Saturday, February 24, 2024
Homeರಾಷ್ಟ್ರೀಯ'ಮೋದಿ ಮತ್ತೆ ಬರಲಿದ್ದಾರೆ' ಎಂಬ ಘೋಷ ವಾಕ್ಯದೊಂದಿಗೆ ಅಖಾಡಕ್ಕೆ ಧುಮುಕಿದ ಬಿಜೆಪಿ

‘ಮೋದಿ ಮತ್ತೆ ಬರಲಿದ್ದಾರೆ’ ಎಂಬ ಘೋಷ ವಾಕ್ಯದೊಂದಿಗೆ ಅಖಾಡಕ್ಕೆ ಧುಮುಕಿದ ಬಿಜೆಪಿ

ನವದೆಹಲಿ,ಡಿ.29-ಮುಂಬರುವ ಲೋಕಸಭೆ ಚುನಾವಣೆಗೆ ರಣಕಹಳೆ ಮೊಳಗಿಸಿರುವ ಬಿಜೆಪಿ ಫಿರ್ ಆಯೇಗಾ ಮೋದಿ (ಮೋದಿ ಮತ್ತೆ ಬರಲಿದ್ದಾರೆ) ಎಂಬ ಘೋಷ ವಾಕ್ಯದೊಂದಿಗೆ ಅಖಾಡಕ್ಕೆ ಧುಮುಕಲಿದೆ. 2014ರ ಲೋಕಸಭಾ ಚುನಾವಣೆಯಲ್ಲಿ ಚಾಯಿ ಪೆ ಚರ್ಚಾ, 2019 ರಲ್ಲಿ ಆಪ್ ಕಿ ಬಾರ್ ಮೋದಿ ಸರ್ಕಾರ್ ಎಂಬ ಘೋಷವಾಕ್ಯದೊಂದಿಗೆ ಚುನಾವಣೆಯಲ್ಲಿ ಗೆದ್ದು ಬಂದಿದ್ದ ಬಿಜೆಪಿ ಈ ಬಾರಿ ಫಿರ್ ಆಯೇಗಾ ಮೋದಿ ಎಂಬ ಘೋಷ ವಾಕ್ಯವನ್ನು ಸಿದ್ಧಪಡಿಸಿದೆ.

ಸದ್ಯದಲ್ಲೇ ಸಾಮಾಜಿಕ ಜಾಲತಾಣದಲ್ಲಿ ಇದು ಬಿತ್ತರವಾಗಲಿದ್ದು, ದೇಶಕ್ಕೆ ಮೋದಿಯೇ ಪರಿಹಾರ ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಡಲು ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ವಿಶ್ವದಲ್ಲೇ ಅತೀ ಹೆಚ್ಚು ಪ್ರಮಾಣದ ಬೆಂಬಲಿಗರನ್ನು ಹೊಂದಿದ್ದಾರೆ. ಇದನ್ನು ಮತಗಳನ್ನಾಗಿ ಪರಿವರ್ತಿಸುವ ಲೆಕ್ಕಾಚಾರದಲ್ಲಿ ಕಮಲ ಪಡೆ ನಾಯಕರಿದ್ದಾರೆ.

2014 ರಿಂದ 2024 ರವರೆಗೆ ಮೋದಿ ಪ್ರಧಾನಿಯಾದ ಮೇಲೆ ಕೇಂದ್ರದಲ್ಲಿ ಜಾರಿ ಮಾಡಿರುವ ಯೋಜನೆಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಯಥೇಚ್ಛವಾಗಿ ಬಳಸಿಕೊಂಡು ಮೂರನೇ ಬಾರಿಗೆ ಅಧಿಕಾರ ಹಿಡಿಯುವ ರಣತಂತ್ರವನ್ನು ರೂಪಿಸಲಾಗಿದೆ. ವಿಶೇಷವಾಗಿ ಈ ಬಾರಿಯ ಚುನಾವಣೆಯಲ್ಲಿ ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ಸಂವಿಧಾನದ 370 ನೇ ವಿಯನ್ನು ರದ್ದುಪಡಿಸಿರುವುದು ಹಾಗೂ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರದ ತೀರ್ಮಾನವನ್ನು ಎತ್ತಿಹಿಡಿದಿರುವುದು ಚುನಾವಣೆಯ ಪ್ರಮುಖ ಅಸ್ತ್ರವಾಗಲಿದೆ.

