Friday, October 11, 2024
Homeಕ್ರೀಡಾ ಸುದ್ದಿ | Sportsಪ್ಯಾರಾಲಿಂಪಿಕ್ಸ್‌ನಲ್ಲಿ ದಾಖಲೆ ನಿರ್ಮಿಸಿದ ಭಾರತದ ಅಥ್ಲೀಟ್‌ಗಳು, ಪದಕಗಳ ಮಹಾಬೇಟೆ

ಪ್ಯಾರಾಲಿಂಪಿಕ್ಸ್‌ನಲ್ಲಿ ದಾಖಲೆ ನಿರ್ಮಿಸಿದ ಭಾರತದ ಅಥ್ಲೀಟ್‌ಗಳು, ಪದಕಗಳ ಮಹಾಬೇಟೆ

How many medals India won at Paralympics 2024

ಜಯಪ್ರಕಾಶ್
2024ರ ಒಲಿಂಪಿಕ್ಸ್ ಮುಕ್ತಾಯಗೊಂಡ ಬೆನ್ನಲ್ಲೇ ಆರಂಭಗೊಂಡ ಪ್ಯಾರಿಸ್‌‍ ಪ್ಯಾರಾಲಿಂಪಿಕ್ಸ್ ನ 17ನೇ ಆವೃತ್ತಿಯಲ್ಲಿ ಭಾರತದ ಅಥ್ಲೀಟ್ಗಳು ಈ ಬಾರಿ ಪದಕಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ಮಹಾ ಕ್ರೀಡಾಕೂಟಕ್ಕೆ ಅಂತಿಮ ತೆರೆ ಬೀಳುವ ಮುನ್ನ ದಿನವೂ ಕೂಡ ಭಾರತಕ್ಕೆ ಅಥ್ಲೀಟ್ಸ್ ಗಳು ಪದಕಗಳನ್ನು ಗೆದ್ದುಕೊಡುವ ಮೂಲಕ ದೇಶದ ಕೀರ್ತಿ ಪತಾಕೆ ಹೆಚ್ಚಿಸಿದ್ದಾರೆ. 3 ವರ್ಷಗಳ ಹಿಂದೆ ಜಪಾನ್‌ನಲ್ಲಿ ನಡೆದಿದ್ದ ಟೋಕಿಯೋ ಒಲಿಂಪಿಕ್‌್ಸನಲ್ಲಿ ಭಾರತ ಒಟ್ಟು 19 ಪದಕಗಳನ್ನು ಗೆದ್ದು ಇತಿಹಾಸ ನಿರ್ಮಿಸಿತ್ತು. ಆದರೆ ಈ ಬಾರಿಯ ಪ್ಯಾರಾಲಿಂಪಿಕ್‌್ಸನಲ್ಲಿ ಟ್ರ್ಯಾಕ್‌ ಮತ್ತು ಫೀಲ್ಡ್ ಅಥ್ಲೀಟಿಕ್ಸ್ ಗಳೇ ರೋಚಕ ಪ್ರದರ್ಶನ ತೋರುವ ಮೂಲಕ 17 ಪದಕಗಳನ್ನು ಗೆದ್ದು ಸಂಭ್ರಮಿಸಿದ್ದಾರೆ.

ಪ್ಯಾರಿಸ್‌‍ ಪ್ಯಾರಾಲಿಂಪಿಕ್‌್ಸನಲ್ಲಿ 25ಕ್ಕೂ ಹೆಚ್ಚು ಪದಕಗಳನ್ನು ಗೆಲ್ಲಬೇಕೆಂಬ ಹೆಬ್ಬಯಕೆಯೊಂದಿಗೆ 84 ಕ್ರೀಡಾಪಟುಗಳನ್ನು ಕಳುಹಿಸಿದ್ದರು. ನಿರೀಕ್ಷೆಯನ್ನು ಮೀರಿ ಪ್ರದರ್ಶನ ತೋರಿದ ಕ್ರೀಡಾಪಟುಗಳು ಹಾಗೂ ಅಥ್ಲೀಟ್‌ಗಳು ಭಾರತಕ್ಕೆ ಇದುವರೆಗೂ 29 ಪದಕಗಳನ್ನು ಗೆದ್ದುಕೊಟ್ಟಿದ್ದು ಅಂತಿಮ ದಿನ ಆರ್‌.ಪೂಜಾ ಅವರು ಪದಕದ ನಿರೀಕ್ಷೆ ಹುಟ್ಟಿಸಿದ್ದು, ಈ ಪದಕವು ಲಭಿಸಿದರೆ 30 ಪದಕಗಳೊಂದಿಗೆ ತನ್ನ ಅಭಿಯಾನವನ್ನು ಮುಗಿಸಲಿದೆ.

