Wednesday, February 28, 2024
Homeಅಂತಾರಾಷ್ಟ್ರೀಯಇಸ್ಲಾಮಿಕ್ ಉಗ್ರರ ರಾಕೆಟ್ ಮಿಸ್‍ಫೈರ್, ಗಾಜಾದಲ್ಲಿ 500ಕ್ಕೂ ಹೆಚ್ಚು ಮಂದಿ ಸಾವು

ಇಸ್ಲಾಮಿಕ್ ಉಗ್ರರ ರಾಕೆಟ್ ಮಿಸ್‍ಫೈರ್, ಗಾಜಾದಲ್ಲಿ 500ಕ್ಕೂ ಹೆಚ್ಚು ಮಂದಿ ಸಾವು

ಜೆರುಸಲೇಂ,ಅ.18- ಗಾಜಾ ನಗರದಲ್ಲಿರುವ ಆಸ್ಪತ್ರೆಯೊಂದರ ಮೇಲೆ ಗಾಜಾ ಭಯೋತ್ಪಾದಕರು ಹಾರಿಸಿದ ರಾಕೆಟ್ ಮಿಸ್‍ಫೈರ್ ಆದ ಪರಿಣಾಮ 500 ಮಂದಿ ಸ್ಥಳೀಯರು ಸಾವನ್ನಪ್ಪಿದ್ದಾರೆ. ಈ ಘಟನೆಯ ಹಿಂದೆ ಇಸ್ರೇಲ್ ಕೈವಾಡವಿದೆ ಎಂದು ಮೊದಲು ಶಂಕಿಸಲಾಗಿತ್ತು. ಆದರೆ ಇದೀಗ ಗಾಜಾ ಪಟ್ಟಣದಲ್ಲಿರುವ ಅಲ್-ಅಹಿಲ್ ಬ್ಯಾಪಿಸ್ಟ್ ಆಸ್ಪತ್ರೆಯಲ್ಲಿ 500 ಮಂದಿ ಸಾವಿಗೆ ಅಲ್ಲಿನ ಭಯೋತ್ಪಾದಕರೇ ಕಾರಣ ಎಂಬುದು ದೃಢಪಟ್ಟಿದೆ.

ಗಾಜಾ ಉಗ್ರರು ಇಸ್ರೇಲಿ ಸೈನಿಕರನ್ನು ಗುರಿಯಾಗಿಟ್ಟುಕೊಂಡು ರಾಕೆಟ್ ಉಡಾವಣೆ ಮಾಡಲು ಮುಂದಾಗಿದ್ದರು. ಆದರೆ ದುರಾದೃಷ್ಟವಶಾತ್ ರಾಕೆಟ್ ಇಸ್ರೇಲ್ ಸೇನಾ ಪಡೆ ಬಳಿ ಸ್ಪೋಟಗೊಳ್ಳುವ ಬದಲು ಗಾಜಾದಲ್ಲಿರುವ ಆಸ್ಪತ್ರೆ ಬಳಿ ಸ್ಪೋಟಗೊಂಡಿದ್ದರಿಂದ ಈ ದುರಂತ ಸಂಭವಿಸಿದೆ ಎಂದು ಇಸ್ರೇಲ್ ಸೇನಾ ಪಡೆ ಸ್ಪಷ್ಟಪಡಿಸಿದೆ. ಮೂಲಗಳ ಪ್ರಕಾರ ಗಾಜಾ ಉಗ್ರರಿಗೆ ರಾಕೆಟ್ ಉಡಾವಣೆ ಮಾಡುವ ಬಗ್ಗೆ ಯಾವುದೇ ತರಬೇತಿ ಇರಲಿಲ್ಲ. ಉಗ್ರರು ನೀರಿನ ಪೈಪ್‍ನಲ್ಲಿ ಸಂಗ್ರಹಿಸಿಟ್ಟುಕೊಂಡಿದ್ದರು.

