Sunday, October 13, 2024
Homeರಾಷ್ಟ್ರೀಯ | Nationalನಿವೃತ್ತ ಐಎಎಸ್‌‍ ಅಧಿಕಾರಿ ಮನೆ ಮೇಲೆ ಇಡಿ ರೇಡ್

ನಿವೃತ್ತ ಐಎಎಸ್‌‍ ಅಧಿಕಾರಿ ಮನೆ ಮೇಲೆ ಇಡಿ ರೇಡ್

ನವದೆಹಲಿ, ಮೇ 21 (ಪಿಟಿಐ) ನಿವೃತ್ತ ಐಎಎಸ್‌‍ ಅಧಿಕಾರಿ ಹಾಗೂ ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆ (ಡಿಪಿಐಐಟಿ) ಕಾರ್ಯದರ್ಶಿ ರಮೇಶ್‌ ಅಭಿಷೇಕ್‌ ಅವರ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಸಂಬಂಧ ಅಕ್ರಮ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯ ದಾಳಿ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

1982-ಬ್ಯಾಚ್‌ ಅಧಿಕಾರಿಯ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ) ಇತ್ತೀಚೆಗೆ ದಾಖಲಿಸಿದ ಎಫ್‌ಐಆರ್‌ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳು ಈ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಅಭಿಷೇಕ್‌ 2019 ರಲ್ಲಿ ಸೇವೆಯಿಂದ ನಿವೃತ್ತ ರಾಗಿದ್ದರು ಮನಿ ಲಾಂಡರಿಂಗ್‌ ತನಿಖೆಯ ಭಾಗವಾಗಿ ಅವರ ಆವರಣದಲ್ಲಿ ಶೋಧ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಅಭಿಷೇಕ್‌ ಅವರು ಸೇವೆಯಲ್ಲಿದ್ದಾಗ ವ್ಯವಹರಿಸಿದ ಖಾಸಗಿ ಕಂಪನಿಗಳಿಂದ ಸಮಾಲೋಚನಾ ಶುಲ್ಕವಾಗಿ ದೊಡ್ಡ ಮೊತ್ತ ಪಡೆಯುವ ಮೂಲಕ ನಿವತ್ತಿಯ ನಂತರ ಅಕ್ರಮವಾಗಿ ತನ್ನನ್ನು ತಾನು ಶ್ರೀಮಂತಗೊಳಿಸಿಕೊಂಡಿದ್ದಾರೆ ಎಂದು ಸಿಬಿಐ ತನ್ನ ಎಫ್‌ಐಆರ್‌ನಲ್ಲಿ ಆರೋಪಿಸಿದೆ.ಸಿಬಿಐ ಮತ್ತು ಇಡಿ ಅವರ ಪುತ್ರಿ ವನೆಸ್ಸಾ ವಿರುದ್ಧವೂ ಪ್ರಕರಣ ದಾಖಲಿಸಿದೆ.

ನಿವತ್ತ ಅಧಿಕಾರಿಯು ಫಾರ್ವರ್ಡ್‌ ಮಾರ್ಕೆಟ್ಸ್‌‍ ಕಮಿಷನ್‌ ಅಧ್ಯಕ್ಷ ಹ್ದುೆಯನ್ನೂ ಹೊಂದಿದ್ದರು ಮತ್ತು ಭ್ರಷ್ಟಾಚಾರ ವಿರೋಧಿ ಲೋಕಪಾಲ್‌ ಅವರ ಉಲ್ಲೇಖದ ಮೇರೆಗೆ ಅವರ ವಿರುದ್ಧ ಸಿಬಿಐ ಪ್ರಕರಣವನ್ನು ದಾಖಲಿಸಲಾಗಿದೆ.

ಮಾಜಿ ಐಎಎಸ್‌‍ ಅಧಿಕಾರಿ ಕಾರ್ಯದರ್ಶಿ ಅಥವಾ ಅಧ್ಯಕ್ಷರಾಗಿ ಅಧಿಕತ ವ್ಯವಹಾರ ಹೊಂದಿರುವ ವಿವಿಧ ಘಟಕಗಳು ಮತ್ತು ಸಂಸ್ಥೆಗಳಿಂದ ತಂದೆ-ಮಗಳು ವತ್ತಿಪರ ಶುಲ್ಕವಾಗಿ ದೊಡ್ಡ ಮೊತ್ತವನ್ನು ಪಡೆದಿದ್ದಾರೆ ಎಂದು ಲೋಕಪಾಲ್‌ ಆರೋಪಿಸಿದ್ದಾರೆ.

RELATED ARTICLES

Latest News