Sunday, May 19, 2024
Homeರಾಷ್ಟ್ರೀಯಆನೆ ದಾಳಿಯಿಂದ ಜೀವ ಹಾನಿ: ಕರ್ನಾಟಕಕ್ಕೆ ಮೊದಲ ಸ್ಥಾನ

ಆನೆ ದಾಳಿಯಿಂದ ಜೀವ ಹಾನಿ: ಕರ್ನಾಟಕಕ್ಕೆ ಮೊದಲ ಸ್ಥಾನ

ಬೆಂಗಳೂರು, ಫೆ.25- ಕಾಂಗ್ರೆಸ್ ನಾಯಕ ರಾಹುಲ್‍ಗಾಂಧಿ ಸ್ರ್ಪಧಿಸುತ್ತಿರುವ ವಯನಾಡು ಅರಣ್ಯ ಪ್ರದೇಶದಲ್ಲಿ ಆನೆ ದಾಳಿ ಸಂಘರ್ಷದಿಂದ ಮೃತಪಟ್ಟ ಇಬ್ಬರಿಗೆ ಕರ್ನಾಟಕ ಸರ್ಕಾರದಿಂದ ಪರಿಹಾರ ಪಾವತಿಸಿದ್ದಕ್ಕೆ ವ್ಯಾಪಕ ಟೀಕೆಗಳು ಕೇಳಿ ಬಂದಿವೆ, ಅದರ ನಡುವೆ ಆನೆಗಳು ಕೇರಳಕ್ಕೆ ತಲುಪಿದ ಬಗ್ಗೆ ಅಲ್ಲಿನ ಅರಣ್ಯ ಅಧಿಕಾರಿಗಳು ಸುದೀರ್ಘ ಮಾಹಿತಿ ನೀಡಿದ್ದಾರೆ.

ಕೇರಳದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಮುಖ್ಯ ವನ್ಯಜೀವಿ ವಾರ್ಡನ್ ಡಿ ಜಯಪ್ರಸಾದ್ ಮಾಹಿತಿ ನೀಡಿದ್ದು, ಆನೆ ದಾಳಿಯಲ್ಲಿ ಇಬ್ಬರು ವ್ಯಕ್ತಿಗಳು ಸಾವನ್ನಪ್ಪಿದ ನಂತರ ವಯನಾಡ್‍ನಲ್ಲಿ ಪ್ರತಿಭಟನೆಗಳು ತೀವ್ರಗೊಂಡಿವೆ. ಅರಣ್ಯ ಅಧಿಕಾರಿಗಳು ವನ್ಯ ಜೀವಿ ಸಂಘರ್ಷ ತಡೆಯಲು ಸಂಘಟಿತ ಪ್ರಯತ್ನ ಮಾಡುತ್ತಿದ್ದಾರೆ. ಮಾನವ-ಪ್ರಾಣಿ ಸಂಘರ್ಷವನ್ನು ತಡೆಗಟ್ಟಲು ಕಂದಾಯ, ಎಲ್‍ಎಸ್‍ಜಿಡಿ ಮತ್ತು ಪೋಲೀಸ್‍ನಂತಹ ಇತರ ಹಲವು ಇಲಾಖೆಗಳ ಸಕ್ರಿಯ ಸಹಭಾಗಿತ್ವ ಅಗತ್ಯ ಎಂದು ತಿಳಿಸಿದ್ದಾರೆ.