ವೈಮಾನಿಕ ದಾಳಿಯ ತೀವ್ರತೆಗೆ ಅಲ್ ಅಹ್ಲಿ ಆಸ್ಪತ್ರೆಯ ಕಟ್ಟಡ ನಾಶಗೊಂಡಿದ್ದು, ಮೃತದೇಹಗಳು ಚೆಲ್ಲಾಪಿಲ್ಲಿಯಾಗಿವೆ. ಗಾಜಾದಲ್ಲಿ ಹಲವು ಕಟ್ಟಡಗಳು ಕುಸಿದು ಬಿದ್ದಿದ್ದು, ಇವುಗಳ ಅಡಿಯಲ್ಲಿ 1200ಕ್ಕೂ ಹೆಚ್ಚು ಮಂದಿ ಸಿಲುಕಿಕೊಂಡಿರಬಹುದು ಎಂದು ಸೇನೆ ತಿಳಿಸಿದೆ.

ಪಾಕ್‍ನಿಂದ ಕದನ ವಿರಾಮ ಉಲ್ಲಂಘನೆ, ಇಬ್ಬರು BSF ಯೋಧರಿಗೆ ಗಾಯ

ಈ ದಾಳಿಯ ಸಮಯದಲ್ಲಿ ಆಸ್ಪತ್ರೆಯ ಪಕ್ಕದಲ್ಲಿ ನಿರ್ಮಾಣ ಮಾಡಲಾಗಿದ್ದ ವಿಶ್ವಸಂಸ್ಥೆ ನಿರಾಶ್ರೀತರ ಕೇಂದ್ರಕ್ಕೂ ಹಾನಿಯಾಗಿದೆ. 500ಕ್ಕೂ ಅಕ ಮಂದು ಸಾವನ್ನಪ್ಪಿದ್ದಾರೆ. ರಕ್ಷಣಾ ಕಾರ್ಯಕರ್ತರು ಇನ್ನೂ ಅವಶೇಷಗಳಿಂದ ದೇಹಗಳನ್ನು ತೆಗೆಯುತ್ತಿದ್ದಾರೆ.

ಇಸ್ರೇಲ್‍ನ 11 ದಿನಗಳ ಬಾಂಬ್ ದಾಳಿಯಲ್ಲಿ ಕನಿಷ್ಠ 3,000 ಜನರು ಸಾವನ್ನಪ್ಪಿದ್ದಾರೆ. ಇದು ಇಸ್ರೇಲ್-ಹಮಾಸ್ ಸಂಘರ್ಷ ಆರಂಭವಾದ ಬಳಿಕ ಒಂದೇ ಸ್ಥಳದಲ್ಲಿ ದಾಖಲಾದ ಹೆಚ್ಚಿನ ಸಾವಿನ ಪ್ರಮಾಣವಾಗಿದೆ. ಇನ್ನು ಪ್ಯಾಲೇಸ್ತೀನ್ ಸರ್ಕಾರ 3 ದಿನಗಳ ಮೌನಾಚರಣೆ ಘೋಷಣೆ ಮಾಡಿದೆ. ಈ ನಡುವೆ ಇಸ್ರೇಲ್ ಸತತ ದಾಳಿಯಿಂದಾಗಿ ಗಾಜಾ ಸಂಪೂರ್ಣವಾಗಿ ವಿನಾಶದ ಅಂಚಿಗೆ ತಲುಪಿದೆ. ಲಕ್ಷಾಂತರ ಜನ ನಿರಾಶ್ರಿತರಾಗಿದ್ದಾರೆ. ಆಸ್ಪತ್ರೆಗಳಲ್ಲಿ ನೀರು, ಆಹಾರ ಹಾಗೂ ವಿದ್ಯುತ್ ಕೊರತೆ ಎದುರಾಗಿದೆ.

