತ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಉಪಮುಖ್ಯಮಂತ್ರಿ ಹಾಗೂ ಡಿ.ಕೆ.ಶಿವಕುಮಾರ್ ಸಹೋದರ ಡಿ.ಕೆ.ಸುರೇಶ್ ಬರೋಬ್ಬರಿ 593 ಕೋಟಿ ಆಸ್ತಿಯ ಒಡೆಯರಾಗಿದ್ದಾರೆ.

ಮಂಡ್ಯ ಕ್ಷೇತ್ರದಿಂದ ಜೆಡಿಎಸ್-ಬಿಜೆಪಿ ಎನ್‍ಡಿಎ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ 217.2 ಕೋಟಿ ರೂ. ಚರಚಿರಾಸ್ತಿ ಹೊಂದಿದ್ದು, 3ನೇ ಅತಿ ಶ್ರೀಮಂತ ಅಭ್ಯರ್ಥಿ. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಪ್ರೋ.ರಾಜೀವ್ ಗೌಡ ಅವರ ಒಟ್ಟು ಆಸ್ತಿ ಮೌಲ್ಯ 134 ಕೋಟಿ ರೂ. ಇವರು ಸ್ಪರ್ಧಾ ಕಣದಲ್ಲಿರುವ 4ನೇ ಅತಿ ಶ್ರೀಮಂತ ಅಭ್ಯರ್ಥಿ. ಚಿಕ್ಕಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ 99.8 ಕೋಟಿ ಆಸ್ತಿ ಹೊಂದಿದ್ದು, 5ನೇ ಶ್ರೀಮಂತ ಅಭ್ಯರ್ಥಿಯಾಗಿದ್ದಾರೆ.

ಇನ್ನು ರಾಷ್ಟ್ರದ ಗಮನ ಸೆಳೆದಿರುವ ಪ್ರತಿಷ್ಠಿತ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹೆಸರಾಂತ ಹೃದಯ ತಜ್ಞ ಡಾ.ಸಿ.ಎನ್.ಮಂಜುನಾಥ್ ಅವರು 98.3 ಕೋಟಿ ಆಸ್ತಿ ಹೊಂದಿದ್ದು, 6ನೇ ಶ್ರೀಮಂತ ಅಭ್ಯರ್ಥಿಯಾಗಿದ್ದಾರೆ.

ಸ್ಪರ್ಧಾ ಕಣದಲ್ಲಿರುವ ಅತಿ ಬಡ ಅಭ್ಯರ್ಥಿಗಳಲ್ಲಿ ದಕ್ಷಿಣ ಕನ್ನಡದ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ 70.8 ಲಕ್ಷ ರೂ. ಆಸ್ತಿ ಹೊಂದುವ ಮೂಲಕ ಅತಿ ಕಡಿಮೆ ಆದಾಯ ಹೊಂದಿದ ಅಭ್ಯರ್ಥಿಗಳ ಪೈಕಿ ಮೊದಲ ಅಭ್ಯರ್ಥಿಯಾಗಿದ್ದಾರೆ.

ಇದೇ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಪದ್ಮರಾಜ್ ಅವರು 1.8 ಕೋಟಿ ಆಸ್ತಿ ಹೊಂದಿದ್ದು, 2ನೇ ಸ್ಥಾನದಲ್ಲಿದ್ದರೆ ಉಡುಪಿ-ಚಿಕ್ಕಮಗಳೂರು ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ್ ಪೂಜಾರಿ 1.1 ಕೋಟಿ ಆಸ್ತಿ ಹೊಂದಿದ್ದರೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ 2.3 ಕೋಟಿ, ಇದೇ ಕ್ಷೇತ್ರದ ಬಿಜೆಪಿ ಅಭ್ಯರ್ಥಿ 4.1 ಕೋಟಿ ಹಾಗೂ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ 4.3 ಕೋಟಿ ಆಸ್ತಿ ಹೊಂದಿದ್ದಾರೆ.

ಟಾಪ್ 6 ಶ್ರೀಮಂತ ಅಭ್ಯರ್ಥಿಗಳು
1.ವೆಂಕಟರಮಣೇಗೌಡ ಅಲಿಯಾಸ್ ಸ್ಟಾರ್ ಚಂದ್ರು
ಕ್ಷೇತ್ರ : ಮಂಡ್ಯ, ಪಕ್ಷ : ಕಾಂಗ್ರೆಸ್
ಆಸ್ತಿ : 622 ಕೋಟಿ ರೂ.

