Thursday, February 29, 2024
Homeರಾಜ್ಯಹೈವೆ ರಸ್ತೆಗಳಲ್ಲಿ ಸುಲಿಗೆ, ನಾಲ್ವರು ಖಾಕಿ ಬಲೆಗೆ

ಹೈವೆ ರಸ್ತೆಗಳಲ್ಲಿ ಸುಲಿಗೆ, ನಾಲ್ವರು ಖಾಕಿ ಬಲೆಗೆ

ಬೆಂಗಳೂರು,ಡಿ.29- ರಾಷ್ಟ್ರೀಯ ಹೆದ್ದಾರಿ ರಸ್ತೆಗಳಲ್ಲಿ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ದ್ವಿಚಕ್ರ ವಾಹನದಲ್ಲಿ ವ್ಹೀಲಿಂಗ್ ಮಾಡುತ್ತಾ ಸಾರ್ವಜನಿಕರಲ್ಲಿ ಭಯವನ್ನುಂಟು ಮಾಡುತ್ತಿದ್ದ ಮತ್ತು ರಾತ್ರಿವೇಳೆ ಮೊಬೈಲ್ ಪೋನ್‍ಗಳು, ಹಣ ದೋಚುತ್ತಿದ್ದ ಹಾಗೂ ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ನೆಲಮಂಗಲ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿ ನಾಲ್ಕು ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳಿಂದ ವಿವಿಧ ಕಂಪನಿಯ 17 ಆಂಡ್ರಾಯ್ಡ್ ಮೊಬೈಲ್ ಫೋನ್‍ಗಳು 1 ಕೆಜಿ 200 ಗ್ರಾಂ ತೂಕದ ಗಾಂಜಾ ಹಾಗೂ ಆರೋಪಿಗಳು ವಿಲಿಂಗ್ ಮಾಡಲು ಹಾಗೂ ಸುಲಿಗೆ ಮಾಡಲು ಉಪಯೋಗಿಸಿದ್ದ ಡಿಯೋ ಸ್ಕೂಟರ್‍ಗಳು ಹಾಗೂ ಒಂದು ಚಾಕು, ಒಂದು ಡ್ರ್ಯಾಗನ್ ಸೇರಿ ಒಟ್ಟು ಸುಮಾರು 4 ಲಕ್ಷ ಮೌಲ್ಯದ ವಸು ್ತಗಳನ್ನು ವಶ ಪಡಿಸಿಕೊಳ್ಳಲಾಗಿದೆ.

ನೆಲಮಂಗಲ ತಾಲ್ಲೂಕ್, ಹುಚ್ಚೇಗೌಡನಪಾಳ್ಯದ ಖಾಲ್ಸಾ ಪಂಜಾಬಿ ಡಾಬಾ ಹಿಂಭಾಗದಲ್ಲಿರುವ ಲಾರಿ ಪಾರ್ಕಿಂಗ್ ಸ್ಥಳದಲ್ಲಿ ಯಾರೋ 3-4 ಜನರು ಗಾಂಜಾವನ್ನು ಚಿಕ್ಕ ಚಿಕ್ಕ ಪ್ಯಾಕೇಟ್‍ಗಳಲ್ಲಿ ತುಂಬಿ ಮಾರಾಟ ಮಾಡಲು ಪ್ರಯತ್ನಿಸುತ್ತಿರುತ್ತಾರೆಂದು ಬಂದ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿ ನಾಲ್ವರನ್ನು ಬಂಧಿಸಿ ಗಾಂಜಾ, ಸ್ಕೂಟರ್ ಹಾಗೂ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.

‘ಮೋದಿ ಮತ್ತೆ ಬರಲಿದ್ದಾರೆ’ ಎಂಬ ಘೋಷ ವಾಕ್ಯದೊಂದಿಗೆ ಅಖಾಡಕ್ಕೆ ಧುಮುಕಿದ ಬಿಜೆಪಿ

ಆರೋಪಿಗಳು ಡಿಯೋ ಸ್ಕೂಟರ್‍ಗಳಲ್ಲಿ ಹೈವೆ ರಸ್ತೆಗಳಲ್ಲಿ ಕೈಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ತಮ್ಮ ದ್ವಿ-ಚಕ್ರ ವಾಹನಗಳನ್ನು ಅತಿವೇಗವಾಗಿ ಮಾನವನ ಪ್ರಾಣಕ್ಕೆ ಅಪಾಯವಾಗುವಂತೆ ಮತ್ತು ನಿರ್ಲಕ್ಷತೆಯಿಂದ ಚಾಲನೆ ಮಾಡಿಕೊಂಡು ಸಾರ್ವಜನಿಕರ ನೆಮ್ಮದಿಗೆ ಭಂಗವಾಗುವಂತೆ ಮತ್ತು ಸಾರ್ವಜನಿಕರಿಗೆ ಭಯವುಂಟಾ ಗುವಂತೆ ವಾಹನಗಳನ್ನು ವಿಲಿಂಗ್ ಮಾಡಿರುವುದು ತಿಳಿದುಬಂದಿರುತ್ತದೆ.

ಪ್ರಕರಣದ ಆರೋಪಿಗಳ ಪತ್ತೆಯ ಬಗ್ಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ಅೀಧಿಕ್ಷಕರಾದ ಮಲ್ಲಿಕಾರ್ಜುನ್ ಬಾಲದಂಡಿ., ಅವರ ನೇತೃತ್ವದಲ್ಲಿ ರಚಿಸಲಾಗಿದ್ದ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

RELATED ARTICLES

Latest News