ಆಸ್ಪತ್ರೆಯ ಮೇಲೆ ರಾಕೆಟ್ ಬೀಳುತ್ತಿರುವ ವಿಡಿಯೋವನ್ನು ಇಸ್ರೇಲಿ ಸೇನೆ ಬಿಡುಗಡೆ ಮಾಡಿದ್ದು, ಹಮಾಸ್ ದಾಳಿ ನಡೆಸುತ್ತಿದ್ದಾಗ ಆಸ್ಪತ್ರೆಯ ಮೇಲೆ ರಾಕೆಟ್ ಬಿದ್ದಿದೆ ಎಂದು ಸೇನೆ ಹೇಳಿಕೊಂಡಿದೆ. ಗಾಜಾದಲ್ಲಿ ಬಾಂಬ್ ದಾಳಿ ನಿಲ್ಲಿಸಿದರೆ ಎಲ್ಲಾ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವುದಾಗಿ ಹಮಾಸ್ ಹೇಳಿದೆ. ಅ.7ರಂದು ಹಮಾಸ್ ಮೊದಲ ಬಾರಿಗೆ ಇಸ್ರೇಲ್ ಮೇಲೆ 5 ಸಾವಿರಕ್ಕೂ ಹೆಚ್ಚು ರಾಕೆಟ್‍ಗಳಿಂದ ದಾಳಿ ನಡೆಸಿತ್ತು.

ಛತ್ತೀಸ್‍ಗಢದಲ್ಲಿ 5.5 ಕೋಟಿ ಮೌಲ್ಯದ ನಗದು ಮತ್ತು ಇತರ ವಸ್ತುಗಳ ವಶ

ಅಷ್ಟೇ ಅಲ್ಲದೆ ಕಂಡ ಕಂಡಲ್ಲಿ ಜನರನ್ನು ಗುಂಡು ಹಾರಿಸಿ ಹತ್ಯೆ ಮಾಡಲಾಗಿತ್ತು. ಅದಕ್ಕೆ ಪ್ರತಿಯಾಗಿ ಇಸ್ರೇಲ್ ಗಾಜಾ ಮೇಲೆ ಬಾಂಬ್ ದಾಳಿ ನಡೆಸಿದೆ. ಒಟ್ಟಾರೆ ಘಟನೆಯಲ್ಲಿ ಇದುವರೆಗೆ 4 ಸಾವಿರಕ್ಕೂ ಅಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಗಾಜಾ ಮೇಲೆ ನಾವು ಬಾಂಬ್ ದಾಳಿ ನಡೆಸುತ್ತೇವೆ ನಾಗರಿಕರೆಲ್ಲರೂ ಗಾಜಾದ ದಕ್ಷಿಣ ಭಾಗಕ್ಕೆ ಹೋಗಿ ಎಂದು ಇಸ್ರೇಲ್ ಹೇಳಿತ್ತು ಹೀಗಾಗಿ 10 ಲಕ್ಷಕ್ಕೂ ಹೆಚ್ಚು ಮಂದಿ ಗಾಜಾ ತೊರೆದಿದ್ದರು. ಇಸ್ರೇಲ್ ಗಾಜಾದ ಮೇಲೆ ದಾಳಿ ಮಾಡುವುದನ್ನು ನಿಲ್ಲಿಸಿದರೆ ಒತ್ತೆಯಾಳುಗಳನ್ನು ತಕ್ಷಣವೇ ಬಿಡುಗಡೆ ಮಾಡಲು ಸಿದ್ಧವಾಗಿದೆ ಎಂದು ಹಿರಿಯ ಹಮಾಸ್ ಅಕಾರಿಯೊಬ್ಬರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ಘಟನೆಯನ್ನು ಜೋರ್ಡಾನ್, ಟರ್ಕಿ, ಈಜಿಪ್ಟ್, ಸೌದಿ ಅರೇಬಿಯಾ ಸೇರಿದಂತೆ ಅನೇಕ ರಾಷ್ಟ್ರಗಳು ತೀವ್ರವಾಗಿ ಖಂಡಿಸಿವೆ.

RELATED ARTICLES

Latest News