2.ಡಿ.ಕೆ.ಸುರೇಶ್
ಕ್ಷೇತ್ರ : ಬೆಂಗಳೂರು ಗ್ರಾಮಾಂತರ, ಪಕ್ಷ : ಕಾಂಗ್ರೆಸ್
ಆಸ್ತಿ : 593 ಕೋಟಿ ರೂ.

3.ಎಚ್.ಡಿ. ಕುಮಾರಸ್ವಾಮಿ
ಕ್ಷೇತ್ರ : ಮಂಡ್ಯ, ಪಕ್ಷ : ಜೆಡಿಎಸ್
ಆಸ್ತಿ : 217.2 ಕೋಟಿ ರೂ.
4.ಪ್ರೊ. ಎಂವಿ ರಾಜೀವ್‍ಗೌಡ

ಕ್ಷೇತ್ರ : ಬೆಂಗಳೂರು ಉತ್ತರ, ಪಕ್ಷ : ಕಾಂಗ್ರೆಸ್
ಆಸ್ತಿ : 134 ಕೋಟಿ ರೂ.

5.ರಕ್ಷಾ ರಾಮಯ್ಯ
ಕ್ಷೇತ್ರ : ಚಿಕ್ಕಬಳ್ಳಾಪುರ, ಪಕ್ಷ : ಕಾಂಗ್ರೆಸ್
ಆಸ್ತಿ : 99.8 ಕೋಟಿ ರೂ.

6.ಡಾ ಸಿಎನ್ ಮಂಜುನಾಥ್
ಕ್ಷೇತ್ರ : ಬೆಂಗಳೂರು ಗ್ರಾಮಾಂತರ, ಪಕ್ಷ : ಬಿಜೆಪಿ
ಆಸ್ತಿ : 98.3 ಕೋಟಿ ರೂ.

ಟಾಪ್ 6 ಬಡ ಅಭ್ಯರ್ಥಿಗಳು
1.ಕ್ಯಾಪ್ಟನ್ ಬ್ರಿಜೇಶ್ ಚೌಟ
ಕ್ಷೇತ್ರ : ದಕ್ಷಿಣ ಕನ್ನಡ, ಪಕ್ಷ : ಬಿಜೆಪಿ
ಆಸ್ತಿ : 70.8 ಲಕ್ಷ ರೂ.

2.ಆರ್ ಪದ್ಮರಾಜ್
ಕ್ಷೇತ್ರ : ದಕ್ಷಿಣ ಕನ್ನಡ, ಪಕ್ಷ : ಕಾಂಗ್ರೆಸ್
ಆಸ್ತಿ : 1.8 ಕೋಟಿ ರೂ.

3.ಕೋಟ ಶ್ರೀನಿವಾಸ ಪೂಜÁರಿ
ಕ್ಷೇತ್ರ : ಉಡುಪಿ – ಚಿಕ್ಕಮಗಳೂರು, ಪಕ್ಷ : ಬಿಜೆಪಿ
ಆಸ್ತಿ : 1.1 ಕೋಟಿ ರೂ.

4.ಸೌಮ್ಯ ರೆಡ್ಡಿ
ಕ್ಷೇತ್ರ : ಬೆಂಗಳೂರು ದಕ್ಷಿಣ, ಪಕ್ಷ : ಕಾಂಗ್ರೆಸ್
ಆಸ್ತಿ : 2.3 ಕೋಟಿ ರೂ.

  1. ತೇಜಸ್ವಿ ಸೂರ್ಯ
    ಕ್ಷೇತ್ರ : ಬೆಂಗಳೂರು ದಕ್ಷಿಣ, ಪಕ್ಷ : ಬಿಜೆಪಿ
    ಆಸ್ತಿ : 4.1 ಕೋಟಿ ರೂ.

6.ಗೋವಿಂದ ಕಾರಜೋಳ
ಕ್ಷೇತ್ರ : ಚಿತ್ರದುರ್ಗ, ಪಕ್ಷ : ಬಿಜೆಪಿ
ಆಸ್ತಿ : 4.3 ಕೋಟಿ ರೂ.

RELATED ARTICLES

Latest News