Sunday, November 10, 2024
Homeರಾಜ್ಯರಾಜ್ಯದ ತೆರಿಗೆ ಸಂಗ್ರಹದಲ್ಲಿ ಭಾರೀ ಕುಸಿತ, 8,062.76 ಕೋಟಿ ರೂ. ಖೋತಾ

ರಾಜ್ಯದ ತೆರಿಗೆ ಸಂಗ್ರಹದಲ್ಲಿ ಭಾರೀ ಕುಸಿತ, 8,062.76 ಕೋಟಿ ರೂ. ಖೋತಾ

ಬೆಂಗಳೂರು,ಏ.6– ರಾಜ್ಯದ ಸರಕು ಸೇವಾ ತೆರಿಗೆ, ಕರ್ನಾಟಕ ಮಾರಾಟ ತೆರಿಗೆ ಹಾಗೂ ವೃತ್ತಿ ತೆರಿಗೆ ಸಂಗ್ರಹದಲ್ಲಿ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದೆ. ವಾಣಿಜ್ಯ ತೆರಿಗೆ ಇಲಾಖೆ ಮಾಹಿತಿ ಪ್ರಕಾರ 2022-23ನೇ ಸಾಲಿಗಿಂತ 2023-24ನೇ ಸಾಲಿನಲ್ಲಿ 8,062.76 ಕೋಟಿ ರೂ.ನಷ್ಟು ಕಡಿಮೆ ಸಂಗ್ರಹವಾಗಿದೆ.

2022-23ನೇ ಸಾಲಿನಲ್ಲಿ ಸರಕು ಸೇವಾ ತೆರಿಗೆ, ಕರ್ನಾಟಕ ಮಾರಾಟ ತೆರಿಗೆ ಹಾಗೂ ವೃತ್ತಿ ತೆರಿಗೆ ಸೇರಿ 1,02,426.03 ಕೋಟಿ ಸಂಗ್ರಹವಾಗಿತ್ತು. ಆದರೆ 2023-24ನೇ ಆರ್ಥಿಕ ಸಾಲಿನಲ್ಲಿ 94,363.27 ಕೋಟಿ ರೂ.ನಷ್ಟು ಮಾತ್ರ ಸಂಗ್ರಹವಾಗಿದೆ. ಸರಕು ಸೇವಾ ತೆರಿಗೆ ಹಾಗೂ ವೃತ್ತಿ ತೆರಿಗೆ ಸಂಗ್ರಹ ಕಡಿಮೆಯಾಗಿರುವುದು ವಾಣಿಜ್ಯ ತೆರಿಗೆ ಇಲಾಖೆಯ ಮಾಹಿತಿಯಿಂದ ಸ್ಪಷ್ಟವಾಗಿದೆ.

2022-23ನೇ ಸಾಲಿನಲ್ಲಿ ಸರಕು ಸೇವಾ ತೆರಿಗೆ 81,848.67 ಕೋಟಿ ರೂ. ಸಂಗ್ರಹವಾಗಿದ್ದರೆ, 2023-24ನೇ ಸಾಲಿನಲ್ಲಿ 72,452.77 ಕೋಟಿ ರೂ.ನಷ್ಟು ಮಾತ್ರ ಸಂಗ್ರಹಿಸಲಾಗಿದೆ. ಕರ್ನಾಟಕ ಮಾರಾಟ ತೆರಿಗೆಯು 2022-23ನೇ ಸಾಲಿನಲ್ಲಿ 19092.13 ಕೋಟಿ ರೂ. ಸಂಗ್ರಹವಾಗಿದ್ದರೆ 2023-24ನೇ ಸಾಲಿನಲ್ಲಿ 20,578.51 ಕೋಟಿ ರೂ.ನಷ್ಟು ಸಂಗ್ರಹವಾಗಿದ್ದು, ಸುಮಾರು ಒಂದು ಸಾವಿರ ಕೋಟಿಗೂ ಹೆಚ್ಚು ಸಂಗ್ರಹವಾಗಿದೆ.

ವೃತ್ತಿ ತೆರಿಗೆಯು 2022-23ನೇ ಸಾಲಿನಲ್ಲಿ 1485.23 ಕೋಟಿ ಸಂಗ್ರಹವಾಗಿದ್ದರೆ, 2023-24ನೇ ಸಾಲಿನಲ್ಲಿ 1331.99 ಕೋಟಿ ರೂ.ನಷ್ಟು ಮಾತ್ರ ಸಂಗ್ರಹವಾಗಿದೆ. ಈ ತೆರಿಗೆ ಸಂಗ್ರಹದಲ್ಲೂ ಇಳಿಕೆ ಕಂಡುಬಂದಿದೆ. ಮಾರ್ಚ್ ತಿಂಗಳ ತೆರಿಗೆ ಸಂಗ್ರಹದಲ್ಲೂ ಕಳೆದ ವರ್ಷಕ್ಕೆ ಹೋಲಿಸಿದರೆ ಕಡಿಮೆಯಾಗಿದೆ. 2023ರ ಮಾರ್ಚ್ ತಿಂಗಳಿನಲ್ಲಿ ಈ ಮೂರು ತೆರಿಗೆಗಳು ಸೇರಿ 16,973.89 ಕೋಟಿ ರೂ. ಸಂಗ್ರಹವಾಗಿದ್ದರೆ, ಕಳೆದ ಮಾರ್ಚ್‍ನಲ್ಲಿ 8372.89 ಕೋಟಿ ರೂ. ಮಾತ್ರ ಸಂಗ್ರಹವಾಗಿದ್ದು, ಸುಮಾರು 8 ಸಾವಿರ ಕೋಟಿಯಷ್ಟು ಕಡಿಮೆ ಸಂಗ್ರಹವಾಗಿದೆ.

ಸರಕು ಸೇವಾ ತೆರಿಗೆಯು ಮಾರ್ಚ್ ತಿಂಗಳಿನಲ್ಲಿ 6,480.44 ಕೋಟಿ ರೂ. ಮಾರಾಟ ತೆರಿಗೆಯು 1801.26 ಕೋಟಿ ರೂ. ಹಾಗೂ ವೃತ್ತಿ ತೆರಿಗೆಯು 91.19 ಕೋಟಿ ರೂ.ನಷ್ಟು ಮಾತ್ರ ಸಂಗ್ರಹವಾಗಿರುವುದು ವಾಣಿಜ್ಯ ತೆರಿಗೆ ಇಲಾಖೆಯ ಅಂಕಿ ಅಂಶಗಳಿಂದ ತಿಳಿದುಬಂದಿದೆ.

RELATED ARTICLES

Latest News