Saturday, September 14, 2024
Homeರಾಜ್ಯವಿಶ್ವಗುರು ಮಾಡುವುದೆಲ್ಲಾ ಬರಿ ಸ್ಟಂಟ್ ಅಷ್ಟೇ : ಬಿ.ಕೆ.ಹರಿಪ್ರಸಾದ್ ಲೇವಡಿ

ವಿಶ್ವಗುರು ಮಾಡುವುದೆಲ್ಲಾ ಬರಿ ಸ್ಟಂಟ್ ಅಷ್ಟೇ : ಬಿ.ಕೆ.ಹರಿಪ್ರಸಾದ್ ಲೇವಡಿ

ದೆಹಲಿ,ಫೆ.6- ಫ್ಯಾನ್ಸಿ ಡ್ರೆಸ್ ಹಾಕಿಕೊಂಡು ತಿರುಗುವವರಿಗೆ ವಿಪಕ್ಷಗಳು ಮಾಡುವುದೆಲ್ಲಾ ರಾಜಕೀಯ ಸ್ಟಂಟ್ ರೀತಿಯೇ ಕಾಣುತ್ತದೆ ಎಂದು ಕಾಂಗ್ರೆಸ್‍ನ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ ಲೇವಡಿ ಮಾಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರಿಗೆ ಅವರ ಪಕ್ಷದ ವಿಶ್ವಗುರು ಮಾಡುವುದೆಲ್ಲಾ ಸ್ಟಂಟ್ ಆಗಿರುವುದರಿಂದ ಬೇರೆಯವರನ್ನೂ ಅದೇ ರೀತಿ ಕಾಣಬಯಸುತ್ತಾರೆ. ಆದರೆ ಕಾಂಗ್ರೆಸ್‍ನವರು ಯಾವುದೇ ಸ್ಟಂಟ್ ಮಾಡುವುದಿಲ್ಲ ಎಂದು ಹೇಳಿದರು.

ಕೇಂದ್ರ ಸರ್ಕಾರದ ತಾರತಮ್ಯದ ವಿರುದ್ಧ ನಾಳೆ ದೆಹಲಿಯಲ್ಲಿ ಪ್ರತಿಭಟನೆಯನ್ನು ನಡೆಸಲಾಗುತ್ತಿದೆ. ಈ ಪ್ರತಿಭಟನೆಯನ್ನು ಬೆಂಗಳೂರಿನಲ್ಲಿಯೂ ಮಾಡಬಹುದಿತ್ತು. ಆದರೆ ಪಕ್ಷ ಮತ್ತು ಸರ್ಕಾರ ದೆಹಲಿಯಲ್ಲೇ ಪ್ರತಿಭಟನೆ ಮಾಡುವ ನಿರ್ಧಾರ ತೆಗೆದುಕೊಂಡಿದೆ. ಅದರಲ್ಲಿ ತಾವು ಭಾಗವಹಿಸುವುದಾಗಿ ತಿಳಿಸಿದರು.

ಕೇಜ್ರಿವಾಲ್ ಆಪ್ತ, ರಾಜ್ಯಸಭಾ ಸದಸ್ಯ ಸೇರಿ ಹಲವರ ಮನೆಗಳ ಮೇಲೆ ಇಡಿ ರೇಡ್

ಬಿಜೆಪಿಗರು ಪ್ರತಿಭಟನೆಯನ್ನು ವಿರೋಧಿಸುವ ಬದಲು ರಾಜ್ಯಕ್ಕಾಗುತ್ತಿರುವ ಅನ್ಯಾಯದ ವಿರುದ್ಧ ಮಾತನಾಡಲು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್‍ನಲ್ಲಿ ರಾಜ್ಯವನ್ನು ಸಂಪೂರ್ಣವಾಗಿ ಕಡೆಗಣಿಸಿ ಮಲತಾಯಿ ಧೋರಣೆಯನ್ನು ಅನುಸರಿಸಲಾಗಿದೆ. ಇದರ ಬಗ್ಗೆ ಬಿಜೆಪಿಯವರು ಏಕೆ ಧ್ವನಿ ಎತ್ತುತ್ತಿಲ್ಲ ಎಂದು ಪ್ರಶ್ನಿಸಿದರು.

ಹಣಕಾಸು ಆಯೋಗಗಳು ನಿಯಮಾನುಸಾರ ಅನುದಾನ ಹಂಚಿಕೆ ಮಾಡಬೇಕಿತ್ತು. ಆದರೆ ಕೇಂದ್ರದ ಹಸ್ತಕ್ಷೇಪದಿಂದ ರಾಜ್ಯಕ್ಕೆ ದೊರೆಯುವ ಪಾಲು ಕಡಿಮೆಯಾಗಿದೆ. ಕರ್ನಾಟಕಕ್ಕೆ ನೂರು ರೂಪಾಯಿ ಪೈಕಿ ಹದಿಮೂರು ರೂಪಾಯಿ ಮಾತ್ರ ವಾಪಸ್ ನೀಡಲಾಗುತ್ತಿದೆ. ಅದೇ ಬಿಹಾರಕ್ಕೆ 900 ರೂಪಾಯಿ ಕೊಡುತ್ತಿರುವುದೇಕೆ ಎಂಬುದಷ್ಟೇ ನಮ್ಮ ಪ್ರಶ್ನೆ. ತಾರತಮ್ಯವನ್ನು ಸರಿಪಡಿಸಿದರೆ ಚರ್ಚೆಯೇ ಇರುತ್ತಿರಲಿಲ್ಲವಲ್ಲಾ ಎಂದು ಹೇಳಿದರು.

RELATED ARTICLES

Latest News