ಹುಲಿಗಳು ಮತ್ತು ಆನೆಗಳಿಗೆ ಸ್ಮಾರ್ಟ್-ಬೇಲಿ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವುದು ಸೇರಿದಂತೆ ಅನೇಕ ಕ್ರಮಗಳನ್ನು ಕೈಗೊಂಡಿದ್ದೇವೆ. ವಯನಾಡಿನ ಚೆತಲಯಂ ವ್ಯಾಪ್ತಿಯಲ್ಲಿ ಒಂದು ಮಾದರಿಯನ್ನು ಸ್ಥಾಪಿಸಲಾಗುವುದು. ಕೇರಳ ಅರಣ್ಯ ಇಲಾಖೆಯು ವಯನಾಡ್‍ಗೆ ಆಗಮಿಸಿರುವ ಪರಿಸರ ಮತ್ತು ಅರಣ್ಯ ಸಚಿವಾಲಯದ ತಂಡದ ಎದುರು ಸ್ಥಳೀಯರು ಕರ್ನಾಟಕ, ತಮಿಳುನಾಡು ಮತ್ತು ನೆರೆಯ ಅರಣ್ಯ ಪ್ರದೇಶಗಳಲ್ಲಿ ವನ್ಯ ಜೀವಿಗಳು ಸ್ಥಳಾಂತರವಾಗುತ್ತಿರುವ ಕುರಿತು ಅಧ್ಯಯನ ನಡೆಸುವಂತೆ ಒತ್ತಾಯಿಸಿದ್ದಾರೆ. ಒಂದು ವೇಳೆ ಸಾಮಥ್ರ್ಯಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ವನ್ಯ ಜೀವಿಗಳನ್ನು ಸ್ಥಳಾಂತರಿಸಿದರೆ ಪರಿಶೀಲನೆ ನಡೆಸುವುದಾಗಿ ಸಚಿವಾಲಯದ ತಂಡ ಭರವಸೆ ನೀಡಿದೆ.

ಸರ್ಕಾರಗಳ ಬಹುತೇಕ ನಿರ್ಧಾರಗಳು ತಾತ್ಕಾಲಿಕ ಪರಿಹಾರಗಳಿಗೆ ಸೀಮಿತವಾಗಿವೆ. ಸಮಸ್ಯೆಗೆ ವೈಜ್ಞಾನಿಕ ಪರಿಹಾರವನ್ನು ಹುಡುಕುತ್ತಿಲ್ಲ ಎಂದು ಪ್ರಾಣಿಗಳ ಮಾಹಿತಿ ಸಂಗ್ರಹಣೆ ಮತ್ತು ಸಂರಕ್ಷಣೆಯಲ್ಲಿ ವಿವಿಧ ಸರ್ಕಾರಗಳೊಂದಿಗೆ ನಿಕಟವಾಗಿ ಕೆಲಸ ಮಾಡುವ ಆನೆ ತಜ್ಞರು ಆಕ್ಷೇಪಿಸಿದ್ದಾರೆ.

ಅಯೋಧ್ಯೆ ಮಂದಿರಕ್ಕೆ 25 ಕೆಜಿ ಚಿನ್ನ -25 ಕೋಟಿ ರೂ ದೇಣಿಗೆ

ಪ್ರಸ್ತುತ ವಯನಾಡ್‍ನಲ್ಲಿರುವ ಬೇಲೂರು ಮಖಾನಾ ಆನೆಯನ್ನು ಕರ್ನಾಟಕದ ಬೇಲೂರಿನಲ್ಲಿ ಸೆರೆ ಹಿಡಿಯಲಾಯಿತು, ಬಂಡೀಪುರದಿಂದ ತಂದು ವಯನಾಡಿಗೆ ಬಿಡಲಾಗಿದೆ. ವಯನಾಡ್‍ನಲ್ಲಿ ಈಗಾಗಲೇ ಇತರ ಆನೆಗಳು ಇದ್ದಿದ್ದರಿಂದ ಹೊಸದಾಗಿ ಬಂದ ಆನೆ ಜನವಸತಿ ಪ್ರದೇಶಕ್ಕೆ ತೆರಳುವುದು ಅನಿವಾರ್ಯವಾಗಿತ್ತು. ಮುನ್ನಾರ್‍ನ ಆರಿಕೊಂಬನ್ ಆನೆಯನ್ನು ಮೊದಲು ಪೆರಿಯಾರ್ ಹುಲಿ ಸಂರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಯಿತು, ಅಲ್ಲಿ ಈಗಾಗಲೇ ಹೆಚ್ಚು ಆನೆಗಳಿದ್ದರಿಂದ ಅದು ಕಾಡಿನಿಂದ ಹೊರ ಬರದಲು ಪ್ರಾರಂಭಿಸಿದಾಗ, ಮತ್ತೆ ಸೆರೆಹಿಡಿದು ಕಲಕ್ಕಾಡ್-ಮುಂಡಂತುರೈ ಮೀಸಲು ಪ್ರದೇಶಕ್ಕೆ ಕಳುಹಿಸಲಾಯಿತು. ಅದು ಅಲ್ಲಿಯೂ ನೆಲೆ ನಿಂತಿಲ್ಲ. ಸಹಜವಾಗಿ ಹೊರ ಬಂದಿದೆ. ಇದರಿಂದ ವನ್ಯ ಜೀವಿ ಮತ್ತು ಮಾನವ ಸಂಘರ್ಷವಾಗಿದೆ ಎಂದು ತಜ್ಞರು ವ್ಯಾಖ್ಯಾನಿಸಿದ್ದಾರೆ. ಪ್ರಸ್ತುತ ಅಂದಾಜಿನ ಪ್ರಕಾರ, ಕೇರಳವು ಸರಿಸುಮಾರು 2,000 ರಿಂದ 2,500 ಆನೆಗಳನ್ನು ಹೊಂದಿದೆ.

