Thursday, May 2, 2024
Homeರಾಷ್ಟ್ರೀಯಸರ್ಕಾರಿ ಬಂಗಲೆ ಖಾಲಿ ಮಾಡಿದ ಮಹುವಾ ಮೊಯಿತ್ರಾ

ಸರ್ಕಾರಿ ಬಂಗಲೆ ಖಾಲಿ ಮಾಡಿದ ಮಹುವಾ ಮೊಯಿತ್ರಾ

ನವದೆಹಲಿ,ಜ.19- ಲೋಕಸಭೆಯಿಂದ ಉಚ್ಛಾಟನೆಗೊಂಡಿದ್ದ ತೃಣಮೂಲ ಕಾಂಗ್ರೆಸ್ ಪಕ್ಷದ ಮಾಜಿ ಸದಸ್ಯೆ ಮಹುವಾ ಮೊಯಿತ್ರಾ ಕೊನೆಗೂ ತಮ್ಮ ಸರ್ಕಾರಿ ಬಂಗಲೆಯನ್ನು ಇಂದು ಖಾಲಿ ಮಾಡಿದ್ದಾರೆ. ತಮಗೆ ಬಂಗಲೆ ತೆರವುಗೊಳಿಸುವಂತೆ ನೀಡಿದ ನೋಟಿಸ್‍ಗೆ ದೆಹಲಿ ಹೈಕೋರ್ಟ್ ನಿನ್ನೆ ತಡೆಯಾಜ್ಞೆ ನೀಡಲು ನಿರಾಕರಿಸಿತ್ತು. ಇದರ ಬೆನ್ನಲ್ಲೇ ಅವರು ಮನೆಯನ್ನು ಖಾಲಿ ಮಾಡಿದ್ದಾರೆ.

ಕಳೆದ ವರ್ಷ ಡಿಸೆಂಬರ್‍ನಲ್ಲಿ ಲೋಕಸಭಾ ಸಂಸದರಾಗಿ ಉಚ್ಛಾಟಿತರಾಗಿದ್ದ ಮೊಯಿತ್ರಾ. ಮಂಗಳವಾರ ಎಸ್ಟೇಟ್‍ಗಳ ನಿರ್ದೇಶನಾಲಯದಿಂದ (ಡಿಒಇ) ಹೊರಹಾಕುವ ಸೂಚನೆಯನ್ನು ಸ್ವೀಕರಿಸಿದ್ದರು.ಅವರು ಇಂದು ಬೆಳಿಗ್ಗೆ 10 ಗಂಟೆಗೆ ಸಂಪೂರ್ಣವಾಗಿ ಬಂಗಲೆಯನ್ನು ಖಾಲಿ ಮಾಡಿ, ಅದರ ಸ್ವಾೀಧಿನವನ್ನು ಅವರ ವಕೀಲರು ಎಸ್ಟೇಟ್ ನಿರ್ದೇಶನಾಲಯಕ್ಕೆ ಹಸ್ತಾಂತರಿಸಿದರು.

ನ್ಯಾಯಮೂರ್ತಿ ಗಿರೀಶ್ ಕಠ್ಪಾಲಿಯಾ ಅವರು, ಸಂಸದರು ಶಾಸಕ ಸ್ಥಾನ ರದ್ದಾದ ನಂತರ ಅವರನ್ನು ಸರ್ಕಾರಿ ವಸತಿಗಳಿಂದ ಹೊರಹಾಕುವ ಬಗ್ಗೆ ಯಾವುದೇ ನಿರ್ದಿಷ್ಟ ನಿಯಮವನ್ನು ನ್ಯಾಯಾಲಯದ ಮುಂದೆ ತರಲಾಗಿಲ್ಲ ಎಂದು ಹೇಳಿದರು. ಉದ್ಯಮಿ ದರ್ಶನ್ ಹಿರಾನಂದನಿ ಅವರಿಂದ ಉಡುಗೊರೆಗಳನ್ನು ಸ್ವೀಕರಿಸಿದ ಆರೋಪದಲ್ಲಿ ಮತ್ತು ಸಂಸತ್ತಿನ ವೆಬ್‍ಸೈಟ್‍ನ ಬಳಕೆದಾರರ ಐಡಿ ಮತ್ತು ಪಾಸ್‍ವರ್ಡ್‍ನ್ನು ಅವರೊಂದಿಗೆ ಹಂಚಿಕೊಂಡಿದ್ದಕ್ಕಾಗಿ ನೈತಿಕ ಸಮಿತಿಯು ಅನೈತಿಕ ನಡವಳಿಕೆ ಯನ್ನು ತಪ್ಪಿತಸ್ಥರೆಂದು ಪರಿಗಣಿಸಿದ ನಂತರ ಮೊಯಿತ್ರಾ ಅವರನ್ನು ಲೋಕಸಭೆಯಿಂದ ಹೊರಹಾಕಲಾಯಿತು.

