Monday, June 24, 2024
Homeಇದೀಗ ಬಂದ ಸುದ್ದಿಟಿಎಂಸಿ ಸಚಿವ ಜ್ಯೋತಿಪ್ರಿಯೋ ಮಲ್ಲಿಕ್ ಬಂಧನ

ಟಿಎಂಸಿ ಸಚಿವ ಜ್ಯೋತಿಪ್ರಿಯೋ ಮಲ್ಲಿಕ್ ಬಂಧನ

ಕೋಲ್ಕತ್ತಾ, ಅ.27- ಬಹುಕೋಟಿ ಪಡಿತರಚೀಟಿ ಹಗರಣ ಸಂಬಂಧ ಪಶ್ಚಿಮ ಬಂಗಾಳದ ಆಡಳಿತಾರೂಢ ಟಿಎಂಸಿ ಸಚಿವ ಜ್ಯೋತಿಪ್ರಿಯೋ ಮಲ್ಲಿಕ್ ಅವರನ್ನು ಜಾರಿನಿರ್ದೇಶನಾಲಯ ಅಧಿಕಾರಿಗಳು ಬಂಧಿಸಿದ್ದಾರೆ. ನಿನ್ನೆ ಬೆಳಗ್ಗೆಯಿಂದ ಪಶ್ಚಿಮ ಬಂಗಾಳದ ವಿವಿಧ ಕಡೆ ಜಾರಿ ನಿರ್ದೇಶನಾಲಯದ ಅಕಾರಿಗಳು ದಾಳಿ ನಡೆಸಿ ಕೆಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು.

ಈ ಹಿಂದೆ ಮುಖ್ಯಮಂತ್ರಿ ಮಮತ ಬ್ಯಾನರ್ಜಿ ಸಂಪುಟದಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರಾಗಿದ್ದ ಹಾಲಿ ಸಾರ್ವಜನಿಕ ಉದ್ಯಮ ಮತ್ತು ಕೈಗಾರಿಕೆ ಹಾಗೂ ಅರಣ್ಯ ಸಚಿವರಾಗಿರುವ ಜ್ಯೋತಿಪ್ರಿಯೋ ಮಲ್ಲಿಕ್ ಅವರನ್ನು ಸುದೀರ್ಘ ವಿಚಾರಣೆ ನಂತರ ಇಂದು ಮುಂಜಾನೆ ಇಡಿ ಅಧಿಕಾರಿಗಳು ಬಂಧಿಸಿದ್ದಾರೆ.

17-18 ಗಂಟೆಗಳ ವಿಚಾರಣೆಯ ನಂತರ ಶುಕ್ರವಾರ ಮುಂಜಾನೆ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಸಚಿವರನ್ನು ಬಂಧಿಸಲಾಗಿದೆ. ಬಂಧಿತ ಜ್ಯೋತಿಪ್ರಿಯೋ ಅವರನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿ ಇಡಿ ಅಧಿಕಾರಿಗಳು ವಶಕ್ಕೆ ಪಡೆಯಲಿದ್ದಾರೆ. ದೊಡ್ಡ ಪಿತೂರಿಯ ಬಲಿಪಶು ನಾನು. ಆಪಾದಿತ ಪಡಿತರ ವಿತರಣೆ ಹಗರಣಕ್ಕೆ ಸಂಬಂಧಿಸಿದಂತೆ ಇಡಿಯಿಂದ ಬಂಧಿಸಲ್ಪಟ್ಟ ನಂತರ ಟಿಎಂಸಿ ಸಚಿವರು ಹೇಳಿದ್ದಾರೆ.

ತಂದೆಯನ್ನು ಆಸ್ಪತ್ರೆಗೆ ಕರೆದೊಯ್ಯಲು 35 ಕೀ.ಮಿ ರಿಕ್ಷಾ ಪೆಡಲ್ ತುಳಿದ ಬಾಲಕಿ

ಕೇಂದ್ರದ ಸರ್ಕಾರಿ ಸಂಸ್ಥೆಗಳ ದುರುಪಯೋಗದ ವಿರುದ್ಧ ವಾಗ್ದಾಳಿ ನಡೆಸಿದ್ದರು ಮತ್ತು ಸರ್ಕಾರದ ವಿರುದ್ಧ ಮಾತನಾಡುವವರ ವಿರುದ್ಧ ಸುಳ್ಳುಗಳನ್ನು ಹರಡುತ್ತಾರೆ. ಮಲ್ಲಿಕ್ ಅವರು ಅಸ್ವಸ್ಥರಾಗಿದ್ದು ಹಲವಾರು ಕಾಯಿಲೆಗಳಿಂದ ಬಳಲುತ್ತಿದ್ದಾರೆ. ವಿಚಾರಣೆಯ ಸಮಯದಲ್ಲಿ ಅವರಿಗೇನಾದರೂ ಆದರೆ ಬಿಜೆಪಿ ಮತ್ತು ಇಡಿ ವಿರುದ್ಧ ಎಫ್‍ಐಆರ್ ದಾಖಲಿಸುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಎಚ್ಚರಿಸಿದ್ದಾರೆ.