ಕೇರಳ ರಾಜ್ಯ ಅರಣ್ಯ ಇಲಾಖೆ ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ ಕಳೆದ ಮೂರು ವರ್ಷಗಳಿಂದ ವನ್ಯ ಜೀವಿ ಸಂಘರ್ಷದಿಂದ ಮಾನವ ಸಾವುಗಳು ಗಮನಾರ್ಹವಾಗಿ ಕಡಿಮೆಯಾಗಿದೆ. 2021-2022ರಲ್ಲಿ ದಾಖಲಾದ ಸಂಖ್ಯೆಗಳಿಗೆ ಹೋಲಿಸಿದರೆ 2023-2024ರ ಅವಧಿಯಲ್ಲಿ ಕೇರಳದಲ್ಲಿ ಆನೆಗಳ ದಾಳಿಯಿಂದ ಸಾವನ್ನಪ್ಪಿದವರ ಸಂಖ್ಯೆ ಕಡಿಮೆಯಾಗಿದೆ.

2023-2024ರ ಅವಧಿಯಲ್ಲಿ ಆನೆ ದಾಳಿಗೆ 17 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 2022-2023ರಲ್ಲಿ 27 ಮತ್ತು 2021-2022ರಲ್ಲಿ 35 ಸಾವುಗಳು ವರದಿಯಾಗಿವೆ. ಮಾನವ-ಪ್ರಾಣಿ ಸಂಘರ್ಷ ಹೆಚ್ಚಾಗಿರುವ ಒಡಿಶಾ, ಜಾರ್ಖಂಡ್ ಮತ್ತು ಕರ್ನಾಟಕದಂತಹ ರಾಜ್ಯಗಳಿಗೆ ಹೋಲಿಸಿದರೆ ಈ ಸಂಖ್ಯೆಗಳು ತುಂಬಾ ಕಡಿಮೆಯಾಗಿದೆ.
ಜಾರ್ಖಂಡ್ ಅರಣ್ಯ ಇಲಾಖೆ ಮೂಲಗಳ ಪ್ರಕಾರ, ಆನೆಗಳ ದಾಳಿಯಲ್ಲಿ ವಾರ್ಷಿಕವಾಗಿ ಸರಾಸರಿ 100 ಕ್ಕೂ ಹೆಚ್ಚು ಜನರು ಸಾಯುತ್ತಾರೆ. ಕರ್ನಾಟಕ ಅರಣ್ಯ ಇಲಾಖೆಯು ಕಳೆದ ಐದು ವರ್ಷಗಳಲ್ಲಿ ಮಾನವ-ಆನೆ ಸಂಘರ್ಷದಿಂದ 148 ಮಾನವ ಸಾವುನೋವುಗಳು ವರದಿಯಾಗಿವೆ ಎಂದು ತಿಳಿಸಿದೆ.

