Sunday, April 28, 2024
Homeಇದೀಗ ಬಂದ ಸುದ್ದಿವಿದೇಶಿ ಹಡಗನ್ನು ಜಪ್ತಿ ಮಾಡುವಂತೆ ಒರಿಸ್ಸಾ ಹೈಕೋರ್ಟ್ ಆದೇಶ

ವಿದೇಶಿ ಹಡಗನ್ನು ಜಪ್ತಿ ಮಾಡುವಂತೆ ಒರಿಸ್ಸಾ ಹೈಕೋರ್ಟ್ ಆದೇಶ

ಕಟಕ್, ಫೆ.25- ಪರದೀಪ್ ಬಂದರಿನಲ್ಲಿ ಪಾವತಿಸದ ಬರ್ತ್ ಬಾಡಿಗೆ ಶುಲ್ಕಕ್ಕೆ ಸಂಬಂಧಿಸಿದಂತೆ ವಿದೇಶಿ ಸರಕು ಹಡಗನ್ನು ಜಪ್ತಿ ಮಾಡುವಂತೆ ಒರಿಸ್ಸಾ ಹೈಕೋರ್ಟ್ ಆದೇಶಿಸಿದೆ. ಅಡ್ಮಿರಾಲ್ಟಿ ಕಾನೂನಿನ ಅಡಿಯಲ್ಲಿ ಕಡಲ ಹಕ್ಕುಗಳ ಜಾರಿಗಾಗಿ ಯಾವುದೇ ಹಡಗಿನ ಮಾಲೀಕತ್ವ, ನಿರ್ಮಾಣ, ಸ್ವಾೀಧಿನ, ನಿರ್ವಹಣೆ, ಕಾರ್ಯಾಚರಣೆ ಅಥವಾ ವ್ಯಾಪಾರದಿಂದ ಉಂಟಾಗುವ ನಷ್ಟ ಪರಿಹಾರಕ್ಕಾಗಿ ಕ್ರಮ ಕೈಗೊಳ್ಳಬಹುದು. ಅದರಲ್ಲಿ ಹಡಗನ್ನು ಜಪ್ತಿ ಮಾಡುವುದು ಸೇರಿದೆ.

ಪನಾಮದಲ್ಲಿ ನೋಂದಾಯಿತ ಎಂ ವಿ ಡೆಬಿ ಹಡಗು ಮೂರು ತಿಂಗಳ ಕಾಲ ಬಂದರಿನಲ್ಲಿ ಲಂಗರು ಹಾಕಿದೆ. ಅದರಿಂದ ಕಳೆದ ವರ್ಷ ಡಿಸೆಂಬರ್ 1 ರಂದು ಸುಮಾರು 220 ಕೋಟಿ ರೂಪಾಯಿ ಮೌಲ್ಯದ ಕೊಕೇನ್ ತುಂಬಿದ ಹಲವಾರು ಪ್ಯಾಕೆಟ್‍ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಈ ನಿಟ್ಟಿನಲ್ಲಿ ಎನ್‍ಡಿಪಿಎಸ್ ಕಾಯ್ದೆ ಮತ್ತು ಕಸ್ಟಮ್ಸ್ ಕಾಯ್ದೆಯಡಿ ಸ್ಥಳೀಯ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ದೇಶದ ಅತೀ ಉದ್ದದ ಕೇಬಲ್ ಸೇತುವೆಯನ್ನು ಲೋಕಾರ್ಪಣೆ ಮಾಡಿದ ಮೋದಿ

ಪರದೀಪ್ ಬಂದರಿನ ಪರದೀಪ್ ಇಂಟರ್‍ನ್ಯಾಷನಲ ಕಾರ್ಗೋ ಟರ್ಮಿನಲ್ ಪ್ರವೈಟ್ ಲಿಮಿಟೆಡ್ (ಪಿಐಸಿಟಿಪಿಎಲ್) ಹಡಗಿನ ವಿರುದ್ಧ ಮೊಕದ್ದಮೆ ಹೂಡಿದೆ ಮತ್ತು ಹಡಗನ್ನು ಜಪ್ತಿ ಮಾಡಲು ಆದೇ ನೀಡುವಂತೆ ಕಳೆದ ತಿಂಗಳು ಹೈಕೋರ್ಟ್‍ಗೆ ಮೊರೆ ಹೋಗಿದೆ. ಸರಕು ಹಡಗಿನಿಂದ 7.95 ಕೋಟಿ ರೂಪಾಯಿಗಳು ಶುಲ್ಕ ಬರಬೇಕಿದೆ.

ಅದರಲ್ಲಿ ಬರ್ತ್ ಬಾಡಿಗೆ ಶುಲ್ಕಗಳು, ದಂಡದ ಶುಲ್ಕಗಳು, ಕಾನೂನು ವೆಚ್ಚ ಮತ್ತು ಇತರೆ ಸೇರಿವೆ ಎಂದು ತಿಳಿಸಲಾಗಿದೆ. ನ್ಯಾಯಮೂರ್ತಿ ವಿ.ನರಸಿಂಗ್ ಅವರ ಏಕಸದಸ್ಯ ಪೀಠ ಸರಕು ಹಡಗನ್ನು ಬಂಧಿಸದ ಹೊರತು ಮೊಕದ್ದಮೆ ಇತ್ಯರ್ಥವಾಗುವುದಿಲ್ಲ ಎಂದು ವಾದಿಸಲಾಗಿತ್ತು. ಪ್ರಕರಣದ ಮುಂದಿನ ವಿಚಾರಣೆಯನ್ನು ಮಾರ್ಚ್ 7ಕ್ಕೆ ನ್ಯಾಯಾಲಯ ನಿಗದಿಪಡಿಸಿದೆ.

RELATED ARTICLES

Latest News