ಅಥ್ಲೇಟಿಕ್ಸ್ ನಲ್ಲೇ 17 ಪದಕ:
ಟೊಕಿಯೋ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತವು ಒಟ್ಟಾರೆ 19 ಪದಕ ಗೆದ್ದು ಸಂಭ್ರಮಿಸಿತ್ತು. ಅಥ್ಲೀಟಿಕ್ಸ್ ನಲ್ಲಿ 7 ಪದಕಗಳನ್ನು ದೇಶಕ್ಕೆ ಗೆದ್ದು ಕೊಟ್ಟಿದ್ದರು. ಆದರೆ ಈ ಬಾರಿ ಶೇ. 100ರಷ್ಟು ಶ್ರಮ ಹಾಕಿದ ಅಥ್ಲೀಟಿಕ್ಸ್ ಗಳು ಈ ವಿಭಾಗದಲ್ಲೇ 17 ಪದಕಗಳನ್ನು ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.

ಟ್ರಾಕ್‌ನಲ್ಲಿ ಮೊದಲ ಪ್ರಶಸ್ತಿ:
1984 ರಿಂದ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತ ಪ್ರತಿನಿಧಿಸುತ್ತಿದ್ದರೂ ಇದುವರೆಗೂ ಟ್ರ್ಯಾಕ್‌ ವಿಭಾಗದಲ್ಲಿ ಪದಕ ಗೆಲ್ಲುವಲ್ಲಿ ಎಡವಿತ್ತು. ಆದರೆ ಪ್ಯಾರಿಸ್‌‍ ಪ್ಯಾರಾಲಿಂಪಿಕ್‌್ಸನಲ್ಲಿ ಪ್ರೀತಿ ಪಾಲ್‌ 100 ಮೀಟರ್‌ ಟಿ35 ಹಾಗೂ 200 ಮೀಟರ್‌ ಟಿ 35ರಲ್ಲಿ ಎರಡು ಕಂಚಿನ ಪದಕಗಳನ್ನು ಗೆದ್ದು ಇತಿಹಾಸ ಸೃಷ್ಟಿಸಿದ್ದಾರೆ. ಪ್ರೀತಿ ಪಾಲ್‌ರಿಂದ ಸ್ಫೂರ್ತಿ ಪಡೆದ ದೀಪ್ತಿ ದೇವಾಂಜಿ ಹಾಗೂ ಸಿಮ್ರಾನ್‌ ಕ್ರಮವಾಗಿ 400 ಮೀಟರ್‌ ಟಿ20 ಹಾಗೂ 200 ಮೀಟರ್‌ ಟಿ12 ವಿಭಾಗದಲ್ಲಿ ಗೆಲುವು ಸಾಧಿಸಿ ಪದಕಗಳ ಸಂಖ್ಯೆ ಹೆಚ್ಚಿಸಿದರು.

ಜಾವೆಲಿಯನ್‌ನಲ್ಲಿ ಚಿನ್ನದ ಬೇಟೆ:
ಟೊಕಿಯೋ ಒಲಿಂಪಿಕ್ಸ್ ನಲ್ಲಿ ಚಿನ್ನದ ಹುಡುಗ ನೀರಜ್ ಚೋಪ್ರಾ ಅವರು ಚಿನ್ನದ ಪದಕ ಗೆದ್ದ ನಂತರ ಪ್ಯಾರಾಲಿಂಪಿಕ್ಸ್ ನಲ್ಲೂ ಸುಮಿತ್ ಅಂಟಿಲ್ ಅವರು ಸ್ವರ್ಣ ಪದಕ ಗೆದ್ದು ಸಂಭ್ರಮಿಸಿದ್ದರು. ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ನಲ್ಲೂ ಎಫ್64 ಈವೆಂಟ್ನಲ್ಲಿ ಸುಮಿತ್ ಅಂಟಿಲ್ ಅವರು ಮೊದಲ ಸ್ಥಾನ ಪಡೆದು ಸತತ ಎರಡನೇ ಬಾರಿ ಚಿನ್ನದ ಪದಕ ಗೆದ್ದು ಸಂಭ್ರಮಿಸಿದರೆ, ಪುರುಷರ ಎಫ್41 ವಿಭಾಗದಲ್ಲಿ ನವದೀಪ್ ಸಿಂಗ್ ಮತ್ತೊಂದು ಸ್ವರ್ಣ ಪದಕ ತಂದುಕೊಟ್ಟರು. ಅಲ್ಲದೆ ಇತ್ತೀಚೆಗೆ ಮುಕ್ತಾಯಗೊಂಡಿದ್ದ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ನೀರಜ್
ಚೋಪ್ರಾ ಬೆಳ್ಳಿ ಪದಕ ಗೆದ್ದು ಬೀಗಿದ್ದರು.

