Friday, November 22, 2024
Homeರಾಷ್ಟ್ರೀಯ | National20 ವರ್ಷಗಳ ನಂತರ ಸಿಕ್ಕಿಬಿದ್ದ ಚಾಣಾಕ್ಷ ಕೊಲೆಗಾರ..!

20 ವರ್ಷಗಳ ನಂತರ ಸಿಕ್ಕಿಬಿದ್ದ ಚಾಣಾಕ್ಷ ಕೊಲೆಗಾರ..!

ದೆಹಲಿ,ಅ.18-ಇಪ್ಪತ್ತು ವರ್ಷಗಳ ಹಿಂದೆ ವ್ಯಕ್ತಿಯೊಬ್ಬರ ಹತ್ಯೆ ಮಾಡಿ, ಇತರ ಇಬ್ಬರಿಗೆ ಬೆಂಕಿ ಹಚ್ಚಿದ ಆರೋಪ ನಂತರ ನಾಪತ್ತೆಯಾಗಿದ್ದ ನೌಕಾ ಪಡೆಯ ಮಾಜಿ ನೌಕರನನ್ನು ಬಂಧಿಸುವಲ್ಲಿ ದೆಹಲಿ ಅಪರಾಧ ವಿಭಾಗದ ಹಿರಿಯ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯನ್ನು 60 ವರ್ಷದ ಬಾಲೇಶ್ ಕುಮಾರ್ ಎಂದು ಗುರುತಿಸಲಾಗಿದೆ. ಆರೋಪಿ ಕಳೆದ 20 ವರ್ಷಗಳಿಂದ ಈತ ತನ್ನ ಹೆಸರನ್ನು ಅಮಾನ್‍ಸಿಂಗ್ ಎಂದು ಬದಲಾಯಿಸಿಕೊಂಡು ಜೀವನ ಸಾಗಿಸುತ್ತಿದ್ದ ಎಂದು ಹಿರಿಯ ಪೊಲೀಸ್ ಅಧಿಕಾರಿ ರವೀಂದರ್ ಯಾದವ್ ತಿಳಿಸಿದ್ದಾರೆ.

ದೆಹಲಿಯ ಬವಾನಾ ಪ್ರದೇಶದಲ್ಲಿ 2004 ರಲ್ಲಿ ನಡೆದ ಕೊಲೆಗೆ ಬೇಕಾಗಿದ್ದ ವ್ಯಕ್ತಿ ಸುಮಾರು 30 ಕಿಮೀ ದೂರದಲ್ಲಿರುವ ನಜಾಫಗಢದಲ್ಲಿ ವಾಸಿಸುತ್ತಿದ್ದಾನೆ ಎಂಬ ಮಾಹಿತಿ ದೆಹಲಿ ಪೊಲೀಸರಿಗೆ ಬಂದ ನಂತರ ಈಗ 60 ವರ್ಷದ ಬಾಲೇಶ್ ಕುಮಾರ್ ಅವರನ್ನು ಬಂಧಿಸಲಾಗಿದೆ. ಅವರ ಅನುಮಾನಗಳನ್ನು ದೃಢಪಡಿಸಿದ ತನಿಖೆಯ ನಂತರ ಪೊಲೀಸರು ಕುಮಾರ್ ಅವರನ್ನು ಬಂಧಿಸಿದಾಗ, 20 ವರ್ಷಗಳ ಹಿಂದಿನ ಕೊಲೆ ರಹಸ್ಯ ಬಯಲಾಗಿದೆ.

ಪಾಕ್‍ನಿಂದ ಕದನ ವಿರಾಮ ಉಲ್ಲಂಘನೆ, ಇಬ್ಬರು BSF ಯೋಧರಿಗೆ ಗಾಯ

ಮೂಲತಃ ಹರಿಯಾಣದವರಾದ ಕುಮಾರ್ ಅವರು 8 ನೇ ತರಗತಿಯವರೆಗೆ ಓದಿದ್ದರು. ಅವರು 1981 ರಲ್ಲಿ ನೌಕಾಪಡೆಗೆ ಸೇರಿ 1996 ರಲ್ಲಿ ನಿವೃತ್ತರಾದರು. ನಂತರ ಅವರು ಸಾರಿಗೆ ಉದ್ಯಮವನ್ನು ಪ್ರಾರಂಭಿಸಿದರು ಮತ್ತು ತಮ್ಮ ಕುಟುಂಬದೊಂದಿಗೆ ದೆಹಲಿಯ ಉತ್ತಮ್ ನಗರದಲ್ಲಿ ವಾಸಿಸುತ್ತಿದ್ದರು.

