Home ಇದೀಗ ಬಂದ ಸುದ್ದಿ ನಾಸಾ ಸಂಪರ್ಕಕ್ಕೆ ಸಿಕ್ಕ ಚಂದ್ರಯಾನ-3ರ ಪ್ರಗ್ಯಾನ್ ರೋವರ್

ನಾಸಾ ಸಂಪರ್ಕಕ್ಕೆ ಸಿಕ್ಕ ಚಂದ್ರಯಾನ-3ರ ಪ್ರಗ್ಯಾನ್ ರೋವರ್

0
ನಾಸಾ ಸಂಪರ್ಕಕ್ಕೆ ಸಿಕ್ಕ ಚಂದ್ರಯಾನ-3ರ ಪ್ರಗ್ಯಾನ್ ರೋವರ್

ನವದೆಹಲಿ,ಜ.19-ಚಂದ್ರಯಾನ-3ರ ವಿಕ್ರಮ್ ಲ್ಯಾಂಡರ್‌ನಲ್ಲಿ ರವಾನೆಯಾಗಿದ್ದ ಸಲಕರಣೆಯೊಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾಕ್ಕೆ ಸಂಪರ್ಕಗೊಳ್ಳುವ ಮೂಲಕ ಮತ್ತಷ್ಟು ಅಧ್ಯಯನ ಆಶಯಗಳನ್ನು ಹುಟ್ಟು ಹಾಕಿದೆ. ಚಂದ್ರನ ಮೇಲ್ಮೈನಲ್ಲಿ ಪ್ರತಿಷ್ಠಾಪಿಸಲ್ಪಟ್ಟಿದ್ದ ವಿಕ್ರಮ್ ಲ್ಯಾಂಡರ್‍ನಲ್ಲಿದ್ದ ಪ್ರಜ್ಞಾ ಉಪಗ್ರಹ ಒಂದಿಷ್ಟು ದಿನ ಕೆಲಸ ನಿರ್ವಹಿಸಿ ವಿದ್ಯುತ್ ಅಭಾವದಿಂದಾಗಿ ತಟಸ್ಥವಾಗಿತ್ತು. ಆದರೆ ಅದರಲ್ಲಿರುವ ಕೆಲವು ಸಲಕರಣೆಗಳು ಇನ್ನು ಸಕ್ರಿಯವಾಗಿದ್ದು, ಬಾಹ್ಯಾಕಾಶ ನೌಕೆಗಳಿಗೆ ಪದೇ ಪದೇ ಸಂಪರ್ಕಗೊಳ್ಳುತ್ತಿದೆ.

ಅದರ ಭಾಗವಾಗಿ ವಿಕಿರಣಗಳ ಹಿಮ್ಮುಖ ಪ್ರತಿಫಲಕ ಯಂತ್ರ-ಲೇಸರ್‍ರೆಟ್ರೊರಿಫ್ಲೆಕ್ಟರ್ ಹರೆ(ಎಲ್‍ಆರ್‍ಎ) ನಾಸಾದ ಚಂದ್ರನ ವಿಚಕ್ಷಣ ಕಕ್ಷೆಗಾಮಿಗೆ ಸಂಪರ್ಕಗೊಂಡಿದೆ. ಕಳೆದ ವರ್ಷದ ಜು.14ರಂದು ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ-3ರ ಗಗನ ನೌಕೆಯನ್ನು ಉಡಾವಣೆ ಮಾಡಿದರು. ಅದು ಆ.23ರಂದು ಚಂದ್ರನ ಮೇಲ್ಮೈನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಇಳಿದಿತ್ತು.

ಮೋದಿ ಮತ್ತೆ ಪ್ರಧಾನಿಯಾಗುತ್ತಾರೆ ; ಭವಿಷ್ಯ ನುಡಿದ ಅಮೆರಿಕನ್ ಗಾಯಕಿ

ಅದರಲ್ಲಿರುವ ಎಲ್‍ಆರ್‍ಎ ನಿಖರವಾದ ಬಿಂದುವಿನಲ್ಲಿ ಪ್ರತಿಷ್ಠಾಪನೆಗೊಂಡಿದೆ. ನಾಸಾದ ಕಕ್ಷೆಗಾಮಿ ಸಂಚರಿಸುವಾಗ ವಿಕಿರಣಗಳ ಮಿತಿಯ ವ್ಯಾಪ್ತಿಯಲ್ಲಿ ಡಿ.12ರಂದು ಪತ್ತೆಯಾಗಿದೆ.

ಇದರಿಂದಾಗಿ ಚಂದ್ರನನ್ನು ನಿರಂತರವಾಗಿ ರಾತ್ರಿ ವೇಳೆಯಲ್ಲೂ ಅಧ್ಯಯನ ಮಾಡಲು ಅವಕಾಶ ಸಿಕ್ಕಂತಾಗಿದೆ. ಪಶ್ಚಿಮ ದಿಕ್ಕಿನತ್ತ ಆರೋಹಣ ಕ್ರಮದಲ್ಲಿರುವ ಚಂದ್ರನಲ್ಲಿನ ವಿದ್ಯಾಮಾನಗಳನ್ನು ಎಲ್‍ಆರ್‍ಎಯಿಂದ ನಾಸಾದ ಕಕ್ಷೆಗಾಮಿ ಸಂಗ್ರಹಿಸಲಿದೆ ಎಂಬ ಮಾಹಿತಿ ಸಿಕ್ಕಿದೆ.