Thursday, December 5, 2024
Homeಇದೀಗ ಬಂದ ಸುದ್ದಿಎಎಪಿ ಸಂಸದರ ಮನೆ ಮೇಲೆ ಇ.ಡಿ. ದಾಳಿ

ಎಎಪಿ ಸಂಸದರ ಮನೆ ಮೇಲೆ ಇ.ಡಿ. ದಾಳಿ

ಗುರುಗ್ರಾಮ್‌‍, ಅ.7- ಭೂ ವಂಚನೆ ಪ್ರಕರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯಇಂದು ಎಎಪಿ ರಾಜ್ಯಸಭಾ ಸದಸ್ಯ ಸಂಜೀವ್‌ ಅರೋರಾ ಅವರ ಮನೆ ಹಾಗು ಕಚೇರಿಗಳ ಮೇಲೆ ದಾಳಿ ನಡಲಾಗಿದೆ.
ಹರಿಯಾಣದ ಗುರುಗ್ರಾವ ನಲ್ಲಿರುವ ಪಂಜಾಬ್‌ನ ಸಂಸದರ ಮನೆಯನ್ನು ಮತ್ತು ಲುಧಿಯಾನದಲೂ ಹಲವು ಕಡೆ ಕಾರ್ಯಾಚರಣೆ ನಡೆಸಲಾಗಿದೆ.

ಆಮ್‌ ಆದಿ ಪಕ್ಷದ (ಎಎಪಿ) ನಾಯಕ ಮತ್ತು ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಅವರು ತಮ ಸಂಸದ, ಉದ್ಯಮಿ ವಿರುದ್ಧದ ದಾಳಿಗಳು ತಮ ಪಕ್ಷವನ್ನು ಒಡೆಯುವ ಪ್ರಯತ್ನವಾಗಿದೆ ಎಂದು ಎಕ್‌್ಸನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಶೋಧ ನಡೆಸಲಾಗುತ್ತಿದ್ದು, ಭೂ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

RELATED ARTICLES

Latest News