ಹಲವಾರು ಟಿಎಂಸಿ ನಾಯಕರು ಭ್ರಷ್ಟಾಚಾರದ ಆರೋಪಗಳನ್ನು ಎದುರಿಸುತ್ತಿದ್ದಾರೆ, ಇದು ರಾಜ್ಯ ಸರ್ಕಾರವನ್ನು ಸ್ಕ್ಯಾನರ್‍ನಡಿ ತಂದಿದೆ. ಈ ವರ್ಷದ ಆರಂಭದಲ್ಲಿ ಪಶ್ಚಿಮ ಬಂಗಾಳದ ಮಾಜಿ ಶಿಕ್ಷಣ ಸಚಿವ ಪಾರ್ಥ ಚಟರ್ಜಿ ಮತ್ತು ಅವರ ಸಹಾಯಕಿ ಅರ್ಪಿತಾ ಮುಖರ್ಜಿ ಅವರನ್ನು ಶಿಕ್ಷಕರ ನೇಮಕಾತಿಯಲ್ಲಿನ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಬಂಧಿಸಲಾಯಿತು.

ಆಪಾದಿತ ಪಡಿತರ ಹಗರಣದಲ್ಲಿ, ಉದ್ಯಮಿ ಬಾಕಿಬುರ್ ರಹಮಾನ್ ಅವರನ್ನು ಅ.14ರಂದು ಕೋಲ್ಕತ್ತಾದ ಪೂರ್ವ ಹೊರವಲಯದಲ್ಲಿರುವ ಕೈಖಾಲಿಯಲ್ಲಿರುವ ಅವರ ಮನೆಯಿಂದ ಇಡಿ ಬಂಧಿಸಿತ್ತು. ಇಡಿ ಅಧಿಕಾರಿಗಳ ಪ್ರಕಾರ, ರೆಹಮಾನ್ ಮಲ್ಲಿಕ್ ಜೊತೆ ನಿಕಟ ಸಂಪರ್ಕ ಹೊಂದಿದ್ದಾರೆ ಎಂದು ಆರೋಪಿಸಲಾಗಿದೆ. ರೆಹಮಾನ್ ಅವರು ವಿತರಕರಿಗೆ ಅಕ್ಕಿ ಮತ್ತು ಗೋಯನ್ನು ಕಡಿಮೆ ಪ್ರಮಾಣದಲ್ಲಿ ಸರಬರಾಜು ಮಾಡುತ್ತಿದ್ದರು. ಉಳಿದ ಹಣವನ್ನು ನಂತರ ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಯಿತು.

ಇಡಿ ನಾಡಿಯಾ ಮತ್ತು ಉತ್ತರ 24 ಪರಗಣ ಜಿಲ್ಲೆಗಳಲ್ಲಿ ರಹಮಾನ್‍ನ ಸುಮಾರು ಹನ್ನೆರಡು ಸ್ಥಳಗಳಲ್ಲಿ ಮೂರು ದಿನಗಳ ಕಾಲ ಶೋಧ ಕಾರ್ಯಾಚರಣೆ ನಡೆಸಿತ್ತು. ಈ ಸ್ಥಳಗಳಲ್ಲಿ ಅಕ್ಕಿ ಮತ್ತು ಹಿಟ್ಟಿನ ಗಿರಣಿಗಳು, ಮೂರು ಸ್ಟಾರ್ ಹೋಟೆಲ್ ಮತ್ತು ರೆಹಮಾನ್ ಒಡೆತನದ ಬಾರ್ ಸೇರಿವೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ.

ಗಡಿಯಲ್ಲಿ ಪಾಕ್ ಅಪ್ರಚೋದಿತ ಗುಂಡಿನ ದಾಳಿ, ಕರ್ನಾಟಕದ ಯೋಧನಿಗೆ ಗಂಭೀರ ಗಾಯ

ಕೇಂದ್ರ ಕೋಲ್ಕತ್ತಾದ ಅಮ್ಹೆಸ್ರ್ಟ್ ಸ್ಟ್ರೀಟ್‍ನಲ್ಲಿರುವ ಮಲ್ಲಿಕ್ ಅವರ ಪೂರ್ವಜರ ಮನೆಯನ್ನೂ ಇಡಿ ಶೋಧಿಸಿದೆ. ಆಪಾದಿತ ಹಗರಣವು ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ಮತ್ತು ಕೋವಿಡ್ ಲಾಕ್‍ಡೌನ್‍ಗಳ ಸಮಯದಲ್ಲಿ ಆಹಾರ ಧಾನ್ಯಗಳ ವಿತರಣೆಯಲ್ಲಿ ವರದಿಯಾದ ಅಕ್ರಮಗಳಿಗೆ ಸಂಬಂಸಿದೆ.

RELATED ARTICLES

Latest News