Thursday, December 7, 2023
Homeರಾಜ್ಯಹೆದ್ದಾರಿಗಳಲ್ಲಿ ಎಚ್ಚರ ತಪ್ಪಿದರೆ ಪ್ರಾಣಕ್ಕೆ ಕಂಟಕ

ಹೆದ್ದಾರಿಗಳಲ್ಲಿ ಎಚ್ಚರ ತಪ್ಪಿದರೆ ಪ್ರಾಣಕ್ಕೆ ಕಂಟಕ

ಬೆಂಗಳೂರು, ಅ.3- ಹೆದ್ದಾರಿ ಹಾಗೂ ಎಕ್ಸ್‍ಪ್ರೆಸ್ ಹೈವೇಗಳಲ್ಲಿ ಪ್ರಯಾಣಿಸುವಾಗ ಒಂದು ಕ್ಷಣ ಎಚ್ಚರ ತಪ್ಪಿದರೂ ಪ್ರಾಣ ಕಂಟಕವಾಗಲಿದೆ ಎಂಬುದಕ್ಕೆ ಬೆಂಗಳೂರಿನ ಹೊರವಲಯದ ಸೋಂಪುರದ ಬಳಿಯ ನೈಸ್‍ರಸ್ತೆಯಲ್ಲಿ ನಡೆದ ಅಪಘಾತ ಸ್ಪಷ್ಟ ಉದಾಹರಣೆಯಾಗಿದೆ.

ಟಾಟಾ ನೆಕ್ಸಾನ್ ಕಾರಿನಲ್ಲಿ ಮುಂಜಾನೆ 2.30ರ ಸುಮಾರಿಗೆ ಕುಟುಂಬ ಸಮೇತ ಪ್ರಯಾಣಿಸುತ್ತಿದ್ದ ಸಾಫ್ಟ್‍ವೇರ್ ಇಂಜಿನಿಯರ್ ಮಹೇಂದ್ರನ್ ರವರು ನೈಸ್ ರಸ್ತೆಯಲ್ಲಿರುವಾಗ ನೀರು ಕುಡಿಯಲು ಬಾಟಲ್ ತೆಗೆದುಕೊಂಡಿದ್ದಾರೆ.

ನಾಂದೇಡ್ : ಔಷಧಿ ಕೊರತೆಯಿಂದ ಮೃತಪಟ್ಟ ಮಕ್ಕಳ ಸಂಖ್ಯೆ 31ಕ್ಕೆ ಏರಿಕೆ

ಕೆಲವೇ ಕ್ಷಣಗಳಲ್ಲಿ ಕಾರು ಲಾರಿಗೆ ಡಿಕ್ಕಿ ಹೊಡೆದು ನಿಯಂತ್ರಣ ತಪ್ಪಿ ಪಲ್ಟಿಯಾಗಿ ಬಿದ್ದಿದೆ.
ಅಪಘಾತದ ರಭಸಕ್ಕೆ ಕಾರಿನಲ್ಲಿದ್ದವರು ಆಘಾತಕ್ಕೊಳಗಾಗಿದ್ದಾರೆ. ಒಳಗಿದ್ದವರನ್ನು ರಕ್ಷಿಸಲು ಏರ್‍ಬ್ಯಾಗ್ ಅದೇ ವೇಳೆ ತೆರೆದುಕೊಂಡಿದೆ. ಅಪಘಾತದ ತಕ್ಷಣವೇ ಕಾರಿನ ಡೀಸೆಲ್ ಟ್ಯಾಂಕ್ ಸೋರಿಕೆಯಾಗಿ ಬೆಂಕಿ ಹತ್ತಿಕೊಂಡಿದ್ದು, ಸೋಟಗೊಂಡಿದೆ. ಘಟನೆಯಿಂದ ಆಘಾತಕ್ಕೊಳಗಾದವರು ಏರ್‍ಬ್ಯಾಗ್ ಅನ್ನು ಸಡಿಲಿಸಿ ಹೊರಬರುವುದರೊಳಗೆ ಬೆಂಕಿಯ ಕೆನ್ನಾಲಿಗೆ ವ್ಯಾಪಿಸಿದ್ದು, ಕಾರಿನಲ್ಲಿದ್ದ ನಾಲ್ವರ ಪೈಕಿ ತಾಯಿ ಮತ್ತು ಮಗಳು ಸಜೀವ ದಹನವಾಗಿದ್ದಾರೆ.

