Friday, May 3, 2024
Homeರಾಜ್ಯಪಟಾಕಿ ಘಟಕ ಸ್ಫೋಟ, ಹಲವರ ಸಾವು 40ಕ್ಕೂ ಹೆಚ್ಚುಮಂದಿಗೆ ಗಾಯ

ಪಟಾಕಿ ಘಟಕ ಸ್ಫೋಟ, ಹಲವರ ಸಾವು 40ಕ್ಕೂ ಹೆಚ್ಚುಮಂದಿಗೆ ಗಾಯ

ಭೋಪಾಲ್, ಫೆ.6: ಜಿಲ್ಲೆಯ ಹರ್ದಾ ಪಟ್ಟಣದ ಪಟಾಕಿ ಕಾರ್ಖಾನೆಯೊಂದರಲ್ಲಿ ಇಂದು ಬೆಳಿಗ್ಗೆ ಸಂಭವಿಸಿದ ಭಾರಿ ಅಗ್ನಿ ಅವಘಡದಲ್ಲಿ ಹಲವರು ಮೃತಪಟ್ಟು 40 ಮಂದಿ ಗಾಯಗೊಂಡಿದ್ದಾರೆ. ಘಟಕದ ಸುತ್ತಮುತ್ತ ಹಲವಾರು ಜನರು ಸಿಲುಕಿರುವ ಆತಂಕವಿದೆ ಎಂದು ಅವರು ಸ್ತಳೀಯ ಪೊಲೀಸರು ತಿಳಿಸಿದ್ದಾರೆ. ಘಟನೆಯ ಕೆಲವು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದ್ದು, ಪಟಾಕಿ ಸ್ಪೋಟಗೊಲ್ಳುತ್ತಿರುವ ಮತ್ತು ಜನರು ತಮ್ಮನ್ನು ರಕ್ಷಿಸಿಕೊಳ್ಳಲು ಓಡುತ್ತಿರುವ ದೃಶ್ಯಗಳು ಕಂಡುಬಂದಿದೆ.

ಬೆಂಕಿಯನ್ನು ನಂದಿಸಲು ಇಂದೋರ್ ಮತ್ತು ಭೋಪಾಲ್‍ನಿಂದ ಅಗ್ನಿಶಾಮಕ ದಳಗಳನ್ನು ಕೂಡ ಧಾವಿಸಿದ್ದು , ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಸ್ಥಳಕ್ಕೆ ಭೇಟಿ ನೀಡಿರುವ ಜಿಲ್ಲಾಧಿಕಾರಿ ರಿಷಿ ಗಾರ್ಗ್ ತಿಳಿಸಿದ್ದಾರೆ. ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಅವರು ದೂರವಾಣಿ ಮೂಲಕ ಅಧಿಕಾರಿಗಳೊಂದಿಗೆ ಅಗತ್ಯ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದಾರೆ. ಸಚಿವ ಉದಯ್ ಪ್ರತಾಪ್ ಸಿಂಗ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಜಿತ್ ಕೇಸರಿ ಮತ್ತು ಗೃಹರಕ್ಷಕ ದಳ ಮಹಾನಿರ್ದೇಶಕ ಅರವಿಂದ್ ಕುಮಾರ್ ಅವರು ಹೆಲಿಕಾಪ್ಟರ್ ಮೂಲಕ ಹರ್ದಾಗೆ ಧಾವಿಸಿದ್ದಾರೆ.

ಹಾಸನ-ಮೈಸೂರು ಹೆದ್ದಾರಿಯಲ್ಲಿ ಪುಂಡರ ವೀಲಿಂಗ್ ‘ಹುಚ್ಚಾಟ’

ಇಂದೋರ್, ಭೋಪಾಲ್ ಮತ್ತು ರಾಜ್ಯ ರಾಜಧಾನಿಯ ಏಮ್ಸ್‍ನಲ್ಲಿರುವ ಆಸ್ಪತ್ರೆಗಳಲ್ಲಿನ ಸುಟ್ಟಗಾಯಗಳ ಘಟಕಗಳಿಗೆ ತುರ್ತು ಪರಿಸ್ಥಿತಿಗೆ ಚಿಕಿತ್ಸೆಗೆ ಅಗತ್ಯ ವ್ಯವಸ್ಥೆಗಳನ್ನು ಮಾಡಲು ಸೂಚಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಭೆಯನ್ನೂ ಕರೆದಿದ್ದಾರೆ.

RELATED ARTICLES

Latest News