ಒಡಿಶಾ, ಅಸ್ಸಾಂ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳು ಐದು ವರ್ಷಗಳ ಅವಧಿಯಲ್ಲಿ ಮಾನವ-ಪ್ರಾಣಿ ಸಂಘರ್ಷಗಳಲ್ಲಿ ಕ್ರಮವಾಗಿ 499, 385 ಮತ್ತು 358 ಜನರನ್ನು ಕಳೆದುಕೊಂಡಿವೆ ಎಂದು ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯವು ಸಂಸತ್‍ನಲ್ಲಿ ಉತ್ತರಿಸಿದೆ. ಕೇರಳ ಅರಣ್ಯ ಇಲಾಖೆಯು ಕಳೆದ ಐದು ವರ್ಷಗಳಲ್ಲಿ, ರಾಜ್ಯದಲ್ಲಿ ಕಾಡುಹಂದಿಗಳ ದಾಳಿಯಿಂದ ಸಾವುಗಳು ಗಣನೀಯವಾಗಿ ಹೆಚ್ಚಿವೆ ಎಂದು ತಿಳಿಸಿದೆ.

ದೇಶದ ಅತೀ ಉದ್ದದ ಕೇಬಲ್ ಸೇತುವೆಯನ್ನು ಲೋಕಾರ್ಪಣೆ ಮಾಡಿದ ಮೋದಿ

2016-2017ರಲ್ಲಿ ಕಾಡುಹಂದಿ ದಾಳಿಯಲ್ಲಿ ನಾಲ್ಕು ಮಾನವ ಸಾವುನೋವುಗಳು ವರದಿಯಾಗಿದ್ದವು, 2023-2024ರ ವೇಳೆಗೆ ಈ ಸಂಖ್ಯೆ 11ಕ್ಕೆ ಏರಿದೆ. ಹುಲಿ ದಾಳಿಯಿಂದ ಕಳೆದ ನಾಲ್ಕು ವರ್ಷಗಳಿಂದ ವರ್ಷಕ್ಕೆ ಒಂದು ಸಾವು ಸಂಭವಿಸಿದೆ. 2023-2024ರಲ್ಲಿ ಭಾರತೀಯ ಗೌರ್ ದಾಳಿಯಿಂದಾಗಿ ಮೂರು ಸಾವುಗಳು ವರದಿಯಾಗಿವೆ. ಕಾಡು ಪ್ರಾಣಿಗಳ ದಾಳಿಯಲ್ಲಿ ಗಾಯಗೊಂಡವರ ಪ್ರಕರಣಗಳು ಕಡಿಮೆಯಾಗಿದೆ.

2020-2021ರ ಅವಯಲ್ಲಿ ಅತಿ ಹೆಚ್ಚು ಗಾಯಗಳು ವರದಿಯಾಗಿದ್ದು, 988 ಪ್ರಕರಣಗಳು ದಾಖಲಾಗಿವೆ. 2021-2022 ಅವಧಿಯಲ್ಲಿ ಈ ಸಂಖ್ಯೆ 758 ಕ್ಕೆ ಇಳಿದಿದೆ ಎಂದು ದತ್ತಾಂಸ ತಿಳಿಸಿದೆ. ಪ್ರಸ್ತುತ ದತ್ತಾಂಶವು ಕಾಡು ಪ್ರಾಣಿಗಳ ದಾಳಿಯಿಂದ ಸಾವನ್ನಪ್ಪಿದವರ ಸಂಖ್ಯೆಯಲ್ಲಿ ಹಾವು ಕಡಿತದ ಸಾವುಗಳನ್ನು ಒಳಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೇರಳದಲ್ಲಿ ಗುಡ್ಡಗಾಡು ಜಿಲ್ಲೆ ವಯನಾಡ್ ಮಾನವ-ಪ್ರಾಣಿ ಸಂಘರ್ಷದ ಪ್ರಮುಖ ಪ್ರದೇಶವಾಗಿದೆ. ಕಣ್ಣೂರಿನ ಅರಾಲಂ, ಕೊಯಮತ್ತೂರು-ಪಾಲಕ್ಕಾಡ್ ಗಡಿ ಪ್ರದೇಶಗಳು ಮತ್ತು ಇಡುಕ್ಕಿ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಇದೇ ರೀತಿಯ ಪ್ರಕರಣಗಳು ವರದಿಯಾಗಿವೆ.

RELATED ARTICLES

Latest News