Saturday, February 24, 2024
Homeರಾಜ್ಯಹೂಡಿಕೆಯ ನೆಪದಲ್ಲಿ ನಾಡು-ನುಡಿ ಕಡೆಗಣನೆ : ಮುಖ್ಯಮಂತ್ರಿ ಚಂದ್ರು ಆಕ್ರೋಶ

ಹೂಡಿಕೆಯ ನೆಪದಲ್ಲಿ ನಾಡು-ನುಡಿ ಕಡೆಗಣನೆ : ಮುಖ್ಯಮಂತ್ರಿ ಚಂದ್ರು ಆಕ್ರೋಶ

ಬೆಂಗಳೂರು,ಡಿ.29- ಬಂಡವಾಳ ಹೂಡಿಕೆಯ ನೆಪದಲ್ಲಿ ರಾಜ್ಯಸರ್ಕಾರ ಕನ್ನಡ ನಾಡು-ನುಡಿ, ಸಂಸ್ಕøತಿಯನ್ನು ಕಡೆಗಣಿಸುತ್ತಿದೆ ಎಂದು ಅಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನುಡಿದಂತೆ ನಡೆದಿದ್ದೇವೆ ಎಂದು ಹೇಳಿಕೊಳ್ಳುತ್ತಿರುವುದು ಹಾಸ್ಯಾಸ್ಪದ. ರಾಜ್ಯದಲ್ಲಿ ಕನ್ನಡ ಬಳಕೆ ಸಂಪೂರ್ಣ ಕಡೆಗಣನೆಗೆ ಒಳಗಾಗಿದೆ. ಸಚಿವರು ಆಂಗ್ಲಭಾಷೆಯಲ್ಲೇ ವ್ಯವಹಾರ ನಡೆಸುತ್ತಿದ್ದಾರೆ. ನಾರಾಯಣಗೌಡ ಮತ್ತು ಅವರ ಬಣದ ಕಾರ್ಯಕರ್ತರ ಹೋರಾಟ ಜೈಲಿಗೆ ಕಳುಹಿಸುವಂತಹ ಹೋರಾಟವಾಗಿರಲಿಲ್ಲ. ಕನ್ನಡ ದ್ರೋಹಿಯಾಗಿರುವ ಸರ್ಕಾರ ಉದ್ದೇಶಪೂರ್ವಕವಾಗಿ ಕ್ರಮ ಕೈಗೊಂಡಿದೆ ಎಂದು ಆರೋಪಿಸಿದರು.

ನಾಳೆ ಅಯೋಧ್ಯೆಗೆ ಮೋದಿ ಭೇಟಿ, 11,100 ಕೋಟಿ ರೂ. ಮೊತ್ತದ ಯೋಜನೆಗಳ ಉದ್ಘಾಟನೆ

ಬಲಿತ ಅವರು ಬಂಡವಾಳಶಾಹಿಗಳಿಗೆ ಬೆಂಬಲ ನೀಡುತ್ತಾರೆ. ಹೊರಗಿನಿಂದ ಬಂದವರಿಗೆ ಅವರು ಕೊಡುವ ಹಣವನ್ನು ತೆಗೆದುಕೊಂಡು ವಿವಿಧ ವಿನಾಯಿತಿಗಳನ್ನು ನೀಡಿ, ಇಲ್ಲಿ ಬದುಕಲು ಅವಕಾಶ ಮಾಡಿಕೊಡಲಾಗುತ್ತದೆ. ಈ ಮೊದಲು ಶೇ. 40 ರಷ್ಟು ಕಮಿಷನ್ ಪಡೆಯಲಾಗಿದ್ದು, ಈಗ ಅದಕ್ಕಿಂತಲೂ ಹೆಚ್ಚಿನ ಹಣ ಲೂಟಿ ಹೊಡೆಯುವ ಸಲುವಾಗಿ ಬಂಡವಾಳಶಾಹಿಗಳಿಗೆ ಒತ್ತು ನೀಡಲಾಗುತ್ತಿದೆ ಎಂದು ದೂರಿದರು.

ನಾಮಫಲಕಗಳಲ್ಲಿ ಶೇ. 60 ರಷ್ಟು ಕನ್ನಡ ಬಳಕೆಯಾಗಬೇಕು ಎಂಬ ಸುಗ್ರೀವಾಜ್ಞೆಯನ್ನು ಸಿದ್ದರಾಮಯ್ಯನವರು ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಏಕೆ ಜಾರಿಗೆ ತರಲಿಲ್ಲ ಎಂದು ಪ್ರಶ್ನಿಸಿದರು.

RELATED ARTICLES

Latest News