ನಾಳೆ ಅಯೋಧ್ಯೆಗೆ ಮೋದಿ ಭೇಟಿ, 11,100 ಕೋಟಿ ರೂ. ಮೊತ್ತದ ಯೋಜನೆಗಳ ಉದ್ಘಾಟನೆ

ಜೊತೆಗೆ ಜನವರಿ 22 ರಂದು ಅಯೋಧ್ಯೆಯಲ್ಲಿ ಲೋಕಾರ್ಪಣೆಗೊಳ್ಳುತ್ತಿರುವ ಶ್ರೀರಾಮಮಂದಿರ ನಿರ್ಮಾಣವು ಬಿಜೆಪಿಯ ಪ್ರಚಾರದ ಸರಕಾಗಲಿದೆ. ಮೋದಿಯವರು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿದ್ದರಿಂದ 370 ನೇ ವಿಧಿ ರದ್ದು ಹಾಗೂ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡಲು ಸಾಧ್ಯವಾಯಿತು. ಮತ್ತೊಂದು ಬಾರಿ ಅಧಿಕಾರ ನೀಡಿದರೆ ದೇಶಾದ್ಯಂತ ಎಲ್ಲರಿಗೂ ಸಮಾನ ನಾಗರಿಕ ನೀತಿ ಸಂಹಿತೆಗಳನ್ನು ಜಾರಿ ಮಾಡುವ ಕಾಯ್ದೆಯನ್ನು ಅನುಷ್ಠಾನ ಮಾಡುತ್ತೇವೆ ಎಂಬ ಭರವಸೆಯನ್ನು ಪ್ರಣಾಳಿಕೆಯಲ್ಲಿ ಬಿಜೆಪಿ ಸೇರ್ಪಡೆ ಮಾಡಲಿದೆ.

ಮೂಲಗಳ ಪ್ರಕಾರ ಜನವರಿ ತಿಂಗಳ ಅಂತ್ಯಕ್ಕೆ ಸುಮಾರು 300 ಕ್ಕೂ ಹೆಚ್ಚು ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಲು ಸಿದ್ಧತೆ ನಡೆಸಲಾಗಿದೆ. ಗೆದ್ದೇ ಗೆಲ್ಲುವ ಕ್ಷೇತ್ರಗಳಲ್ಲಿ ಚುನಾವಣಾ ದಿನಾಂಕ ಘೋಷಣೆಯಾಗುವ ಮೊದಲೇ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿ ದೇಶಾದ್ಯಂತ ಸುಮಾರು 300 ಕ್ಕೂ ಹೆಚ್ಚು ಮೆಗಾರ್ಯಾಲಿಗಳನ್ನು ಮೋದಿ ನಡೆಸಲು ಉದ್ದೇಶಿಸಿದ್ದಾರೆ.

ದಾಖಲೆ ನಿರ್ಮಾಣ :
ಒಂದು ವೇಳೆ 2024 ರಲ್ಲಿ ಮೋದಿಯವರು ಈಗಿರುವ ಸಮೀಕ್ಷೆಯಂತೆ ಮೂರನೇ ಬಾರಿ ಅಧಿಕಾರ ಹಿಡಿದರೆ ಭಾರತದ ಮಟ್ಟಿಗೆ ಅದೊಂದು ದಾಖಲೆಯಾಗಲಿದೆ. ಕೇಂದ್ರದಲ್ಲಿ ಸತತವಾಗಿ ಮೂರನೇ ಬಾರಿಗೆ ಒಂದೇ ಪಕ್ಷ ಅಧಿಕಾರ ಹಿಡಿದು 15 ವರ್ಷಗಳ ಕಾಲ ಪ್ರಧಾನಿಯಾದ ದಾಖಲೆ ದೇಶದ ಮೊದಲ ಪ್ರಧಾನಿ ಜವಹರಲಾಲ್ ನೆಹರೂ ಹೆಸರಿನಲ್ಲಿದೆ.

ಅಯೋಧ್ಯೆ ವಿಮಾನ ನಿಲ್ದಾಣಕ್ಕೆ ಮಹರ್ಷಿ ವಾಲ್ಮೀಕಿ ಹೆಸರು

ಇದೀಗ ಮೋದಿ 2024 ರಲ್ಲಿ ಗೆದ್ದು ಮತ್ತೊಮ್ಮೆ ದೇಶದ ಚುಕ್ಕಾಣಿ ಹಿಡಿದರೆ ನೆಹರೂ ದಾಖಲೆಯನ್ನು ಸರಿಗಟ್ಟಲಿದ್ದಾರೆ. 400 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲುವ ಗುರಿಯೊಂದಿಗೆ ಬಿಜೆಪಿ ಲೋಕಸಭಾ ಸಮರಕ್ಕೆ ಧುಮುಕಲು ಸಜ್ಜಾಗುತ್ತಿದೆ.

RELATED ARTICLES

Latest News