Sunday, October 13, 2024
Homeಕ್ರೀಡಾ ಸುದ್ದಿ | Sportsಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮೊಯಿನ್‌ ಅಲಿ ವಿದಾಯ

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮೊಯಿನ್‌ ಅಲಿ ವಿದಾಯ

England allrounder Moeen Ali retires from international cricket

ಬೆಂಗಳೂರು, ಸೆ.8- ಆಸ್ಟ್ರೇಲಿಯಾ ವಿರುದ್ಧದ ವೈಟ್‌ಬಾಲ್‌ ಸರಣಿಗೆ ತಮನ್ನು ಕಡೆಗಾಣಿಸಿದ ಬೆನ್ನಲ್ಲೇ ಇಂಗ್ಲೆಂಡ್‌ನ ಸ್ಟಾರ್‌ ಆಲ್‌ ರೌಂಡರ್‌ ಮೊಯಿನ್‌ ಅಲಿ ಅವರು ತಮ ಸುದೀರ್ಘ ಕ್ರಿಕೆಟ್‌ ಜೀವನಕ್ಕೆ ವಿದಾಯ ಹೇಳಿದ್ದಾರೆ.

ವೆಸ್ಟ್‌ಇಂಡೀಸ್‌‍ ಹಾಗೂ ಅಮೇರಿಕಾದ ಜಂಟಿ ಆತಿಥ್ಯದಲ್ಲಿ ನಡೆದಿದ್ದ ಟ್ವೆಂಟಿ-20 ವಿಶ್ವಕಪ್‌ ಟೂರ್ನಿಯ ಸೆಮಿಫೈನಲ್‌ನಲ್ಲಿ ಭಾರತ ವಿರುದ್ಧದ ಪಂದ್ಯದಲ್ಲಿ ಮೊಯಿನ್‌ ಅಲಿ ಕೊನೆಯ ಬಾರಿಗೆ ರಾಷ್ಟ್ರೀಯ ತಂಡದ ಪರ ಕಾಣಿಸಿಕೊಂಡಿದ್ದರು.

ನನಗೀಗ 37 ವರ್ಷ ವಯಸ್ಸಾಗಿದ್ದು, ಇದಕ್ಕಾಗಿ ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ನನ್ನನ್ನು ಆಯ್ಕೆ ಮಾಡಿಲ್ಲ' ಎಂದು ಅಲಿ ಬೇಸರ ವ್ಯಕ್ತಪಡಿಸಿದರು.ನಾನು ಇಂಗ್ಲೆಂಡ್‌ ತಂಡದ ಪರ ಸಾಕಷ್ಟು ಕ್ರಿಕೆಟ್‌ ಆಡಿದ್ದೇನೆ. ಈಗ ತಂಡದಲ್ಲಿ ಸಾಕಷ್ಟು ಯುವ ಆಟಗಾರರು ಗುರುತಿಸಿಕೊಂಡಿದ್ದಾರೆ.

ಅದನ್ನು ನನಗೆ ಆಯ್ಕೆ ಮಂಡಳಿಯು ನನ್ನೊಂದಿಗೆ ಚರ್ಚಿಸಿದೆ, 2014ರಲ್ಲಿ ನಾನು ಇಂಗ್ಲೆಂಡ್‌ ತಂಡದ ಪರ ಮೊದಲ ಪಂದ್ಯ ಆಡಿದ್ದು, ಈಗ ನನ್ನ ಸೇವೆಯನ್ನು ಮುಗಿಸುತ್ತಿದ್ದೇನೆ’ ಎಂದು ಮೊಯಿನ್‌ ಅಲಿ ಹೇಳಿದ್ದಾರೆ.

ಮೊಯಿನ್‌ಅಲಿ ಅವರು ಇಂಗ್ಲೆಂಡ್‌ ತಂಡದ ಪರ 68 ಟೆಸ್ಟ್‌ , 138 ಏಕದಿನ ಹಾಗೂ 92 ಟ್ವೆಂಟಿ-20 ಪಂದ್ಯಗಳನ್ನಾಡಿದ್ದು ಒಟ್ಟಾರೆ 6678 ರನ್‌ ಗಳಿಸಿದ್ದು, 8 ಶತಕ, 28 ಅರ್ಧಶತಕ ಹಾಗೂ 366 ವಿಕೆಟ್‌ ಪಡೆದಿದ್ದಾರೆ.

RELATED ARTICLES

Latest News