ಮೋದಿ ಮತ್ತೆ ಪ್ರಧಾನಿಯಾಗುತ್ತಾರೆ ; ಭವಿಷ್ಯ ನುಡಿದ ಅಮೆರಿಕನ್ ಗಾಯಕಿ

ಉಡುಗೊರೆಗಳ ಬದಲಾಗಿ ಉದ್ಯಮಿ ದರ್ಶನ್ ಹಿರಾನಂದಾನಿ ಅವರ ಆದೇಶದ ಮೇರೆಗೆ ಅದಾನಿ ಗ್ರೂಪ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಲು ಮೊಯಿತ್ರಾ ಲೋಕಸಭೆಯಲ್ಲಿ ಹಣಕ್ಕಾಗಿ ಪ್ರಶ್ನೆಗಳನ್ನು ಕೇಳಿದ್ದಾರೆ ಎಂದು ಆರೋಪಿಸಿ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಸಲ್ಲಿಸಿದ ದೂರಿನ ಆಧಾರದ ಮೇಲೆ ಸಮಿತಿಯು ತನಿಖೆಯನ್ನು ಪ್ರಾರಂಭಿಸಿದೆ.

ಸರ್ಕಾರಿ ಬಂಗಲೆಯನ್ನು ತೆರವು ಮಾಡುವಂತೆ ತನಗೆ ಕಳುಹಿಸಿದ್ದ ನೋಟಿಸ್‍ನ್ನು ಪ್ರಶ್ನಿಸಿ ತೃಣಮೂಲ ಕಾಂಗ್ರೆಸ್‍ನ ಮಾಜಿ ಸಂಸದೆ ಮಹುವಾ ಮೊಯಿತ್ರಾ ಸಲ್ಲಿಸಿದ್ದ ಮನವಿಯನ್ನು ದೆಹಲಿ ಹೈಕೋರ್ಟ್ ತಿರಸ್ಕರಿಸಿದೆ. ನಿನ್ನೆ ಹೊರಡಿಸಿದ ತನ್ನ ಆದೇಶದಲ್ಲಿ, ಮೊಯಿತ್ರಾ ಅವರು ಸಂಸದೆಯವರು ಉಚ್ಛಾಟನೆಯಾಗಿರುವುದರಿಂದ ಬಂಗಲೆಯಲ್ಲಿ ವಾಸಿಸುವ ಹಕ್ಕು ಇಲ್ಲ ಎಂದು ಹೈಕೋರ್ಟ್ ಹೇಳಿದೆ.

ಲೋಕಸಭೆಯಲ್ಲಿ ಪ್ರಶ್ನೆಗಳನ್ನು ಕೇಳಲು ಉದ್ಯಮಿ ದರ್ಶನ್ ಹಿರಾನಂದನಿ ಅವರಿಂದ ಉಡುಗೊರೆಗಳನ್ನು ಸ್ವೀಕರಿಸಿದ ಆರೋಪದ ಮೇಲೆ ಡಿಸೆಂಬರ್ 8ರಂದು ಮೊಯಿತ್ರಾ ಅವರನ್ನು ಉಚ್ಛಾಟಿಸಿದ ಬಳಿಕ ಜ.7ರೊಳಗೆ ಬಂಗಲೆ ಖಾಲಿ ಮಾಡುವಂತೆ ಸೂಚನೆ ನೀಡಲಾಗಿತ್ತು. ನಂತರ ಡಿಒಇ ಆದೇಶವನ್ನು ಅವರು ಪ್ರಶ್ನಿಸಿ ದೆಹಲಿ ಹೈಕೋರ್ಟ್‍ನ ಮೊರೆಹೋಗಿದ್ದರು. ಆದಾಗ್ಯೂ ಜ.4ರಂದು ನ್ಯಾಯಾಲಯವು ಮಹುವಾ ಮೊಯಿತ್ರಾ ಅವರಿಗೆ ಸರ್ಕಾರವು ಮಂಜೂರು ಮಾಡಿದ ವಸತಿಗೃಹದಲ್ಲಿ ಉಳಿಯಲು ಅನುಮತಿಗಾಗಿ ಡಿಒಇಯನ್ನು ಸಂಪರ್ಕಿಸಲು ಹೇಳಿತ್ತು. ತಕ್ಷಣ ಬಂಗಲೆಯನ್ನು ಖಾಲಿ ಮಾಡುವಂತೆ ಡಿಒಇ ಸೂಚಿಸಿದ್ದರು. ಇದನ್ನು ಪ್ರಶ್ನಿಸಿ ಮೊಯಿತ್ರಾ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದರು. ಆದಾಗ್ಯೂ ನ್ಯಾಯಾಲಯವು ಆಕೆಯ ಮನವಿಯನ್ನು ತಿರಸ್ಕರಿಸಿದೆ.

RELATED ARTICLES

Latest News