Saturday, June 22, 2024
Homeರಾಷ್ಟ್ರೀಯಚೀನಾದ ಅಪಾರ್ಟ್‌ಮೆಂಟ್‌ ಕಟ್ಟಡದಲ್ಲಿ ಸ್ಫೋಟ , ಒಬ್ಬರು ಸಾವು

ಚೀನಾದ ಅಪಾರ್ಟ್‌ಮೆಂಟ್‌ ಕಟ್ಟಡದಲ್ಲಿ ಸ್ಫೋಟ , ಒಬ್ಬರು ಸಾವು

ಬೀಜಿಂಗ್‌, ಮೇ 23- ಈಶಾನ್ಯ ಚೀನಾದ ಅಪಾರ್ಟ್‌ಮೆಂಟ್‌ ಕಟ್ಟಡದಲ್ಲಿ ಇಂದು ಬೆಳಿಗ್ಗೆ ಸಂಭವಿಸಿದ ಸ್ಫೋಟದಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ ಮೂವರು ಗಾಯಗೊಂಡಿದ್ದಾರೆ ಎಂದು ಇಲ್ಲಿ ರಾಜ್ಯಮಾಧ್ಯಮ ವರದಿ ಮಾಡಿದೆ.

ಹರ್ಬಿನ್‌ನಲ್ಲಿರುವ ಐದು ಅಂತಸ್ತಿನ ಅಪಾರ್ಟ್‌ಮೆಂಟ್‌ ಕಟ್ಟಡದ ಹಲವು ಭಾಗಗಳು ಹಾನಿಗೊಳಗಾಗಿದ್ದು, ಅಪಾರ್ಟ್‌ಮೆಂಟ್‌ನ ಬಾಲ್ಕನಿ ಸಂಪೂರ್ಣವಾಗಿ ಹಾರಿಹೋಗಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊಗಳು ತೋರಿಸಿವೆ. ನೈಸರ್ಗಿಕ ಅನಿಲ ಟ್ಯಾಂಕ್‌ ಸ್ಫೋಟದಿಂದ ಈ ದುರಂತ ಸಂಭವಿಸಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ರಾಜ್ಯ ಬೆಂಬಲಿತ ಮಾಧ್ಯಮವಾದ ಜಿಮು ನ್ಯೂಸ್‌‍ ಪ್ರಕಾರ, ಒಬ್ಬ ಮಹಿಳೆ ಸಾವನ್ನಪ್ಪಿದ್ದಾಳೆ. ಉಳಿದ ಮೂವರಿಗೆ ಗಾಯಗಳಿಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ತಿಳಿಸಿದ್ದಾರೆ.

ಸುಮಾರು ಬೆಳಿಗ್ಗೆ 7 ಗಂಟೆಗೆ ಸ್ಫೋಟ ಸಂಭವಿಸಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ತಿಳಿಸಿದೆ. ಹರ್ಬಿನ್‌ ಚೀನಾದ ಈಶಾನ್ಯ ಹೀಲಾಂಗ್‌ಜಿಯಾಂಗ್‌ ಪ್ರಾಂತ್ಯದ ರಾಜಧಾನಿಯಾಗಿದೆ.

RELATED ARTICLES

Latest News