2004 ರಲ್ಲಿ ದೆಹಲಿಯ ಸಮಯಪುರ ಬದ್ಲಿಯಲ್ಲಿ ರಾಜೇಶ್ ಎಂಬ ವ್ಯಕ್ತಿಯನ್ನು ತಾನು ಮತ್ತು ತನ್ನ ಸಹೋದರ ಸುಂದರ್ ಲಾಲ್ ಉಸಿರುಗಟ್ಟಿಸಿ ಕೊಲೆ ಮಾಡಿದ್ದೇವು ಎಂದು ಕುಮಾರ್ ಪೊಲೀಸರಿಗೆ ತಿಳಿಸಿದ್ದಾರೆ. ಕುಮಾರ್ ಮತ್ತು ರಾಜೇಶ್ ಅವರ ಪತ್ನಿಯ ನಡುವೆ ವಿವಾಹೇತರ ಸಂಬಂಧದ ಬಗ್ಗೆ ಜಗಳ ನಡೆದಾಗ ಮೂವರು ಮದ್ಯಪಾನ ಮಾಡುತ್ತಿದ್ದರು. ಈ ವೇಳೆ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿದ್ದು, ಮದ್ಯದ ಅಮಲಿನಲ್ಲಿದ್ದ ಕುಮಾರ್ ಹಾಗೂ ಆತನ ಸಹೋದರ ರಾಜೇಶ್‍ನನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದರು.

ನಂತರ ಕುಮಾರ್ ಎಸ್ಕೇಪ್ ಪ್ಲಾನ್ ಮಾಡಿದರು. ಅವರು ಬಿಹಾರದ ಇಬ್ಬರು ಕಾರ್ಮಿಕರನ್ನು ನೇಮಿಸಿಕೊಂಡರು, ದೆಹಲಿಯ ಸಮಯಪುರ ಬದ್ಲಿಯಿಂದ ಮನೋಜ್ ಮತ್ತು ಮುಖೇಶ್ ಎಂಬುವರಿಗೆ ಕೆಲಸ ಮಾಡುವ ಭರವಸೆ ನೀಡಿದರು. ನಂತರ ಮೂವರು ಕುಮಾರ್ ಸಹೋದರನ ಟ್ರಕ್‍ನಲ್ಲಿ ರಾಜಸ್ಥಾನಕ್ಕೆ ತೆರಳಿದರು. ಜೋಧ್‍ಪುರದಲ್ಲಿ, ಕುಮಾರ್ ಟ್ರಕ್‍ಗೆ ಬೆಂಕಿ ಹಚ್ಚಿದರು, ಒಳಗಿದ್ದ ಕಾರ್ಮಿಕರೊಂದಿಗೆ. ನಂತರ ಅವರು ತಮ್ಮ ದಾಖಲೆಗಳನ್ನು ಒಳಗೆ ಬಿಟ್ಟರು. ಪೊಲೀಸರು ಸ್ಥಳಕ್ಕಾಗಮಿಸಿದಾಗ ಅದರಲ್ಲಿ ಒಂದು ಶವ ಕುಮಾರ್ ಅವರದ್ದು ಎಂದು ಗುರುತಿಸಲಾಗಿದೆ. ಇನ್ನೊಂದು ಮೃತದೇಹದ ಗುರುತು ಪತ್ತೆಯಾಗಿರಲಿಲ್ಲ.

ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ : ಇಬ್ಬರು ಪೊಲೀಸರ ಬಂಧನ

ರಾಜೇಶ್ ಹತ್ಯೆ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದಾಗ ಸುಂದರ್ ಲಾಲ್ ಎಂಬಾತನನ್ನು ಬಂ„ಸಲಾಗಿದ್ದು, ಟ್ರಕ್ ಬೆಂಕಿಯಲ್ಲಿ ಕುಮಾರ್ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದರು. ಕುಮಾರ್ ಅವರ ಪತ್ನಿ ಪಿಂಚಣಿ ಪ್ರಯೋಜನಗಳು ಮತ್ತು ಜೀವ ವಿಮಾ ಮೊತ್ತವನ್ನು ಪಡೆದರು. ಟ್ರಕ್‍ನ ವಿಮೆಯನ್ನು ಸಹ ಅವರ ಪತ್ನಿಗೆ ಕಳುಹಿಸಲಾಗಿದೆ. ಅದೃಷ್ಟ ಮುಗಿಯುವವರೆಗೂ ಅವನ ಹಿಂದಿನ ಗುರುತು ಮತ್ತು ಅಪರಾಧಗಳು ಬಯಲಿಗೆ ಬಂದಿರಲಿಲ್ಲ.

RELATED ARTICLES

Latest News