ವಾಷಿಂಗ್ಟನ್, ಏ.20- ಟೆಸ್ಲಾ ಸಂಸ್ಥೆಯ ಕೆಲಸದ ಒತ್ತಡದಿಂದಾಗಿ ಭಾರತದ ಪ್ರವಾಸವನ್ನು ಮುಂದೂಡಿದ್ದೇನೆ ಎಂದು ವಿಶ್ವದ ಶ್ರೀಮಂತ ವ್ಯಕ್ತಿ ಎಲೋನ್ ಮಸ್ಕ್ ಇಂದಿಲ್ಲಿ ತಿಳಿಸಿದ್ದಾರೆ. ಕೆಲಸದ ಒತ್ತಡದಿಂದಾಗಿ ನಾನು ಭಾರತದ ಪ್ರವಾಸವನ್ನು ಮುಂದೂಡಿದ್ದೇನೆ ಮುಂದಿನ ವರ್ಷ ನಾನು ಅಲ್ಲಿಗೆ ಭೇಟಿ ನೀಡುತ್ತೇನೆ ಎಂದು ಮಸ್ಕ್ ಎಕ್ಸ್ ಮಾಡಿದ್ದಾರೆ.
ಕಳೆದ ವಾರ ಮಸ್ಕ್ ಅವರು ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲು ಎದುರು ನೋಡುತ್ತಿದ್ದೇನೆ ಎಂದು ಹೇಳಿದ್ದರು, ನಂತರ ಅವರು ಏಪ್ರಿಲ್ 21 ರಂದು ದೇಶಕ್ಕೆ ಆಗಮಿಸಬಹುದು ಎಂದು ವರದಿಗಳು ಉಲ್ಲೇಖಿಸಿದ್ದವು.
ಅವರು ಕಳೆದ ಜೂನ್‍ನಲ್ಲಿ ಯುಎಸ್‍ನಲ್ಲಿ ಪ್ರಧಾನ ಮಂತ್ರಿಯನ್ನು ಭೇಟಿಯಾಗಿದ್ದರು ಮತ್ತು ತಮ್ಮನ್ನು ಮೋದಿ ಅಭಿಮಾನಿ ಎಂದು ಬಣ್ಣಿಸಿಕೊಂಡಿದ್ದರು, ಟೆಸ್ಲಾ ಮಾನವೀಯವಾಗಿ ಸಾಧ್ಯವಾದಷ್ಟು ಬೇಗ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸುತ್ತದೆ ಎಂದು ಭರವಸೆ ನೀಡಿದ್ದರು.