ಪ್ಯಾರಿಸ್‌‍ ಪ್ಯಾರಾಲಿಂಪಿಕ್ಸ್ ನ ಜಾವೆಲಿಯನ್‌ ವಿಭಾಗದಲ್ಲಿ ಅಂಟಿಲ್‌ ಹಾಗೂ ನವದೀಪ್‌ ಸ್ವರ್ಣ ಪದಕ ಗೆದ್ದುಕೊಟ್ಟ ಹುಮಸ್ಸಿನಲ್ಲೇ ಪುರುಷರ ಎಫ್‌51 ಕ್ಲಬ್‌ ಥ್ರೋನಲ್ಲಿ ಧರಂಬೀರ್‌ ಚಿನ್ನದ ಪದಕ ಗೆದ್ದು ಸಂಭ್ರಮಿಸಿದರು. ಈ ಪದಕದೊಂದಿಗೆ ಭಾರತ ಪದಕ ಪಟ್ಟಿಯಲ್ಲಿ ಉನ್ನತ ಸ್ಥಾನಕ್ಕೇರಲು ಸಹಕಾರಿಯಾಯಿತು.

ಹೈ ಜಂಪ್‌ನಲ್ಲೂ ಪದಕಗಳ ಸರಮಾಲೆ:
ಇನ್ನು ಹೈಜಂಪ್‌ ವಿಭಾಗದಲ್ಲೂ ಭಾರತದ ಅಥ್ಲೀಕ್ಸ್ ಗಳು ತಮಲ್ಲಿ ಆಡಗಿದ್ದ ಅಗಾಧ ಕೌಶಲ್ಯ ಹಾಗೂ ಅನುಭವದೊಂದಿಗೆ ಪದಕಗಳನ್ನು ಗೆದ್ದು ದೆಶದ ಕೀರ್ತಿ ಹೆಚ್ಚಿಸಿದರು. ಟಿ 64 ವಿಭಾಗದಲ್ಲಿ ಪ್ರವೀಣ್‌ಕುಮಾರ್‌ ಚಿನ್ನದ ಪದಕವನ್ನು ಕೊರಳಿಗೇರಿಸಿಕೊಂಡರೆ, ನಿಶಾದ್‌ ಕುಮಾರ್‌ (ಟಿ47) ಹಾಗೂ ಶರದ್‌ ಕುಮಾರ್‌ (ಟಿ 63) ಬೆಳ್ಳಿ ಹಾಗೂ ಟಿ 63 ವಿಭಾಗದಲ್ಲಿ ಮರಿಯಪ್ಪನ್‌ ತಂಗವೇಲನ್‌ ಕಂಚಿನ ಪದಕವನ್ನು ದೇಶಕ್ಕೆ ತಂದುಕೊಟ್ಟರು. ಟೊಕಿಯೊ ಒಲಿಂಪಿಕ್ಸ್ ನಲ್ಲಿ ನಿಶಾದ್‌ಕುಮಾರ್‌ ಬೆಳ್ಳಿ ಹಾಗೂ ಮರಿಯಪ್ಪನ್‌ ತಂಗವೇಲನ್‌ ಕಂಚಿನ ಪದಕ ಗೆದ್ದು ಬೀಗಿದ್ದರು.