ಆಧುನಿಕತೆ ಮತ್ತು ತಂತ್ರಜ್ಞಾನ ಜೀವರಕ್ಷಣೆಗಾಗಿ ನಾನಾ ರೀತಿಯ ಸೌಲಭ್ಯಗಳನ್ನು ಒದಗಿಸುತ್ತಿದೆ. ಆದರೆ ಕೆಲವೊಮ್ಮೆ ಅದೂ ಕೂಡ ಅಪಾಯಕಾರಿಯಾಗಲಿದೆ ಎಂಬುದಕ್ಕೆ ಈ ಅಪಘಾತ ಉದಾಹರಣೆಯಾಗಿದೆ.

ಎಕ್ಸ್‍ಪ್ರೆಸ್ ಹೈವೇಗಳಲ್ಲಿ ಕಾರು ಚಾಲನೆ ಮಾಡುವವರು ಕನಿಷ್ಟ 70 ರಿಂದ 80 ಕಿಲೋ ಮೀಟರ್ ವೇಗದಲ್ಲಿ ಚಲಿಸುತ್ತಿರುತ್ತಾರೆ. ಕೆಲವೊಮ್ಮೆ ಅದು 120 ಕಿಲೋ ಮೀಟರ್ ಹೋಗುವ ಸಾಧ್ಯತೆ ಇದೆ. ಅದರಲ್ಲೂ ಮಧ್ಯರಾತ್ರಿ ಎಂದರೆ ರಸ್ತೆ ಖಾಲಿ ಇರುವುದರಿಂದ ವೇಗವೂ ಕೂಡ ಇಮ್ಮಡಿಗೊಂಡಿರುತ್ತದೆ. ನಿದ್ದೆಯ ಮಂಪರು ಕೂಡ ಸಾಮಾನ್ಯವಾಗಿರುತ್ತದೆ.

ಬಿಬಿಎಂಪಿ ಆಯುಕ್ತರ ವಿರುದ್ಧ ತನಿಖೆಗೆ ಸೂಚನೆ

ಈ ಸಂದರ್ಭದಲ್ಲಿ ಒಂದೇ ಒಂದು ಕ್ಷಣ ಎಚ್ಚರ ತಪ್ಪಿದರೂ ಅಪಾಯ ಎದುರಾಗಲಿದೆ. ಸಾಮಾನ್ಯವಾಗಿ ಚಾಲನೆಯಲ್ಲಿರುವಾಗಲೇ ನೀರು ಕುಡಿಯುವುದು, ಮೊಬೈಲ್ ಬಳಸುವುದು, ಅಕ್ಕಪಕ್ಕದಲ್ಲಿದ್ದವರ ಜೊತೆ ಅನಗತ್ಯವಾದ ಸಂವಹನ, ಮದ್ಯಪಾನ ಮಾಡಿ ಚಾಲನೆ ಮಾಡುವುದು, ಧೂಮಪಾನ ಮಾಡುವುದು ಪ್ರಾಣ ಕಂಟಕಗಳಾಗುತ್ತವೆ.

ಸಂಚಾರ ಮತ್ತು ರಸ್ತೆ ಸುರಕ್ಷತೆ ಬಗ್ಗೆ ಇಲಾಖೆಗಳು ಎಷ್ಟೇ ಜಾಗೃತಿ ಮೂಡಿಸಿದರೂ ಮೋಜಿನ ಪ್ರವಾಸದ ಭರದಲ್ಲಿ ವಾಹನ ಚಾಲಕರು ಎಚ್ಚರ ತಪ್ಪಿ ಅಪಘಾತಗಳಿಗೆ ಕಾರಣರಾಗುತ್ತಿದ್ದಾರೆ ಎಂಬ ವರದಿಗಳು ಹೆಚ್ಚಾಗಿ ಕಂಡುಬರುತ್ತಿವೆ.

RELATED ARTICLES

Latest News