ಕ್ರೀಡಾಪಟುಗಳಿಗೆ ಸ್ಫೂರ್ತಿ
1960ರಿಂದ ಆರಂಭಗೊಂಡ ಪ್ಯಾರಾಲಿಂಪಿಕ್ಸ್ ನ ಮೂಲಕ ವಿಶೇಷಚೇತನರು ತಮಲ್ಲಿ ಅಡಗಿರುವ ಕೌಶಲ್ಯವನ್ನು ಪ್ರದರ್ಶಿಸಲು ಉತ್ತಮ ವೇದಿಕೆಯಾಗಿದೆ. 1984ರಲ್ಲಿ ಭಾರತ ದೇಶವು ಕೂಡ ತಮ ಕ್ರೀಡಾಪಟುಗಳನ್ನು ಈ ಕ್ರೀಡಾ ಜಾತ್ರೆಯಲ್ಲಿ ಪಾಲ್ಗೊಳ್ಳಲು ಅನುವು ಮಾಡಿಕೊಟ್ಟಿತ್ತು. ಅಂದಿನಿಂದಲೂ ಭಾರತವು ನಿಯಮಿತವಾಗಿ ಪದಕಗಳನ್ನು ಗೆಲ್ಲುತ್ತಾ ಬಂದಿದೆ.

ಆದರೆ 2024ರ ಪ್ಯಾರಿಸ್‌‍ ಪ್ಯಾರಾಲಿಂಪಿಕ್ಸ್ ನಲ್ಲಿ ದೇಶದ ಕೀರ್ತಿಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದ್ದಾರೆ. ಪ್ಯಾರಿಸ್‌‍ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತದ ಕ್ರೀಡಾಪಟುಗಳು ತೋರಿರುವ ಧೈರ್ಯ ಹಾಗೂ ಉಕ್ಕಿನಂತಹ ಸಂಕಲ್ಪವು ದೇಶದ ಲಕ್ಷಾಂತರ ಕ್ರೀಡಾಪಟುಗಳಿಗೆ ಸ್ಫೂರ್ತಿಯಾಗಿದ್ದು ಮುಂದಿನ ಒಲಿಂಪಿಕ್ಸ್ ನಲ್ಲಿ ಪದಕಗಳ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಲು ಬುನಾದಿ ಹಾಕಿಕೊಟ್ಟಿದ್ದಾರೆ.

ಒಲಿಂಪಿಕ್ಸ್, ಪ್ಯಾರಾಲಿಂಪಿಕ್ಸ್ ನತ್ತ ಯುವ ಜನತೆ ಚಿತ್ತ?
ಭಾರತ ದೇಶದಲ್ಲಿ ಕ್ರೀಡೆ ಅಂದರೆ ಮೊದಲಿಗೆ ಕ್ರಿಕೆಟ್‌ ಹಾಗೂ ಫುಟ್ಬಾಲ್‌ ಕಡೆ ಯುವ ಜನತೆ ಹೆಚ್ಚು ಆಕರ್ಷಿತರಾಗುತ್ತಾರೆ. ಆದರೆ ಈ ಬಾರಿಯ ಒಲಿಂಪಿಕ್‌್ಸ ಹಾಗೂ ಪ್ಯಾರಾಲಿಂಪಿಕ್‌್ಸನಲ್ಲಿ ಭಾರತದ ಅಥ್ಲೀಟ್ಸ್ ಗಳು ಹಾಗೂ ಕ್ರೀಡಾಪಟುಗಳು ತೋರಿರುವ ಸಾಧನೆಯಿಂದ ಇನ್ನು ಮುಂದೆ ಇತರ ಕ್ರೀಡೆಗಳತ್ತಲೂ ಯುವ ಜನತೆ ಆಕರ್ಷಿತವಾಗುವ ಸಾಧ್ಯತೆಗಳು ಹೆಚ್ಚಿವೆ.

2024ರ ಪ್ಯಾರಿಸ್‌‍ ಒಲಿಂಪಿಕ್ಸ್ ನಲ್ಲಿ ಹೆಚ್ಚು ಪದಕಗಳನ್ನು ಗೆಲ್ಲಬೇಕೆಂಬ ಹೆಗ್ಗುರಿಯನ್ನು ಇಟ್ಟುಕೊಂಡೇ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 2023-24 ಬಜೆಟ್‌ನಲ್ಲಿ 3397.32 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಿತ್ತು. ಅಲ್ಲದೆ ಖೇಲೋ ಇಂಡಿಯಾ ಮೂಲಕವು ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಿದರ ಪರಿಣಾಮ ಪ್ರಸಕ್ತ ಪ್ಯಾರಿಸ್‌‍ ಪ್ಯಾರಾಲಿಂಪ್ಕಿಕ್‌್ಸನಲ್ಲಿ ಭಾರತ 29ಕ್ಕೂ ಹೆಚ್ಚು ಪದಕ ಗೆಲ್ಲಲು ಸಹಕಾರಿಯಾಗಿದೆ.

RELATED ARTICLES

Latest News